ನಟ ಸಂತೋಷ್ ಮೇಲೆ ಟ್ರಾಫಿಕ್ ಪೊಲೀಸರಿಂದ ದೌರ್ಜನ್ಯ

ಬೆಂಗಳೂರಲ್ಲಿ ಚಿತ್ರನಟನ ಮೇಲೆ ಟ್ರಾಫಿಕ್ ಪೊಲೀಸರಿಂದ ಹಲ್ಲೆಯಾದ ಘಟನೆ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ನವೆಂಬರ್ 3ರಂದು ನಟ ಪಿ.ಸಂತೋಷ್ ಎಂಬುವವರ ಮೇಲೆ ವೈಟ್ ಫೀಲ್ಡ್ ಟ್ರಾಫಿಕ್ ಪೊಲೀಸರು ಥಳಿಸಿದ್ದಾರೆ.

ಡಿ, ಮಾದ ಮತ್ತು ಮಾನಸಿ ಹಾಗೂ ಮುಗಿಲು ಚಿತ್ರಗಳಲ್ಲಿ ಅಭಿನಯಿಸಿರುವ ಸಂತೋಷ್ ಅವರನ್ನು ಐವರು ಪೇದೆಗಳು 5.30ರಿಂದ 10.30ರವರೆಗೆ ಕೂಡಿ ಹಾಕಿ ಥಳಿಸಿದ್ದಾರೆ. ಜೀವನೋಪಾಯಕ್ಕಾಗಿ ನಗರದಲ್ಲೇ ಸ್ವಂತ ಟ್ಯಾಕ್ಸಿ ಓಡಿಸುತ್ತಿರುವ ಸಂತೋಷ್ ನವೆಂಬರ್ 3 ರಂದು ಪ್ರಯಾಣಿಕರನ್ನ ಪಿಕಪ್ ಮಾಡಲು ತೆರಳಿದ್ದರು. ಈ ಸಂದರ್ಭದಲ್ಲಿ ಐಟಿಪಿಎಲ್ ನ ಜಿ ಆರ್ ಟೆಕ್ ಪಾರ್ಕ್ ಮುಂದೆ ಟ್ಯಾಕ್ಸಿ ನಿಲ್ಲಿಸಿಕೊಂಡಿದ್ದ ಸಂತೋಷ್ ಜತೆಗೆ ಪಾರ್ಕಿಂಗ್ ವಿಚಾರವಾಗಿ ಟ್ರಾಫಿಕ್ ಪೇದೆಗಳು ಜಗಳ ಮಾಡಿದ್ದರು.

ಸಂತೋಷ್ ಅವರ ಇಟಿಯೋಸ್ ಕಾರಿನ ಕೀ ಕಿತ್ತುಕೊಂಡ ಪೇದೆ ಗದರಿದರು. ಆಗ ಸಂತೋಷ್ ಕೀ ಕಿತ್ತುಕೊಂಡಿದ್ದನ್ನ ಪ್ರಶ್ನಿಸಿ ಪೇದೆಗಳ ಜತೆ ವಾಗ್ವಾದ ನಡೆಸಿದ್ದರು. ವಾಗ್ವಾದ ನಡೆಸಿದ ಸಂತೋಷರನ್ನು ಠಾಣೆಗೆ ಕರೆದೊಯ್ದ ಪೊಲೀಸರು ಥಳಿಸಿದರು. ಒದೆ ತಿಂದು ಅಸ್ವಸ್ಥನಾಗಿದ್ದ ಸಂತೋಷರನ್ನು ಟ್ರಾಫಿಕ್ ಪೊಲೀಸರ ಕರ್ತವ್ಯಕ್ಕೆ ಅಢ್ಡಿಪಡಿಸಿದನೆಂದು ದೂರು ನೀಡಿ ಕಾಡುಗೋಡಿ ಪೊಲೀಸರಿಗೆ ಒಪ್ಪಿಸಿದ್ದರು. ಊಟ, ಬಸ್ ಚಾರ್ಜ್ ಕೊಟ್ಟು ಸಂತೋಷ್ನ್ನ ಮನೆಗೆ ಕಳುಹಿಸಿದ್ದ ಕಾಡುಗೋಡಿ ಪೊಲೀಸರು ಮಗನಿಗೆ ಥಳಿಸಿದ್ದನ್ನ ಪ್ರಶ್ನಿಸಲು ಹೋಗಿದ್ದ ಸಂತೋಷ್ ತಾಯಿ ಮೇಲೂ ದೌರ್ಜನ್ಯ ನಡೆಸಿದ್ದಾರೆ.

ಮಗನ ಪರ ಮಾತನಾಡಲು ಬಂದರೆ ನಿನ್ನೆ ಮೇಲೂ ಕೇಸ್ ಹಾಕುತ್ತೇವೆಂದು ಟ್ರಾಫಿಕ್ ಪೊಲೀಸರು ಬೆದರಿಕೆ ಹಾಕಿ ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಪೊಲೀಸರ ನಡವಳಿಕೆಯಿಂದ ಬೇಸತ್ತ ಇವರು ಅಧಿಕಾರ ದುರ್ಬಳಕೆ ಮಾಡಿಕೊಂಡ ಆರೋಪದ ಮೇಲೆ ನಗರ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದು, ದೌರ್ಜನ್ಯ ನಡೆಸಿದ ಪೇದಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

-Ad-

Leave Your Comments