ಇತ್ತೀಚೆಗಷ್ಟೇ ನಾವೆಲ್ಲರೂ ಮಕ್ಕಳ ದಿನಾಚರಣೆ ಆಚರಿಸಿದ್ದೇವೆ. ಈ ಸಂದರ್ಭದಲ್ಲಿ ಮಕ್ಕಳಿಗಾಗಿ ಅದರಲ್ಲೂ ವಿಶೇಷ ಚೇತನ ಮಕ್ಕಳಿಗಾಗಿ ಕನ್ನಡದಿಂದ ಫ್ರೆಂಚ್ ಹಾಗೂ ಇತರೆ ಭಾಷೆಯ 150ಕ್ಕೂ ಹೆಚ್ಚು ಕಲಾವಿದರು ಸೇರಿ ‘ದ ಒನ್ ಸಾಂಗ್’ ಮೂಲಕ ಆತ್ಮಸ್ಥೈರ್ಯ ತುಂಬುವ ಪ್ರಯತ್ನ ಮಾಡಿದ್ದಾರೆ.
ಬೆಂಗಳೂರು ಮೂಲದ ಸಂಗೀತ ನಿರ್ದೇಶಕರಾದ ವೆಂಕಿ- ವರುಣ್ ಎಂಬುವವರು ಯುನೆಸೆಫ್ ಇಂಡಿಯಾ ಸಹಯೋಗದಲ್ಲಿ ಈ ಹಾಡನ್ನು ನಿರ್ಮಿಸಿದ್ದು, ಈ ಹಾಡಿನಲ್ಲಿ ರಿಯಲ್ ಸ್ಟಾರ್ ಉಪೇಂದ್ರರಿಂದ ಹಿಡಿದು ಪುನೀತ್ ರಾಜ್ ಕುಮಾರ್ ವರೆಗೂ, ವಿಜಯ್ ಪ್ರಕಾಶ್ ರಿಂದ ಸೋನು ನಿಗಮ್, ಎಸ್.ಪಿ ಬಾಲಸುಬ್ರಮಣ್ಯಂವರೆಗೂ ಕನ್ನಡದ ಜತೆಗೆ ತೆಲುಗು, ಮಲೆಯಾಳಂ, ಪಂಜಾಬಿ, ಮರಾಠಿ, ಕಾಶ್ಮೀರಿ ಭಾಷೆಗಳ ಜತೆಗೆ ಫ್ರೆಂಚ್ ಹಾಗೂ ಇತರೆ ವಿದೇಶಿ ಭಾಷೆಯ ಕಲಾವಿದರು ಸೇರಿ ಒಟ್ಟು 150ಕ್ಕೂ ಹೆಚ್ಚು ಕಲಾವಿದರು ಈ ಹಾಡಿಗಾಗಿ ಒಂದುಗೂಡಿರುವುದು ವಿಶೇಷ. 17 ನಿಮಿಷಗಳ ಈ ಸುಂದರ ಹಾಡಿನ ಲಿಂಕ್ ಅನ್ನು ಮೇಲೆ ನೀಡಲಾಗಿದ್ದು, ಮಿಸ್ ಮಾಡದೇ ನೋಡಿ ನಿಮಗೂ ಇಷ್ಟ ಆಗುತ್ತೆ. ಜತೆಗೆ ಸ್ಫೂರ್ತಿಯೂ ಸಿಗುತ್ತೆ.