ರಿಯಲ್ ರಂಜನೆ, ರಿಯಲ್ ಚಿಂತನೆ! ರಿಯಾಲಿಟಿ ಷೋಗೆ ರೆಡಿಯಾಗಿ

ರಂಜನೆ, ಚಿಂತನೆ ಎರಡೂ ಇರುವ ಹೊಸ ರಿಯಾಲಿಟಿ ಷೋ…ಹೊಸ ಬಗೆಯದು ಇಷ್ಟರಲ್ಲೇ.‌‌..

ಇಂಥದೊಂದು ಸುದ್ದಿಯನ್ನ ಮಧ್ಯರಾತ್ರಿಯಲ್ಲಿ ಹರಿಯಬಿಟ್ಟು ರಿಯಾಕ್ಷನ್ ನೋಡ್ತಾ ಇದ್ದಾರೇನೋ ನಮ್ಮ ಮಧ್ಯಮ ವರ್ಗದ ಮಿತ್ರ ಟಿ ಎನ್ ಸೀತಾರಾಮ್ . ಸದ್ಯದಲ್ಲಂತೂ ಟೀವಿಯಲ್ಲಿ  ಬರುತ್ತಿರುವ ಅನೇಕ  ರಿಯಾಲಿಟಿ ಶೋಗಳಿಂದ ಬೇಸತ್ತು ಹೋಗಿದ್ದರೂ ಪರ್ಯಾಯವಿಲ್ಲದೆ ಅಂಥವನ್ನೇ ನೋಡುವ ಮಂದಿಗೆ ಟಿ ಎನ್ ಎಸ್  ಮತ್ತೆ ಟಿವಿಗೆ ಬರ್ತಾರೆ ಅದೂ ರಿಯಾಲಿಟಿ ಶೋ ಮೂಲಕ ಅನ್ನುವುದು ಸಂತಸದ ಸುದ್ದಿ .

ರಿಯಾಲಿಟಿ ಶೋಗೆ ತಮ್ಮ ರಿಯಲ್ ಯೋಜನೆಗಳೇನು ಸಿಎಸ್ಪಿ ಸಾಹೇಬರೇ ಅಂತ ciniadda.com ಕೇಳಿದಾಗ ..

ಅದೂ ನಮ್ಮ ಸಂಸೃತಿಗೆ , ಭಾಷೆಗೆ ಸಂಬಂಧಪಟ್ಟ ಕಾರ್ಯಕ್ರಮ ಆಗಿರುವುದಂತೂ ಗ್ಯಾರಂಟಿ .

ಯಾವ ವಾಹಿನಿಯ ಮೂಲಕ ತಮ್ಮ ಮರುಪ್ರವೇಶ ?

ಅದಿನ್ನೂ ನಿರ್ಧಾರವಾಗಿಲ್ಲ .

ತಂಡದಲ್ಲಿ ಯಾರ್ಯಾರು ಇದ್ದೀರಿ ?

ನಮ್ಮ ಕೂಸು ಈಗ ತಾನೇ ಹುಟ್ಟಿದೆ .ಹಾಲುಣಿಸುವವರು , ನೀರೆರೆಯುವವರು , ಬಟ್ಟೆ ತೊಡಿಸುವವರು, ಹೆಸರಿಡುವವರು  ಹೀಗೆ ಸಿಂಗಾರ ಬಂಗಾರ ಮಾಡೋವ್ರೆಲ್ಲ ಸೇರಿಕೊಳ್ಳಬೇಕಿದೆ . ಕಾನ್ಸೆಪ್ಟ್ ನನ್ನದೇ. ಕಾರ್ಯರೂಪಕ್ಕೆ ಇಳಿಯುತ್ತಿದ್ದೇವೆ ನಮ್ಮ ಭೂಮಿಕಾ ಸಂಸ್ಥೆಯ ಮೂಲಕ.  ಒಂದೀಡೀ ಕುಟುಂಬ ಕೂತು ನೋಡುವ ಕಾರ್ಯಕ್ರಮವಂತೂ ನಮ್ಮದಾಗಿರುತ್ತದೆ. ಉಳಿದ ವಿಷಯಗಳನ್ನ ಸದ್ಯದಲ್ಲೇ ತಿಳಿಸುವೆ .

ಕಿರುತೆರೆಯ ಸಂಕಲನದಿಂದ ಮಹಾಪರ್ವದವರೆಗೆ ಬೆಳ್ಳಿತೆರೆಯ ಪಲ್ಲವಿಯಿಂದ ವಾಸ್ತು ಪ್ರಕಾರದವರೆಗೆ ಅಭಿನಯ , ಸಂಭಾಷಣೆ , ನಿರ್ದೇಶನ , ನಿರ್ಮಾಣ ಎಲ್ಲದರಲ್ಲೂ ಪಳಗಿರುವ ಸೀತಾರಾಮ್ ತಮಗೆ ಒಲಿದ ವರ್ಗದ ಜೊತೆಗೆ ಬದಲಾದಂತೆ ಮೇಲ್ನೋಟಕ್ಕೆ ಕಾಣುವ  ಇನ್ನಿತರ ಪ್ರೇಕ್ಷಕರ ನಿರೀಕ್ಷೆಗಳನ್ನು ಮುಟ್ಟುವರೇ ಅನ್ನುವ ಕುತೂಹಲ ಒಂದು ಕಡೆ .  ಮತ್ತೊಂದು ಕಡೆ ನಮ್ಮತನ ಸಾರುವ ರಿಯಾಲಿಟಿ ಶೋ ಸಾಧ್ಯವಾಗಲಿ ,ಶುಭವಾಗಲಿ ಅನ್ನುವ ಹಾರೈಕೆ .

ಮತ್ತಷ್ಟು ಮಾಹಿತಿ ಸದ್ಯದಲ್ಲೆ

ಭಾನುಮತಿ ಬಿ ಸಿ

 

-Ad-

Leave Your Comments