ಶುರುವಾಯ್ತು ಕನ್ನಡ-ತಮಿಳ್ ವಾರ್..!

ಕನ್ನಡಿಗರ ಬಗ್ಗೆ ಅವಹೇಳನ ಮಾಡಿದ್ದ ಕಟ್ಟಪ್ಪ ಅಲಿಯಾಸ್ ಸತ್ಯರಾಜ್, ಕನ್ನಡಿಗರ ಮುಂದೆ ವಿಷಾದ ವ್ಯಕ್ತಪಡಿಸಿ, ಬಾಹುಬಲಿ ಚಿತ್ರಕ್ಕೆ ತೊಂದರೆ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ರು.. ಇದರ ಬೆನ್ನಲ್ಲೇ ತಮಿಳುನಾಡಿನಲ್ಲಿ ಕಿಡಿಗೇಡಿ ನಿರ್ಧಾರ ಕೈಗೊಂಡಿರುವ ತಮಿಳು ಚಿತ್ರರಂಗ, ಕನ್ನಡ ಸಿನಿಮಾಗಳ ಪ್ರದರ್ಶನ ರದ್ದು ಮಾಡಿ ಆದೇಶ ಹೊರಡಿಸಿದೆ.. ಮಾಯಾಜಾಲ ಮಲ್ಟಿಫ್ಲೆಕ್ಸ್  ಪ್ರದರ್ಶನ ಕಾಣ್ತಿದ್ದ ಕನ್ನಡದ ಶುದ್ಧಿ ಹಾಗೂ ಚಕ್ರವರ್ತಿ ಸಿನಿಮಾ ಪ್ರದರ್ಶನ ರದ್ದು ಮಾಡಲಾಗಿದೆ..

ಆನ್‍ಲೈನ್ ಮೂಲಕ ಟಿಕೆಟ್ ಬುಕ್ಕಿಂಗ್ ಮಾಡಿದ್ದವರಿಗೆ ಹಣ ವಾಪಸ್ ಮಾಡಲಾಗಿದೆ.. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ ರಾ ಗೋವಿಂದು, ತಮಿಳುನಾಡಿನ ಕ್ರಮ ಅಕ್ಷಮ್ಯ ಅಪರಾಧ.  ಅವರು ಅಂಥಾ ನಿರ್ಧಾರ  ಕೈಗೊಂಡಲ್ಲಿ ಕರ್ನಾಟಕದಲ್ಲಿ ತಮಿಳು ಚಿತ್ರಗಳ ಮೇಲೆ ನಿಷೇಧ ಹೇರುತ್ತೇವೆ ಎಂದಿದ್ದಾರೆ..

-Ad-

Leave Your Comments