ಅಂಬಿ ಮನೆಯಲ್ಲಿ ದಿ ಮಹಾಭಾರತ..!

ಇದೇನಪ್ಪ ಮೊನ್ನೆಯಷ್ಟೇ 1 ಸಾವಿರ ಕೊಟಿ ರೂಪಾಯಿ ವೆಚ್ಚದಲ್ಲಿ “ದಿ ಮಹಾಭಾರತ” ಸಿನಿಮಾ ಚಿತ್ರೀಕರಣಕ್ಕೆ ರೆಡಿಯಾಗ್ತಿದೆ ಅಂತಾ ಹೇಳಿದ್ರು. ಇದೀಗ ಅಂಬಿ ಮನೆಯಲ್ಲೇ ಮಹಾಭಾರತ ಅಂತಿದ್ದಾರೆ ಅಂದುಕೊಂಡ್ರಾ..? ಹೌದು, 1 ಸಾವಿರ ಕೊಟಿ ವೆಚ್ಚದಲ್ಲಿ ಸಿನಿಮಾ ಮಾಡಲು ಮುಂದಾಗಿರುವ ಕರಾವಳಿಯ ಕನ್ನಡಿಗ  ಎನ್‍ಆರ್‍ಐ ದುಬೈ ಉದ್ಯಮಿ ಬಿ.ಆರ್ ಶೆಟ್ಟಿ ಅಂಬಿ ಮನೆಗೆ ಭೇಟಿ ನೀಡಿದ್ರು.. ದಿ ಮಹಾಭಾರತದಲ್ಲಿ ಅಂಬರೀಷ್ ಅವರಿಗೆ ಯಾವುದಾದರೂ ಪಾತ್ರ ನೀಡಲು ಭೇಟಿ ನೀಡಿದ್ರಾ ಅಂದ್ರೆ ನಿಜ ಅನ್ನೋದು ಸದ್ಯಕ್ಕೆ  ಸ್ವಲ್ಪ ಕಷ್ಟ.  ಬಿ.ಆರ್ ಶೆಟ್ಟಿ,  ಅಂಬರೀಷ್  ಸ್ನೇಹ ಇಂದು ನಿನ್ನೆಯದಲ್ಲ. ನಿನ್ನೆಅಂಬಿ   ಮನೆಯಲ್ಲಿ ಏರ್ಪಡಿಸಿದ್ದ ಔತಣ ಕೂಟಕ್ಕೆ  ಸಿದ್ದರಾಮಯ್ಯ ,ಜಾರ್ಜ್ ಜೊತೆ  ಬಿ.ಆರ್ ಶೆಟ್ಟಿ ಕೂಡ  ಇದ್ರು..  ಊಟ ಮುಗಿಸಿ ಹೊರಾಂಡದಲ್ಲಿ ಹರಟುವಾಗ ಅಂಬರೀಷ್ ಹಾಗೂ ಬಿ.ಆರ್ ಶೆಟ್ಟಿ ಮಹಾಭಾರತ ಚಿತ್ರದ ಬಗ್ಗೆ ಮಾತನಾಡಿದ್ರು..

ನೀವೇನಾದ್ರು 1 ಸಾವಿರ ಕೋಟಿ ವೆಚ್ಚದ ಸಿನಿಮಾದಲ್ಲಿ ಆಕ್ಟಿಂಗ್ ಮಾಡ್ತೀರಾ ಎಂದಿದ್ದಕ್ಕೆ ಅಂಬರೀಷ್, ಇಲ್ಲಪ್ಪ ನಾನು 1 ಸಾವಿರ ಕೋಟಿ ಕೊಟ್ಟರೆ ಹಣ ಇಟ್ಟುಕೊಳ್ಳುತ್ತೇನೆ ನಾನು ನಟನೆ ಮಾಡಲ್ಲ ಅಂತ ನಗೆಯಾಡಿದ್ರು . ಆ ಬಳಿಕ ಮಾತು ಮುಂದುವರಿಸಿ, ನನಗೆ ಒಂದು ಕೋಟಿಯೂ ಬೇಡ.. ಆಕ್ಟಿಂಗ್ ಮಾಡುವುದು ಬೇಡ.. ಬಿ.ಆರ್ ಶೆಟ್ಟಿ ನನಗೆ ತುಂಬಾ ಆತ್ಮೀಯ ಗೆಳೆಯ.. ಆತ ಚೆನ್ನಾಗಿದ್ರೆ ಸಾಕು. ಸಾವಿರ ಕೋಟಿ ಬಂಡವಾಳ ಹಾಕಿ ಕನ್ನಡದಲ್ಲೂ  ಸಿನಿಮಾ ತೆಗೆಯೋಕೆ  ಮುಂದಾಗಿರುವ ಆತನ ಬಗ್ಗೆ ಬರೀರಪ್ಪ,ಫೋಟೋ ತೆಗಿರಪ್ಪಾ  ಅಂತಾ ಮಾಧ್ಯಮ ಮಂದಿಗೆ ಅಂಬಿ ತಮ್ಮ ಎಂದಿನ ಸ್ಟೈಲ್‍ನಲ್ಲೇ ಹೇಳಿದ್ರು.. ಮುಂದೆ ಸಂದರ್ಭ ಬಂದ್ರೆ ಅಂಬಿ ಮಹಾಭಾರತದಲ್ಲಿ ಅಭಿನಯಿಸಿದ್ರು ನಾವೇನು ಆಶ್ಚರ್ಯ ಪಡಬೇಕಿಲ್ಲ. ಸ್ನೇಹಕ್ಕೋಸ್ಕರ ಎಷ್ಟೋ  ಬಿಟ್ಟಿ ಸಿನಿಮಾ ಮಾಡಿರೋ ಅಂಬಿ ಇಲ್ಲೂ ಸ್ನೇಹಕ್ಕೆ ಮಣಿದು ಆಯ್ತು ನಡಿ ಮಾಡ್ತೀನಿ ಅಂದ್ರೂ ಅನ್ನಬಹುದು.

ಜೋಮ, ಮಂಡ್ಯ

-Ad-

Leave Your Comments