ಕುಮಾರಸ್ವಾಮಿ ಜೀವನಗಾಥೆ “ಭೂಮಿ ಪುತ್ರ”ನಿಗೆ ವಿಘ್ನ ?!

ಭೂಮಿ ಪುತ್ರ ಸಿನಿಮಾ ಟೈಟಲ್‌ಗೆ ಆರಂಭದಲ್ಲಿಯೇ ವಿಘ್ನ ಎದುರಾಗಿದೆ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಜೀವನಾಧಾರಿತ ಕತೆ ಸಿನಿಮಾ ಆಗ್ತಿದೆ, ಸಿನಿಮಾಗೆ ಭೂಮಿಪುತ್ರ  ಅಂತ ಟೈಟಲ್ ಇಡಲಾಗಿತ್ತು.

ಕಳೆದ ಎರಡು ದಿನಗಳ ಹಿಂದಷ್ಟೇ ನಿರ್ದೇಶಕ ಎಸ್ ನಾರಾಯಣ್ ಭೂಮಿಪುತ್ರ ಸಿನಿಮಾ ಮಾಡೋದಾಗಿ ಅನೌನ್ಸ್ ಮಾಡಿದ್ರು ಆದ್ರೀಗ ಈ ಟೈಟಲ್ ನಿರ್ಮಾಕ ದೊಡ್ಮೆನ ವೆಂಕಟೇಶ್ ಅವರ ಹತ್ತಿರ ಇದೆ, ಎಸ್ ನಾರಾಯಣ್ ಅವರು ವೆಂಕಟೇಶ್ ಅನುಮತಿ ಇಲ್ಲದೇ ಭೂಮಿಪುತ್ರ ಅಂತ ಅನೌನ್ಸ್ ಮಾಡಿರೋದು ಏಕೆ ಅನ್ನೋ ಪ್ರಶ್ನೆ ಕಾಡ್ತಿದೆ.

ಸ್ಯಾಂಡಲ್‌ವುಡ್‌ನ ಟೈಟಲ್ ಕಾಂಟ್ರವರ್ಸಿಗೆ ಕೊನೆಯೇ ಇಲ್ವಾ ಅನ್ನುಂತೆ ಮಾಡ್ತಿವೆ ಟೈಟಲ್ ವಿವಾಧಗಳು..ವೆಂಕಟೇಶ್ ಹೇಳೋ ಪ್ರಕಾರ ಈ ಸಿನಿಮಾವನ್ನ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್‌ಗೆ ಮಾಡೋದಾಗಿ ಪ್ಲಾನ್ ಮಾಡಿದ್ರು ಅನ್ನೋ ಮಾಹಿತಿ ಇದೆ..ಆದ್ರೀಗ ಅರ್ಜುನ್ ಸರ್ಜಾ, ಎಸ್ ನಾರಾಯಣ್ ನಿರ್ದೇಶನದಲ್ಲಿ ಆಕ್ಟ್ ಮಾಡ್ತಿದ್ದಾರೆ..ಹಾಗಾದ್ರೆ ಯಾರಾಗ್ತಾರೆ ಸ್ಯಾಂಡಲ್‌ವುಡ್‌ನ ಭೂಮಿ ಪುತ್ರ?

-Ad-

Leave Your Comments