ಸೂಪರ್ ಚಾನಲ್‍ನಲ್ಲಿ ಇಂದಿನಿಂದ ಮಸ್ತ್ “ಮಜಾಭಾರತ”

ಸೂಪರ್‍ ಚಾನಲ್‍ನಲ್ಲಿ ಕಾಮಿಡಿ ಶೋ “ಮಜಾಭಾರತ” ಸೋಮವಾರದಿಂದ ಬುಧವಾರದವರೆಗೆ ಇಂದಿನಿಂದ  6 ರಿಂದರಾತ್ರಿ 9 ಗಂಟೆಗೆ.

majabharata logo ವಯಾಕಾಮ್18 ಸಂಸ್ಥೆಯಡಿಯಲ್ಲಿ ಪ್ರಾರಂಭವಾದ ಮತ್ತೊಂದು ಕನ್ನಡಚಾನೆಲ್ ಸೂಪರ್ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದೆ. ಬಿಗ್‍ಬಾಸ್ ಸೀಸನ್4 ಕೊನೆಯ ಎರಡು ವಾರಗಳು ಪ್ರಸಾರ ಮಾಡಿ ವೀಕ್ಷಕರಿಗೆ ಮತ್ತಷ್ಟು ಹತ್ತಿರವಾಗಿದೆ. ಸೂಪರ್‍ಚಾನೆಲ್‍ನಲ್ಲಿ ಈಗ ಹೊಸ ಕಾರ್ಯಕ್ರಮಗಳ ಸಾಲೇ ತಯಾರಾಗುತ್ತಿದೆ.

“ಮಜಾಭಾರತ” ಹಹಹ…ಕಿಲಕಿಲ…ಓಹೋಹೋಹೋ…

majabharatha anchorsಹೆಸರೇ ಹೇಳುವಂತೆ ನಕ್ಕು ನಗಿಸುವ ಕಾರ್ಯಕ್ರಮ. ಯಾಂತ್ರಿಕಜಗತ್ತಿನಲ್ಲಿ, ಗಡಿಬಿಡಿಯ ಜೀವನ ಸಾಗಿಸುತ್ತಾ ನಗುವನ್ನೇ ಮರೆತು ಬ್ಯುಸಿ ಲೈಫ್‍ನಲ್ಲೇ ಮುಳುಗಿದ್ದೇವೆ. ಇಡೀ ದಿನದ ಒತ್ತಡದಿಂದ ಹೊರಬರುವಂತೆ ಮಾಡುವ ಉದ್ದೇಶದಿಂದ ಕಿರುತೆರೆಗೆ ಪರಿಚಯಿಸುತ್ತಿರುವ ಹೊಚ್ಚ ಹೊಸ ಕಾರ್ಯಕ್ರಮ ಮಜಾಭಾರತ.

ಮಜಾಭಾರತದ ಮಹಾಯಾನ  ?
ಕಾಮಿಡಿ ಶೋ ಮಜಾಭಾರತ ಕಾರ್ಯಕ್ರಮ ಪ್ರಾರಂಭಿಸುವ ಮೊದಲು ಕರ್ನಾಟಕದಾದ್ಯಂತ ಹಾಸ್ಯ ಪ್ರತಿಭೆಗಳಿಗಳಿಗಾಗಿ ಅನ್ವೇಷಣೆ ನಡೆಸಿ 24 ಜನರನ್ನುಆಯ್ಕೆ ಮಾಡಿ ಅವರನ್ನು 6 ತಂಡಗಳಾಗಿ ವಿಂಗಡಿಸಲಾಗಿದೆ. ಹಾಸ್ಯದ ವಿಭಿನ್ನ ಪ್ರಾಕಾರಗಳನ್ನು ವೀಕ್ಷಕರಿಗೆ ಉಣಬಡಿಸುವ ಕಾರ್ಯಕ್ರಮ ಇದಾಗಿದೆ. ಕರಾವಳಿಯ ಚೆಲುವೆ ಶೀತಲ್‍ಶೆಟ್ಟಿ ಹಾಗೂ ಮಾತಿನ ಮಾಂತ್ರಿಕ ನಿರಂಜನ್‍ದೇಶಪಾಂಡೆಕಾರ್ಯಕ್ರಮದ ನಿರೂಪಕರಾಗಿದ್ದಾರೆ. ಕನ್ನಡದ ಪ್ರಖ್ಯಾತ ಬಹುಭಾಷಾ ನಟಿ ಶ್ರುತಿ ಹಾಗೂ ನಟ-ನಿರ್ದೇಶಕ, ಕಲಾಸಾಮ್ರಾಟ್‍ಎಸ್.ನಾರಾಯಣ್‍ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

