ಭಾರೀ ಬಿರುಗಾಳಿಯಿಂದ “ದಿ ವಿಲನ್” ಬಚಾವ್ ! ವಿಡಿಯೋ ಇಲ್ಲಿದೆ ನೋಡಿ

ಬೆಳಗಾವಿಯ ಬಳಿ ದಿ ವಿಲನ್ ಚಿತ್ರದ ಶೂಟಿಂಗ್ ನಡೆಯುತ್ತಿರುವ ವೇಳೆ ಭಾರೀ ಬಿರುಗಾಳಿ ಎದ್ದಿದೆ. ಅಡ್ಡ ಬಂದವರನ್ನ ಬೀಸಿ ಒಗೆಯುವಂಥ ಬಿರುಗಾಳಿಯದು . ಶೂಟಿಂಗ್ ಗಾಗಿ ಹಾಕಿದ ಸೆಟ್ಟನ್ನೆಲ್ಲ ಹಾನಿ ಮಾಡಿದೆ.

ಇವತ್ತು ಕಡೆಯದೊಂದು ಶಾಟ್ ಚಿತ್ರೀಕರಿಸಿ ಕಟ್ ಅಂತ ಹೇಳಿದ್ದಷ್ಟೇ, ಅದೆಲ್ಲಿತ್ತೋ ಏನೋ. ಭಯಂಕರ ಬಿರುಗಾಳಿ. ಸುದೀಪ್, ಪ್ರೇಮ್ ಸೇರಿದಂತೆ ಇಡೀ ಚಿತ್ರತಂಡವೇ ದಂಗಾಗಿಹೋಗಿದೆ. ನಾಲ್ಕೈದು ಮಂದಿ ಗುಂಪು ಗುಂಪಾಗಿ ನಿಂತುಕೊಂಡಿದ್ದಾರೆ. ಈ ಭಯಂಕರ ಗಾಳಿಗೆ ಚಿತ್ರ ತಂಡದ ಅನೇಕ ಶೂಟಿಂಗ್ ವಸ್ತುಗಳೆಲ್ಲಾ ಹಾರಿ ಹೋಗಿವೆ. ಅವುಗಳಿನ್ನೂ ಸಿಕ್ಕಿಲ್ಲ ಅಂತ ಸುದೀಪ್ ಹೇಳಿದ್ದಾರೆ.

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ರಾಮತೀರ್ಥದ  ಬಟ್ಟಂ ಬಯಲಲ್ಲಿ ದಿ ವಿಲನ್ ಚಿತ್ರ ತಂಡವನ್ನು ಕಂಗಾಲಾಗಿಸಿತ್ತು ಸಂಜೆ 5ಕ್ಕೆ ಬಿರ್ರನೆ ಬೀಸಿ ಬಂದ ಬಿಸಿ ಗಾಳಿ.  ಅದೃಷ್ಟವಶಾತ್ ಕ್ಯಾರವಾನ್ ನಲ್ಲಿದ್ದ ಕಿಚ್ಚ ಸುದೀಪ್ ಸೇಫ್ ಆಗಿದ್ದಾರೆ. ಹಾಗೆ ನಿರ್ದೇಶಕ ಜೋಗಿ ಪ್ರೇಮ್ ,ಸಾಹಸ ನಿರ್ದೇಶಕ ಮಾಸ ಮಾದ ಜೊತೆಗೆ ಸಹ ಕಲಾವಿದರು ಪಾರಾಗಿದ್ದಾರೆ.

ಎಲ್ಲಿ ನೋಡಿದರೂ  ಬಯಲು. ಪಾರಾಗಲಿಕ್ಕೆ ಆಸರೆಯೂ ಇಲ್ಲ.ಧೂಳೆಬ್ಬಿಸಿಕೊಂಡು ಅಬ್ಬರಿಸುವ ಬಿರುಗಾಳಿಗೆ ಕಣ್ಣು ಬಿಟ್ಟವರ ಕಣ್ಣಿಗೆ ಮಣ್ಣು ರಾಚುವುದು ಗ್ಯಾರಂಟಿ .ಆದರೂ ಚಿತ್ರತಂಡವನ್ನು ಗಟ್ಟಿಗರು ಅಂತಾನೇ ಹೇಳಬೇಕು. ಸಿನಿಮಾ ಮಾಡುವಾಗ ಏನೆಲ್ಲಾ ಅನುಭವಿಸಬೇಕು ನೋಡಿ. ಎಷ್ಟೇ ತಯಾರಿ ಇದ್ದರು ಪ್ರಕೃತಿಯ ಇಚ್ಛೆಯ ಮುಂದೆ ನಾವು ತೃಣ ಮಾತ್ರ.

ಮುಂದೆ ದಿ ವಿಲನ್ ಗೆ ಯಾವ ಅಡ್ಡಿ ಆತಂಕಗಳು ಬಾರದೆ ಇರಲಿ. ಸುಸೂತ್ರವಾಗಿ ಚಿತ್ರೀಕರಣ ನೆರವೇರಲಿ ಅಂತ ಹಾರೈಸೋಣ.

ವಿಡಿಯೋ ಇಲ್ಲಿದೆ

-Ad-

Leave Your Comments