ಯುವಕರನ್ನು ಭರ್ಜರಿಯಾಗಿ ಸೆಳೆಯುತ್ತಿರುವ “ಟಗರು” !

ಹೀರೋಗಳು ಏನೇ ಮಾಡಿದ್ರು ಅದನ್ನ ಫಾಲೋ ಮಾಡೋ ಕಟ್ಟಾ ಅಭಿಮಾನಿಗಳು ಇದ್ದೇ ಇದಾರೆ . ಆದ್ರೆ ಅಭಿಮಾನಿಗಳನ್ನು ಮೀರಿ ಪಡ್ಡೆ ಹುಡುಗರನ್ನು ಆವರಿಸಿಕೊಂಡಿದೆ ಟಗರು .

ಬಸ್ ಸ್ಟ್ಯಾಂಡ್ನಲ್ಲಿ ,ಮಾರ್ಕೆಟ್ನಲ್ಲಿ ,ಕಾಲೇಜ್ ನಲ್ಲಿ , ಎಲ್ಲಿ ನೋಡಿದರಲ್ಲಿ ಯುವಕರ ಹೇರ್ ಸ್ಟೈಲ್ ಹೆಚ್ಚುಕಡಿಮೆ ಒಂದೇ ಥರ ಕಾಣುತ್ತಿದೆ . ಅದು ಟಗರು ಚಿತ್ರದಲ್ಲಿ ಶಿವರಾಜಕುಮಾರ್ ಮಾಡಿಸಿಕೊಂಡಿರುವ ಹೇರ್ ಸ್ಟೈಲ್ !

ಸುತ್ತ ಶಾರ್ಟ್ ಮಾಡಿಸಿ ಮಧ್ಯಭಾಗ ಮಾತ್ರ ಹೆಚ್ಚು ಕೂದಲು  ಬಿಡೋ ಈ ಸ್ಟೈಲ್ ಒಂಥರಾ ಚೆನ್ನಾಗೇ ಇದೆ . ಗಾಳಿಗೆ ತೂಯ್ದಾಡೋದನ್ನ ನೋಡೋಕು ಮಜವಾಗಿದೆ .

ಇದಿಷ್ಟೇ ಅಲ್ಲ ಯೋಗರಾಜ್ ಭಟ್ ಬರೆದಿರುವ ಹಾಡು ಸಿಕ್ಕಾಪಟ್ಟೆ ಜನರಿಗೆ ಇಷ್ಟವಾಗುತ್ತೆ ಎಂದಿದ್ದಾರೆ ನಿರ್ದೇಶಕ ಸೂರಿ . ಟಗರು ಇನ್ನು ಏನೇನು  ಕಮಾಲ್ ಮಾಡಲಿದೆಯೋ ನೋಡೋಣ .

ಸದ್ಯ ಟಗರು ಚಿತ್ರೀಕರಣ ಬೆಂಗಳೂರು ,ಹೊಸಪೇಟೆ ,ಮಂಗಳೂರು ,ಉಡುಪಿ ಆಸುಪಾಸಿನಲಿನ್ ನಡೆದಿದೆ .  ಶೇಖಡ ಎಂಬತ್ತರಷ್ಟು ಸಿನಿಮಾ ಕೆಲಸ ಮುಕ್ತಾಯವಾಗಿದೆ . ನವೆಂಬರ್ ಅಥವಾ ಡಿಸೇಂಬರ್ ನಲ್ಲಿ ತೆರೆಗೆ ತರಲಿದ್ದೇವೆ ಅಂತಿದ್ದಾರೆ ನಿರ್ಮಾಪಕ ಕೆ ಪಿ ಶ್ರೀಕಾಂತ್ .

 

-Ad-

Leave Your Comments