ತಮಿಳಿನ ಕೆಲ ಕಿಡಿಗೇಡಿಗಳಿಂದ ಪುನೀತ್ ಅವಹೇಳನ

ಬಹುತೇಕ ತಮಿಳಿಗರು ಮೂಲತಃ ಅತಿರೇಕದ ಮನಸ್ಥಿತಿಯವರು. ತಾವು ಮಾಡಿದ್ದೇ ಸರಿ ಎನ್ನುವ ಮನೋಭಾವ. ಕಲಾವಿದರಿಗೆ ದೇವಸ್ಥಾನ ಕಟ್ಟಿ ಅದೇ ಕಲಾವಿದರಿಗೆ ಬಾಯಿಗೆ ಬಂದಂತೆ ಉಗಿದು ಉಪ್ಪಿನಕಾಯಿ ಹಾಕಿದ ಇತಿಹಾಸವೂ ಇದೆ. ಅದೇ ಮನಃಸ್ಥಿತಿ ಕಟ್ಟಪ್ಪ ಅಂದ್ರೆ ಸತ್ಯರಾಜ್  ಕನ್ನಡಿಗರ ಕ್ಷಮೆ ಕೇಳಿದ ಮೇಲೂ ಮುಂದುವರೆದಿದೆ. ಮಾಡಿದ ತಪ್ಪಿಗಾಗಿ ಕ್ಷಮೆ ಕೇಳಿದ್ದನ್ನು ಪ್ರೋತ್ಸಾಹಿಸದೆ ಕೆಲ ಕಿಡಿಗೇಡಿಗಳು ಕನ್ನಡ ನಟರ ಅವಹೇಳನಕ್ಕೆ ನಿಂತಿದ್ದಾರೆ.

ಪುನೀತ್ ಕನ್ನಡಿಗರ ನೆಚ್ಚಿನ ನಟ. ಬಾಲ್ಯದಲ್ಲೇ ಬೆಟ್ಟದಹೂವು ಚಿತ್ರದ  ನಟನೆಗಾಗಿ ರಾಷ್ಟ್ರಪ್ರಶಸ್ತಿ ಪಡೆದವರು. ಸತ್ಯರಾಜ್ ನಟನಾಗುವ ಹೊತ್ತಿಗೆ ಪುನೀತ್ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿ ಹಲವು ವರ್ಷಗಳೇ ಕಳೆದು ಹೋಗಿತ್ತು . ಅಂಥಾ ನಟನನ್ನ ಅಪಹಾಸ್ಯ ಮಾಡುವ ರೀತಿಯಲ್ಲಿ ಪುನೀತ್ ಒಬ್ಬ ಕಾಮಿಡಿಯನ್, ಸತ್ಯರಾಜ್ ತರಹದ ಒಬ್ಬ ನಟ ನಿಮ್ಮಲಿಲ್ಲ ಅನ್ನುವಂತ ಪೋಸ್ಟ್ ಹಾಕಿ ಸಾಮಾಜಿಕ ಜಾಲತಾಣದಲ್ಲಿ ಅವಮಾನಿಸುವ ಕೆಲಸ ಮಾಡುತ್ತಿದ್ದಾರೆ.

ಇವೆಲ್ಲ ಸ್ವತಃ ತಮಿಳು ನಟರೂ ಒಪ್ಪುವಂಥ ಮಾತಲ್ಲ. ಕನ್ನಡದಲ್ಲಿ ಪ್ರತಿಭಾವಂತರಿಗೇನು ಕೊರತೆ ಇಲ್ಲ. ಭಾರತೀಯ ಚಿತ್ರರಂಗಕ್ಕೇ  ಕಳಶಪ್ರಾಯರಾದ ರಾಜಣ್ಣ ಒಬ್ಬರೇ ಸಾಕು. ಇವತ್ತಿನ ಲೆಕ್ಕದಲ್ಲಿ ನೋಡಿದರೆ ಅನಂತ್ ನಾಗ್ ತರಹದ ಒಬ್ಬ ನಟನನ್ನ ತಮಿಳಿನಲ್ಲಿ ತಡಕಾಡಿದ್ರು  ತೆಗೆದು ತೋರಿಸೋಕಾಗಲ್ಲ.   ಪುನೀತ್ , ಶಿವಣ್ಣ , ಸುದೀಪ್, ಯಶ್ ,ದರ್ಶನ್ ,ರಂಗಾಯಣ ರಘು, ಅಚ್ಯುತ್ ಕುಮಾರ್ ಎಷ್ಟು ಜನ ಬೇಕು?? ಬುದ್ಧಿ ,ಪ್ರಜ್ಞೆ ಇದ್ದವ್ರು ಯಾವುದೇ ಭಾಷೆಯ ಕಲಾವಿದರನ್ನು ಗೌರವಿಸಬೇಕೇ ವಿನಃ ಅವಹೇಳನ ಮಾಡುವುದು ಕೀಳುಮಟ್ಟದ ಮನಃಸ್ಥಿತಿ ಅಷ್ಟೇ .

 

-Ad-

Leave Your Comments