“ಅಸ್ತಿತ್ವ” ಮೂಲಕ ತೆಲುಗು ಟಿವಿಸ್ಟಾರ್ ಕನ್ನಡಕ್ಕೆ

ಇತ್ತೀಚಿನ ದಿನಗಳಲ್ಲಿ  ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ಚಿತ್ರ ಅಸ್ತಿತ್ವ.
ಮ್ಯಾರೇಜ್ ಸ್ಟೋರಿ ಎಂಬ ಸಿನಿಮಾ ನಿರ್ದೇಶನ ಮಾಡಿದ್ದ ನೂತನ್ ಉಮೇಶ್ ಅವರ ಮತ್ತೊಂದು ಪ್ರಯತ್ನವಾದ ಈ ಸಿನಿಮಾ, ಸಾಕಷ್ಟು ಕಾರಣಗಳಿಗೆ ಗಾಂಧಿನಗರದಲ್ಲಿ ಸದ್ದು ಮಾಡುತ್ತಿದೆ.
VishwaCariappa-ಮುಖ್ಯವಾಗಿ, ನಿರ್ಮಾಣ ಸಾರಥ್ಯ ವಹಿಸಿರುವವರು ಬೆಂಗಳೂರಿನ ಸ್ಯಾನ್ಸಿಟಿ ಗ್ರೂಪ್ ಆಫ್ ಕಂಪನೀಸ್ ಅಧ್ಯಕ್ಷರು ಹಾಗು ಸಿಇಓ ವಿಶ್ವಕಾರ್ಯಪ್ಪ, ಇವರ “ವಿ ಸ್ಯಾನ್ ವಿಷನ್” ಎಂಬ ಹೊಸ ಬ್ಯಾನೆರ್ನಡಿ ಚಿತ್ರ ನಿರ್ಮಾಣವಾಗುತ್ತಿದೆ. ಇವರು ನಿರ್ಮಿಸಿದ ಗಣೇಶ್ ಅಭಿನಯದ “ಆಟೋ ರಾಜ”, ಗಣೇಶ್ ಗೆ “ಬ್ಯಾಕ್ ಟು ದಿ ಫಾರಂ” ಚಿತ್ರವಾಗಿತ್ತು.
madhusudan-asthitwaಎರಡನೆಯದಾಗಿ, ಚಿತ್ರದ ಮೂಲಕ ತೆಲುಗು ಸಿರಿಯಲ್‌ಗಳಲ್ಲಿ ಸ್ಟಾರ್ ಆಗಿರುವ ಬೆಂಗಳೂರು ಮೂಲದ ಮಧುಸೂದನ್ ಎಂಬ ಯುವಕ ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಯವಾಗುತ್ತಿದ್ದಾರೆ. ಮೂಲತಃ ಬೆಂಗಳೂರಿನವರಾದ ಮಧುಸೂದನ್ ವಿಶಾಖಪಟ್ಟಣದಲ್ಲಿ ಅಭಿನಯ ತರಬೇತಿ ಪಡೆದಿದ್ದಾರೆ.
ಅಭಿನಯ ತರಬೇತಿ ಮುಗಿದ ತಕ್ಷಣವೇ ಅವರಿಗೆ ತೆಲುಗು ಸಿನಿಮಾ ಮತ್ತು ಕಿರುತೆರೆ ಕೈಬೀಸಿ ಕರೆಯಿತು. ಸಿಕ್ಕ ಅವಕಾಶವನ್ನು ಬಿಡದ ಮಧುಸೂದನ್ ಮೂರು ತೆಲುಗು ಸಿನಿಮಾಗಳಲ್ಲಿ ಮುಖ್ಯ ಪಾತ್ರದಾರಿಯಾಗಿ ನಟಿಸಿದರು.
