“ತಿಕ್ಲ” ಹಾಡ್ಕಂಡ್ ಬರ್ತಾವ್ನೆ ..!

ತಿಕ್ಲ ಅಂದ್ರೆ ಇವನ್ಯಾರಪ್ಪ ಅಟಕಾಯಿಸ್ಕೊಂಡ  ಅನ್ಕೊಬೇಡಿ.ಈ ತಿಕ್ಲ ತುಂಬಾ ಒಳ್ಳೆಯವನಂತೆ . ಸ್ಯಾಂಡಲ್ ವುಡ್ ಅಂಗಳಕ್ಕೆ ತಿಕ್ಲ ಅನ್ನೋ ಹೊಸ ಸಿನಿಮಾ ಬರುತ್ತಿದೆ . ಎಲ್ಲರೂ ಹೊಸಬರೆ ಸೇರಿಕೊಂಡು ಶ್ರಮಪಟ್ಟು ಚಿತ್ರ ನಿರ್ಮಾಣ ಮಾಡಿದ್ದಾರೆ. ಪಕ್ಕಾ ಲೋಕಲ್ ಸ್ಟೈಲ್ ನಲ್ಲಿ ಹೆಸರು ಇಟ್ಕೊಂಡು ಗಮನ ಸೆಳೆದಿದೆ  ಚಿತ್ರತಂಡ. ಒಂದೊಳ್ಳೆ ಉದ್ದೇಶ ಇಟ್ಕೊಂಡು ಸಿನಿ ಪ್ರೇಕ್ಷಕರಿಗೂ ಒಳ್ಳೆ  ಮೆಸೇಜ್ ಕೊಡುವ ಉದ್ದೇಶದಿಂದ ಸಿನಿಮಾ ಮಾಡಿದ್ದೇವೆ ಅಂತಾರೆ ಚಿತ್ರದ ನಿರ್ಮಾಪಕ ಜಕ್ಕನಹಳ್ಳಿ ಶಿವು.

ನನ್ನ ಹಾಡು ನಿಮ್ಮದು ಅಂತಿದ್ದಾನೆ ತಿಕ್ಲ 

ಇಂದು  ಸಂಜೆ ತಿಕ್ಲ ಸಿನಿಮಾದ  ಆಡಿಯೋ ರಿಲೀಸ್ ಕಾರ್ಯಕ್ರಮ ನಡೀತಿದೆ. ಮಲ್ಲೇಶ್ವರಂ ನ ರೇಣುಕಾಂಬ ಸ್ಟುಡಿಯೋದಲ್ಲಿ ಸಂಜೆ 6 ಗಂಟೆಗೆ ಸಮಯ ನಿಗದಿ ಮಾಡಲಾಗಿದೆ. ಸೌತ್ ಇಂಡಿಯಾದ ಖ್ಯಾತ ಆಡಿಯೋ ಕಂಪನಿಯಾಗಿರುವ ಲಹರಿ ಸಂಸ್ಥೆ ಆಡಿಯೋ ರೈಟ್ಸ್ ಪಡೆದುಕೊಂಡಿದೆ. ಈ ತಿಕ್ಲ ಸಿನಿಮಾ ಯಾವಾಗ ಶೂಟ್ ಆಯ್ತು? ಯಾವಾಗ ಪೋಸ್ಟ್ ಪ್ರೊಡಕ್ಷನ್ ಆಯ್ತು ಅನ್ನುವುದನ್ನು ಸುದ್ದಿಯಾಗಲು ಬಿಡದೆ ಸೈಲೆಂಟ್ ಆಗಿ ಸಿನಿಮಾ ಮಾಡಿ ಮುಗಿಸಿದ್ದೇವೆ . ಆದ್ರೆ ನೇರವಾಗಿ ಥಿಯೇಟರ್ ಗೆ ಬರಲು ಸಜ್ಜಾಗಿದ್ದಾನೆ ತಿಕ್ಲ. ಸಾಕಷ್ಟು ಕನಸು ಕಟ್ಟಿಕೊಂಡಿರುವ ಹೊಸಬರು ಒಂದೊಳ್ಳೆ ಸಿನಿಮಾ ಜೊತೆ ಗಾಂಧಿನಗರಕ್ಕೆ ಎಂಟ್ರಿಕೊಡ್ತಿದ್ದೇವೆ . ಸಿನಿಮಾ ಬಗ್ಗೆ ಭಾರೀ ಕನಸು ಇಟ್ಟುಕೊಂಡಿರುವ ತಂಡ, ಅಂಬೆ ಕಾಲಿಡುತ್ತ ಕರುನಾಡಿಗೆ ಬರ್ತಿದ್ದು, ಕನ್ನಡಿಗರು ಗೆಲ್ಲಿಸಿ ಆಶೀರ್ವದಿಸಿ  ಅನ್ನುವುದು ನಿರ್ಮಾಪಕ ಜಕ್ಕನಹಳ್ಳಿ ಶಿವು ಅವರ ಮನವಿ.

ಬಿಗ್ ಬಾಸ್ ಪ್ರಥಮ್ ಕಾರ್ಯಕ್ರಮದ ಹೈಲೆಟ್ಸ್..!

ತಿಕ್ಲ ಸಿನಿಮಾದ  ಹೀರೋ ವಿಜಯ್ ವೆಂಕಟ್ , ಹೀರೋಯಿನ್ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಖ್ಯಾತಿಯ ರಾಧಾ ಆಡಿಯೋ ರಿಲೀಸ್ ಗೆ ಬರ್ತಿದ್ದಾರೆ .ಎಲ್ಲಕ್ಕಿಂತ ಮಿಗಿಲಾಗಿ    ಬಿಗ್ ಬಾಸ್ ನ ಲಾರ್ಡ್ ಖ್ಯಾತಿಯ, ವಿನ್ನರ್ ಒಳ್ಳೆ ಹುಡುಗ ಪ್ರಥಮ್ ಆಡಿಯೋ ರಿಲೀಸ್ ಮಾಡಲಿದ್ದಾರೆ .   ಹೊಡಿಮಗ ಹೊಡಿಮಗ ಖ್ಯಾತಿಯ ಗುರುರಾಜ್ ಹೊಸಕೋಟೆ ಜೊತೆಯಾಗಲಿದ್ದಾರೆ.
ತಿಕ್ಲ ಸಿನಿಮಾ ಹಾಡುಗಳು ಸಿನಿಪ್ರಿಯರಿಗೆ ಇಷ್ಟವಾಗುತ್ತೆ ಅನ್ನೋ  ವಿಶ್ವಾಸ ತಂಡಕ್ಕೆ ಇದೆ.

-Ad-

Leave Your Comments