Parameshwar-Gundkalಕಲರ್ಸ್‍ಕನ್ನಡ ಹಾಗೂ ಸೂಪರ್ ವಾಹಿನಿಯ ಬ್ಯುಸಿನೆಸ್ ಹೆಡ್ ಪರಮೇಶ್ವರ್‍ಗುಂಡ್ಕಲ್ ಹೇಳುವಂತೆ, “ಇತ್ತೀಚೆಗಷ್ಟೇ ಪ್ರಾರಂಭವಾದ ಸೂಪರ್ ವಾಹಿನಿಯು ಬೆಳವಣಿಗೆಯ ಹಂತದಲ್ಲಿ ಸಾಗುತ್ತಿರುವುದು ಹೆಮ್ಮೆಯ ಸಂಗತಿ. ಬಿಗ್‍ಬಾಸ್ ಸೀಸನ್ 4ರ ಕೊನೆಯ ಎರಡು ವಾರಗಳನ್ನು ಪ್ರಸಾರ ಮಾಡಿದ್ದು ವೀಕ್ಷಕರನ್ನು ಹೆಚ್ಚಿಸಿದೆ. ಮಜಾಭಾರತ ಕಾರ್ಯಕ್ರಮದ ಮೂಲಕ ನಾವು ಹೊಸ ಪ್ರಕಾರದ ಕಾರ್ಯಕ್ರಮವನ್ನು ಸೂಪರ್‍ನಲ್ಲಿ ಪರಿಚಯಿಸುತ್ತಿರುವುದಕ್ಕೆ ತುಂಬಾ ಖುಷಿ ಇದೆ. ಮಜಾಭಾರತ ಕಾರ್ಯಕ್ರವನ್ನು ವೀಕ್ಷಕರು ನಗುತ್ತಲೇ ಸ್ವೀಕರಿಸುತ್ತಾರೆ ಎಂಬ ವಿಶ್ವಾಸ ನಮ್ಮದು.”
ಸೂಪರ್ ವಾಹಿನಿಯ ಪ್ರೋಗ್ರಾಮಿಂಗ್ ಹೆಡ್, ವೈಷ್ಣವಿ ಹೆಚ್.ಎಸ್. ಹೇಳುವಂತೆ: “ಸೂಪರ್‍ಚಾನೆಲ್ ಲಾಂಚ್‍ನಲ್ಲೇ ನಮಗಿದ್ದಕಮಿಟ್ಮೆಂಟ್ ಭಿನ್ನ ಭಿನ್ನ ಶೈಲಿಯ ಕಾರ್ಯಕ್ರಮಗಳನ್ನು ಕೊಡುವುದಾಗಿತ್ತು. ಅದರಂತೆಯೆ ಪೌರಾಣಿಕಕತೆ, ರೋಮ್ಯಾಂಟಿಕ್‍ಕಾಮಿಡಿ ಸ್ಟೋರಿ ಹೀಗೆ ವೈವಿಧ್ಯವಾದ ಕಥಾವಸ್ತುಗಳನ್ನು ನೀಡುತ್ತಾ ಬಂದಿದ್ದೇವೆ ಮತ್ತು ಅವು ವೀಕ್ಷಕರ ಮನದಾಳ ತಲುಪಿವೆ. ಮಜಾಭಾರತಕ್ಕೆ ನಮ್ಮತಂಡ ಸಾಕಷ್ಟು ಪೂರ್ವ ಸಿದ್ಧತೆ ಮಾಡಿಕೊಂಡಿದ್ದು, ಈಗಾಗಲೇ ನಮಗೆ ಅತ್ಯುತ್ತಮ ಪ್ರತಿಕ್ರಿಯೆಗಳು ಬರುತ್ತಿವೆ. ಮಜಾಭಾರತ ವೀಕ್ಷಕರನ್ನು ನಗಿಸುವಲ್ಲಿ ಯಶಸ್ವಿಯಾಗುತ್ತದೆ ಹಾಗೂ ತನ್ನ ವೈಶಿಷ್ಟ್ಯತೆಯ ಛಾಪು ಮೂಡಿಸುವ ಬಗ್ಗೆ ನಮಗೆ ಅಪಾರ ನಂಬಿಕೆ ಇದೆ.”

ಸೂಪರ್ ಕಾರ್ಯಕ್ರಮಗಳನ್ನು ವೀಕ್ಷಿಸಲು ಮಿಸ್ ಮಾಡದೇ ಟ್ಯೂನ್ ಮಾಡಿ ಸೂಪರ್‍ಚಾನೆಲ್ ಫೆಬ್ರವರಿ 6  ಅಂದ್ರೆ ಇವತ್ತೇ  ರಾತ್ರಿ 9 ಗಂಟೆಗೆ.

-Ad-

Leave Your Comments