ಆದರೆ ಅವರಿಗೆ ನಿಜವಾಗಿಯೂ ಬ್ರೇಕ್ ಕೊಟ್ಟಿದ್ದು ಅಲ್ಲಿನ ಕಿರುತೆರೆ. ತೆಲುಗು ಇಂಡಸ್ಟ್ರಿ ಇಂದು ಮಧುಸೂದನ್ ಅವರನ್ನು ಗುರುತಿಸುವಂತೆ ಮಾಡಿರುವುದೇ ಅವರು ನಟಿಸಿರುವ ಕೆಲ ಸಿರಿಯಲ್‌ಗಳು. ಗೋರಂಥ ದೀಪಂ ಎನ್ನುವ ಸಿರಿಯಲ್‌ನಲ್ಲಿ ಮಧುಸೂದನ್  700 ಎಪಿಸೋಡ್‌ಗಳಲ್ಲಿ ನಟಿಸಿದ್ದಾರೆಂದರೆ ಅವರ ಪಾಪುಲಾರಿಟಿ ಎಷ್ಟಿದೆ ಎಂಬುದನ್ನು ನಾವು ಅರಿಯಬೇಕಿದೆ.
ಈ ಸಿರಿಯಲ್‌ಗಳಲ್ಲಿ ಅಭಿನಯಿಸುತ್ತಿರುವಾಗಲೇ  ವಿಶ್ವ ಕಾರ್ಯಪ್ಪನವರ ಪರಿಚಯವಾಗಿತ್ತು. ಈ ಪರಿಚಯ ಮಧುಸೂದನ್ ಅವರಿಗೆ ಅಸ್ತಿತ್ವ ಸಿನಿಮಾದಲ್ಲಿ ಅವಕಾಶ ಗಿಟ್ಟುವಂತೆ ಮಾಡಿದೆ. ಇದು ಇವರ ಕನ್ನಡದ  ಮೊದಲ ಸಿನಿಮಾ.
ಮಧುಸೂದನ್‌ಗೆ ಮುಂದಿನ ದಿನಗಳಲ್ಲಿ ಕನ್ನಡದ ಮತ್ತಷ್ಟು ಸಿನಿಮಾಗಳಲ್ಲಿ ಅಭಿನಯಿಸ ಬೇಕು ಎನ್ನು ಹಂಬಲ ಇದೆ.  ಆ.೧೯ರಂದು ರಾಜ್ಯಾದ್ಯಂತ  ಅಸ್ತಿತ್ವ ಸಿನಿಮಾವನ್ನು ಬಿಡುಗಡೆ ಮಾಡಲು ಚಿತ್ರ ತಂಡ ರಿಲೀಸ್ ಮಾಡಲು ತಯಾರಿ ಮಾಡಿಕೊಂಡಿದೆ. ಚಿತ್ರ ಇನ್ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದ್ದು, ಅದಕ್ಕಾಗಿ ಭರ್ಜರಿ ಸಿದ್ಧತೆಗಳುಡೆದಿವೆ. ಟ್ರೈಲರ್ ಮತ್ತು ಹಾಡುಗಳೂ ಈಗಾಗಲೇ  ಹಿಟ್ ಆಗಿರುವ ಪರಿಣಾಮ ಸಿನಿಮಾ ಗೆಲ್ಲುವ ಎಲ್ಲ ಲಕ್ಷಣಗಳು ಗೋಚರಿಸುತ್ತಿದೆ.
  ತಮಿಳಿನ ಹೆಸರಾಂತ ನಟ ಮತ್ತು ಸಂಗೀತ ನಿರ್ದೇಶಕ ವಿಜಯ್ ಆಂಟೋನಿ, ಈ ಸಿನಿಮಾದ ಮೂಲಕ ಕನ್ನಡಕ್ಕೆ ಬಂದಿದ್ದಾರೆ. ಒಟ್ಟಿನಲ್ಲಿ ಅಸ್ತಿತ್ವ ಸಿನಿಮಾ ಮೂಲಕ ತೆಲುಗು ಟಿವಿ ಸ್ಟಾರ್ ಮತ್ತು ತಮಿಳಿನ ಖ್ಯಾತ ನಟರೊಬ್ಬರು ಸ್ಯಾಂಡಲ್‌ವುಡ್ ಪ್ರವೇಶ ಮಾಡುತ್ತಿದ್ದಾರೆ.
ಇವರ ನಿರೀಕ್ಷೆಯಂತೆ ಸಿನಿಮಾವನ್ನು ಪ್ರೇಕ್ಷಕ ಗೆಲ್ಲಿಸುತ್ತಾನ ಕಾದು ನೋಡಬೇಕಿದೆ.
-Ad-

Leave Your Comments