ಮಲಯಾಳಂಗೆ ರಿಮೇಕ್ ಆಗಲಿದ್ಯಂತೆ ದಿ ವಿಲನ್!

ಜೋಗಿ ಖ್ಯಾತಿಯ ಪ್ರೇಮ್ ನಿರ್ದೇಶನದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಅಭಿನಯಿಸುತ್ತಿರುವ `ದಿ ವಿಲನ್’ ಸಿನಿಮಾ ಮಲಯಾಳಂಗೆ ರಿಮೇಕ್ ಆಗಲಿದೆಯಂತೆ. ಲಂಡನ್ ನಲ್ಲಿ ಶೂಟಿಂಗ್ ನಡೆಯುತ್ತಿರುವ ಹಂತದಲ್ಲೇ ಈ ಚಿತ್ರ ಮಲಯಾಳಂಗೆ ರಿಮೇಕ್ ಆಗುವ ಬಗ್ಗೆ ಮಾತುಗಳು ದಟ್ಟವಾಗುತ್ತಿವೆ.

ಪ್ರೇಮ್ ಅವರೇ ಈ ಚಿತ್ರವನ್ನು ಮಲಯಾಳಂಗೆ ರಿಮೇಕ್ ಮಾಡಲು ಆಲೋಚಿಸಿದ್ದಾರೆ. ಶಿವರಾಜ್ ಕುಮಾರ್ ಅವರ ಪಾತ್ರವನ್ನು ನಟ ಮೋಹನ್ ಲಾಲ್ ಅವರು ನಿರ್ವಹಿಸಲಿದ್ದಾರಂತೆ. ಆದರೆ ಕಿಚ್ಚ ಸುದೀಪ್ ಹಾಗೂ ನಾಯಕಿಯಾಗಿ ಆಮಿ ಜಾಕ್ಸನ್ ಅವರೇ ತಮ್ಮ ತಮ್ಮ ಪಾತ್ರಗಳಲ್ಲಿ ಮುಂದುವರೆಯಲಿದ್ದಾರಂತೆ.

ಆ ಮೂಲಕ ಕಿಚ್ಚು ಸುದೀಪ್ ಹಾಗೂ ನಾಯಕಿ ಆಮಿ ಜಾಕ್ಸನ್ ಅವರಿಗೆ ಇದು ಮೊದಲ ಮಲಯಾಳಂ ಚಿತ್ರವಾಗಲಿದೆ. ಇನ್ನೂ ಸುದೀಪ್ ಈಗಾಗಲೇ ಹಿಂದಿ, ತಮಿಳು, ತೆಲುಗು ಚಿತ್ರಗಳಲ್ಲಿ ನಟಿಸಿದ್ದು, ಮಲಯಾಳಂನಲ್ಲಿ ನಟಿಸಿದರೆ ಸುದೀಪ್ ಪಂಚಭಾಷಾ ನಟರಾಗಲಿದ್ದಾರೆ.

ಮಲಯಾಳಂನಲ್ಲಿ ದಿ ವಿಲನ್ ಸಿನಿಮಾ ಯಾವಾಗ ಮೂಡಿ ಬರಲಿದೆ ಎಂಬ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ.

-Ad-

Leave Your Comments