ಬಿಗ್ ಬಾಸ್ ಮನೆಯಿಂದ ತೇಜಸ್ವಿನಿ ಔಟ್

ಸೀರಿಯಲ್ ಸ್ಟಾರ್ ತೇಜು ಬಿಗ್ ಬಾಸ್ ಮನೆಯ ಪ್ರಯಾಣ ಮುಗಿಸಿದ್ದಾರೆ. ವಾರದ ಮಧ್ಯದಲ್ಲೇ ಬಿಗ್ ಬಾಸ್ ಮನೆ ತೊರೆದು ಮನೆಯತ್ತ ಹೊರಟಿದ್ದಾರೆ. ಇದಕ್ಕೆ ಕಾರಣ ಬಿಗ್ ಬಾಸ್ ಕೊಟ್ಟ ಶಾಕಿಂಗ್ ನ್ಯೂಸ್.. ಅಸಲಿಗೆ ಹೊರ ಪ್ರಪಂಚದಲ್ಲಿ ನಡೆಯುವ ಯಾವುದೇ ವಿಚಾರಗಳನ್ನು ಬಿಗ್ ಬಾಸ್ ಮನೆಯ ಸ್ಪರ್ಧಿಗಳಿಗೆ ತಿಳಿಸಲಾಗುವುದಿಲ್ಲ. ಆದ್ರೆ ಈ ಬಾರಿ ಆ ನಿಯಮ ಮುರಿದ ಬಿಗ್ ಬಾಸ್ ತೇಜಸ್ವಿನಿ ಮನೆಯಿಂದ ಹೊರ ಹೋಗುವಂತೆ ಮಾಡಿದ್ದಾರೆ.
ತೇಜಸ್ವಿನಿ ಮನೆಯಿಂದ ಹೊರಬಂದಿದ್ದು ಯಾಕೆ..?
ನಟಿ ತೇಜಸ್ವಿನಿ ತಂದೆ  ಆರೋಗ್ಯವಾಗಿಯೇ ಇದ್ರು, ಆದ್ರೆ ಇದ್ದಕ್ಕಿದ್ದಂತೆ ಕಿಡ್ನಿ ಸಮಸ್ಯೆ ಕಾಣಿಸಿಕೊಂಡಿದ್ರಿಂದ ಆದ್ಪತ್ರೆಗೆ ದಾಖಲಾಗಿದ್ದಾರೆ. ಪರೀಕ್ಷೆ ನಡೆಸಿದ ವೈದ್ಯರು ಆಪರೇಷನ್ ಮಾಡಿದ್ದು ಚೇತರಿಸಿಕೊಳ್ತಿದ್ದಾರೆ ಅಂತ ವೈದ್ಯರು ತಿಳಿಸಿದ್ದಾರೆ. ಆ ವಿಚಾರವನ್ನು ಬಿಗ್ ಬಾಸ್ ನಟಿ ತೇಜಸ್ವಿನಿ ಅವರಿಗೆ ತಿಳಿಸಿದ್ರು, ಜೊತೆಗೆ ಮನೆಯಲ್ಲಿ ಇರುವ ಅಥವಾ ಮನೆಯಿಂದ ಹೊರಹೋಗುವ ನಿರ್ಧಾರ ತೆಗೆದುಕೊಳ್ಳಲು ಸ್ವತಂತ್ರ ನೀಡಿದ್ರು. ಆದ್ರೆ ತೇಜಸ್ವಿನಿ ಮನೆಯಿಂದ ಹೊರಹೋಗುವ ನಿರ್ಧಾರ ಆಯ್ಕೆ ಮಾಡಿಕೊಂಡಿದ್ದಾರೆ.
ತೇಜಸ್ವಿನಿ ನಿರ್ಧಾರಕ್ಕೆ ಕಾರಣ ಇದು..?
ಬಿಗ್ ಬಾಸ್ ಮೊದಲಿಗೆ ಆಯ್ಕೆ ಮಾಡುವ ಸ್ವತಂತ್ರ ನೀಡಿದಾಗ, ಜಾಣ್ಮೆಯ ನಡೆಯಿಟ್ಟ ತೇಜು, ಮನಯವರ ಜೊತೆ ಒಮ್ಮೆ ಮಾತನಾಡುವ ಅವಕಾಶಕ್ಕೆ ಬೇಡಿಕೆ ಇಟ್ಟರು. ಆ ಬೇಡಿಕೆ ಮನ್ನಿಸಿದ ಬಿಗ್ ಬಾಸ್ ತೇಜಸ್ವಿನಿಗೆ ತಾಯಿ ಜೊತೆ ಮಾತನಾಡಲು ಅವಕಾಶ ಮಾಡಿಕೊಟ್ರು, ಆದ್ರೆ ತೇಜಸ್ವಿನಿ ತಾಯಿ ಧೃತಿಗೆಟ್ಟಂತೆ ಮಾತನಾಡಿದರು, ಜೊತೆಗೆ ನಿಮ್ಮ ತಂದೆ ನಿನ್ನನ್ನು ನೋಡಬೇಕು ಅನ್ನುತ್ತಿದ್ದಾರೆ ಅಂತ ಭಾವನಾತ್ಮಕ ಮಾತುಗಳನ್ನಾಡಿದರು. ಇದರಿಂದ ಮನಸ್ಸು ಗಟ್ಟಿ ಮಾಡಿಕೊಳ್ಳಲು ಮಾತನಾಡಿದ ತೇಜು, ಅಮ್ಮನನ್ನು ಸಂತೈಸಿ ಮನೆಯಿಂದ ಹೊರಬರುವುದಾಗಿ ಘೋಷಣೆ ಮಾಡಿದ್ದಾರೆ. ಈ ವಾರ ಎಲಿಮಿನೇಷನ್ ಲಿಸ್ಟ್ ನಲ್ಲಿದ್ದ ತೇಜಸ್ವಿನಿ ವಾರದ ಮಧ್ಯದಲ್ಲಿ ಮನೆಯಿಂದ ಹೊರಬಿದ್ದಿದ್ದಾರೆ.
ಜ್ಯೋತಿ ಗೌಡ, ನಾಗಮಂಗಲ
-Ad-

Leave Your Comments