ಕನ್ನಡ ಚಿತ್ರ ನಿರ್ಮಿಸುತ್ತಿರುವ ತಮಿಳು ಸೂಪರ್ ಸ್ಟಾರ್ ಯಾರು ಗೊತ್ತಾ?

ಸೂಪರ್ ಸ್ಟಾರ್ ಗಳೆಲ್ಲಾ ನಿರ್ಮಾಪಕರಾಗುತ್ತಿರುವುದು ಹೊಸತೇನಲ್ಲ. ಬಾಲಿವುಡ್ ನಲ್ಲಿ ಅಮಿರ್ ಖಾನ್, ಶಾರುಕ್ ಖಾನ್, ಸಲ್ಮಾನ್ ಖಾನ್ ರಿಂದ ಹಿಡಿದು ಹಲವಾರು ಹೀರೋಗಳು ನಿರ್ಮಾಪಕರಾಗಿದ್ದಾರೆ. ಅದೇ ಥರ ನಮ್ಮಲ್ಲಿ ಪುನೀತ್ ರಾಜ್ ಕುಮಾರ್ ಪಿಆರ್ ಕೆ ಸಂಸ್ಥೆ ಕಟ್ಟಿಕೊಂಡಿದ್ದಾರೆ. ಹೀಗೆ ಅವರವರ ಭಾಷೆಯಲ್ಲಿ ಸಿನಿಮಾ ನಿರ್ಮಿಸುವುದು ನಡೆದೇ ಆದರೆ. ಆದರೆ ಈಗ ತಮಿಳು ಸೂಪರ್ ಸ್ಟಾರ್ ಒಬ್ಬರು ಕನ್ನಡ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಅವರು ಬೇರೆ ಯಾರೂ ಅಲ್ಲ. ರಜನಿಕಾಂತ್ ಅಳಿಯ, ರಾಷ್ಟ್ರ ಪ್ರಶಸ್ತಿ ವಿಜೇತ ನಟ ಧನುಷ್.
ಧನುಷ್ ಕನ್ನಡದಲ್ಲಿ ಚಿತ್ರ ನಿರ್ಮಿಸುತ್ತಿದ್ದಾರೆ. ಕನ್ನಡದ ಖ್ಯಾತ ನಿರ್ದೇಶಕ ಜೇಕಬ್ ವರ್ಗೀಸ್ ಅವರು ಧನುಷ್ ಅವರಿಗೆ ಜೊತೆಯಾಗಿದ್ದಾರೆ. ಇವರಿಬ್ಬರೂ ಸೇರಿ ಕನ್ನಡ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಜೋಡಿ ಯಾರು ಗೊತ್ತಾ? ರಿಷಿ ಮತ್ತು ಶ್ರದ್ಧಾ ಶ್ರೀನಾಥ್.
ಆಪರೇಷನ್ ಅಲಮೇಲಮ್ಮ ಮೂಲಕ ಕನ್ನಡಿಗರ ಮನಗೆದ್ದ ಜೋಡಿಯನ್ನಿಟ್ಟುಕೊಂಡೇ ಧನುಷ್ ಸಿನಿಮಾ ಮಾಡುತ್ತಿದ್ದಾರೆ ಎನ್ನಲಾಗಿದೆ. ಆದರೆ ಈ ಕುರಿತು ಅಧಿಕೃತ ಪ್ರಕಟಣೆ ಹೊರಬಂದಿಲ್ಲ. ಈ ತಿಂಗಳಾಂತ್ಯಕ್ಕೆ ಎಲ್ಲವೂ ಅಂತಿಮವಾಗಲಿದೆ ಅಂತ ಜೇಕಬ್ ಹೇಳುತ್ತಾರೆ. ಉಳಿದಂತೆ ಧನುಷ್ ಈ ಚಿತ್ರದಲ್ಲಿ ನಟಿಸುತ್ತಾರಾ ಇಲ್ಲವೋ ಅನ್ನುವುದು ಇನ್ನೂ ನಿರ್ಧಾರವಾಗಿಲ್ಲ. ಅವರದೇ ನಿರ್ಮಾಣದ ಚಿತ್ರವಾದ್ದರಿಂದ ಗೆಸ್ಟ್ ಅಪೀಯರೆನ್ಸ್ ಇದ್ದರೂ ಇರಬಹುದು.
-Ad-

Leave Your Comments