ಟಗರು ಗುದಿಯುತ್ತಾ? ಮಲಗುತ್ತಾ ನೋಡ್ಬೇಕು!

ಸ್ಯಾಂಡಲ್‌ವುಡ್‌ನಲ್ಲಿ ಇವತ್ತು ನಾಲ್ಕು ಸಿನಿಮಾಗಳು ರಿಲೀಸ್ ಹಾಕ್ತಿದ್ದು, ಅವುಗಳಲ್ಲಿ ಸೆಂಚ್ಯೂರಿ ಸ್ಟಾರ್ ಶಿವಣ್ಣ ಅಭಿನಯದ ಟಗರು ಭಾರೀ ಕುತೂಹಲ ಕೆರಳಿಸಿದೆ.. ಹೀಗಾಗಲೇ ಹಾಡು ಹಾಗೂ ಟ್ರೈಲರ್‌ ಮೂಲಕ ಹವಾ ಕ್ರೊಯೇಟ್ ಮಾಡಿದ್ದು, ಥಿಯೇಟರ್‌ನಲ್ಲಿ ಜನರ ಮನಸಿಗೆ ಗುದಿಯುತ್ತಾ ಮಲಗುತ್ತಾ ಅನ್ನೋ ಕುತೂಹಲ ಕೆಲವೇ ಗಂಟೆಗಳಲ್ಲಿ ಗೊತ್ತಾಗಲಿದೆ. ಟಗರನ್ನು ದುನಿಯಾ ಸೂರಿ ಹಿಡಿದುಕೊಂಡು ಬಂದಿರೋದು ಮಾರ್ಕೆಟ್ ನಲ್ಲಿ ಭಾರೀ ಬೆಲೆ ಸಿಗುವ ಮಾತುಗಳು ಕೇಳಿಬಂದಿವೆ. ಇನ್ನೂ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಅಭಿನಯಿಸಿರೋದು ಮತ್ತೊಂದು ಪ್ಲಸ್ ಪಾಯಿಂಟ್.

ಟಗರಿನ ಜೊತೆಯಲ್ಲಿ ರಂಕಲ್ ರಾಟೆ, ಗಂಡ ಊರಿಗೆ ಹೋದಾಗ ಹಾಗೂ ರಂಗ್‍ಬಿರಂಗಿ ಎನ್ನುವ ಚಿತ್ರಗಳು ಕೂಡ ರಿಲೀಸ್ ಆಗಿವೆ. ಆದ್ರೆ ಟಗರು ಈ ಮೂರು ಚಿತ್ರಗಳನ್ನು ತಿವಿದು ಓಡಿಸುತ್ತಾ ಅನ್ನೋ ಭಯದಲ್ಲಿ ನಿರ್ಮಾಪಕರಿದ್ದಾರೆ. ಸ್ಯಾಂಡಲ್ ವುಡ್ ಜೊತೆಗೆ ಬಾಲಿವುಡ್‌ನಲ್ಲಿ ನಟಿ ಸೋನಾಕ್ಷಿ ಸಿನ್ಹಾ ಅಭಿನಯ ಮಾಡಿರುವ ವೆಲ್‌ಕಮ್ ಟು ನ್ಯೂಯಾರ್ಕ್ ಸಿನಿಮಾ ಕೂಡ ಥಿಯೇಟರ್‌ಗೆ ಲಗ್ಗೆ ಹಾಕಿದ್ದು, ಗಲ್ಲಾ ಬಾಕ್ಸ್ ತುಂಬುವ ಮಾತುಗಳು ಕೇಳಿಬಂದಿವೆ..

ಜ್ಯೋತಿ ಗೌಡ, ನಾಗಮಂಗಲ

-Ad-

Leave Your Comments