ದಿ ವಿಲನ್ ನಲ್ಲಿ ಎರಡು ಕೋಟಿ ಖರ್ಚು ಮಾಡಿದ ಹಾಡು ಯಾರಿಗೆ ?

ದಿ ವಿಲನ್ ದೊಡ್ಡ ಬಜೆಟ್ ಚಿತ್ರ . ಪೋಸ್ಟರ್ ನೋಡಿದ್ರೆ ಗೊತ್ತಾಗುತ್ತೆ ಕನ್ನಡದ ಬಹುಬೇಡಿಕೆಯ ನಟರು ಅಬ್ಬರಿಸುತ್ತಿದ್ದಾರೆಂಬುದು. ಅಂದಮೇಲೆ ಹಣದ ಅಬ್ಬರವೂ ಜೋರಾಗೆ ಇರಬೇಕಲ್ಲವೇ.  ಸುದೀಪ್ ತೆರೆಯ ಮೇಲೆ  ದಿಗ್ಗನೆ ಬರುವ ಹಾಡಿನ ದೃಶ್ಯಕ್ಕೆ ಎರಡು ಕೋಟಿ ವ್ಯಯಿಸಿದ್ದೇವೆ ಎನ್ನುತ್ತಿದೆ ಚಿತ್ರತಂಡ.

ನಿರ್ದೇಶಕ ಪ್ರೇಮ್ ರ  ಡಾರ್ಲಿಂಗ್ ಕಿಚ್ಚಸುದೀಪ್ ! ಸುದೀಪ್ ಕೊಟ್ಯಾ೦ತರ ಅಭಿಮಾನಿಗಳ ಸರದಾರ ಅನ್ನೋದು ಪ್ರೇಮ್ಗೆ ಚೆನ್ನಾಗೇ ಗೊತ್ತು . ಹಾಗಾಗಿ ಅಭಿಮಾನಿಗಳು ಹುಚ್ಚೆದ್ದು  ಕುಣಿಯುವಂಥ ಎಂಟ್ರಿ ಕೊಡ್ಬೇಕು ಅಂತಲೇ ಸುದೀಪ್ ಹಾಡಿಗೆ ಸಕ್ಕತ್  ಶ್ರಮ ಪಟ್ಟಿದ್ದಾರೆ. ಸುಮಾರು ೧೦೦ ವಿದೇಶಿ ಡ್ಯಾನ್ಸರ್ ಗಳಿಂದ ಸ್ಟೆಪ್ ಹಾಕಿಸಿದ್ದಾರೆ.

ಅರ್ಜುನ್ ಜನ್ಯ ಸಂಗೀತ ನೀಡಿರೋ ಹಾಡಿಗೆ ನಾಗೇಶ್ ನೃತ್ಯ ಸಂಯೋಜನೆ ಇದೆ. ಜೋಗಿ ಚಿತ್ರದಲ್ಲಿ “ಬೇಡುವೆನು ವರವನ್ನು ” ಹಾಡಿ, ಕೇಳುಗರ ಮನಕಲಕಿದ್ದ ಅಪ್ಪಟ ಮಂಡ್ಯದ ಮಗ ನಿರ್ದೇಶಕ ಪ್ರೇಮ್  ಭಾವುಕ ಧ್ವನಿಯೇ ಸುದೀಪ್ ಎಂಟ್ರಿಗೆ ಹಿನ್ನೆಲೆಯಾಗಿ ಮೊಳಗಿದೆ .

ಶಿವರಾಜ್ ಕುಮಾರ್ ಹಾಡಿಗೂ ಬೆಂಗಳೂರಿನಲ್ಲಿ ದೊಡ್ಡ ಸೆಟ್ ಹಾಕುವ ಯೋಜನೆ ಸಿದ್ಧವಾಗಿದೆ . ಸದ್ಯ ಶಿವರಾಜ್ ಕುಮಾರ್ ಚೇಸಿಂಗ್ ದೃಶ್ಯಗಳನ್ನ ಬೆಂಗಳೂರಿನಲ್ಲಿ ಹಾಕಿರುವ  ಬಹುದೊಡ್ಡ ಸೆಟ್ ನಲ್ಲಿ ಚಿತ್ರೀಕರಿಸಲಾಗುತ್ತಿದೆ . ವೈಟ್ ಫೀಲ್ಡ್ ನಲ್ಲಿರುವ ಟೆಕ್ ಪಾರ್ಕ್ನಲ್ಲೂ ಚಿತ್ರೀಕರಣ ಮಾಡಲಾಗಿದೆ. ಚಲಿಸುತ್ತಿದ್ದ ಕಾರಿನಿಂದ ಜಿಗಿದ ಶಿವರಾಜ್ ಕುಮಾರ್  ಉತ್ಸಾಹ ನೋಡಿ ಪ್ರೇಮ್ ಗೆ ಮತ್ತಷ್ಟು ಉತ್ಸಾಹ ಹೆಚ್ಚಾಗಿದೆ .

ಒಂದು ಕಡೆ ನಿರ್ದೇಶಕರ ನಟ ಶಿವಣ್ಣ  ಮತ್ತೊಂದು ಕಡೆ ಪ್ರತಿಭೆಯೇ ಮೈವೆತ್ತ ಸುದೀಪ್ ಇವರಿಬ್ಬರ ಜೋಡಿ ಅಭಿಮಾನಿಗಳಿಗೆ ಹಬ್ಬವಾಗುವ ನೀರೀಕ್ಷೆಯಂತೂ ಇದ್ದೇ ಇದೆ . ನಿರ್ದೇಶಕ ಪ್ರೇಮ್ ಕೂಡ ಇವರಿಬ್ಬರ ಜೊತೆ  ಸಿನಿಮಾ ಮಾಡುತ್ತಿರುವುದು ನನ್ನ ಅದೃಷ್ಟ ಎಂದಿದ್ದಾರೆ .

ಅಕ್ಟೋಬರ್ ಮೂವತ್ತರೊಳಗೆ ಶಿವರಾಜ್ ಕುಮಾರ್ ಅಭಿನಯದ ದೃಶ್ಯಗಳನ್ನು ಸೆರೆಹಿಡಿಯುವ ಸಿದ್ಧತೆ ನಡೆದಿದೆ.

-Ad-

Leave Your Comments