ರಾಜಕೀಯಕ್ಕೆ ಮೆಟ್ಟಿಲಾಗುತ್ತಾ ಉಪ್ಪಿಯ ೫೦ನೇ ಸಿನಿಮಾ !?

ಸದ್ಯಕ್ಕೆ ಪ್ರಜಾಕೀಯದಲ್ಲಿ ಬಿಝಿಯಾಗಿರುವ ಉಪೇಂದ್ರ ‘ಉಪ್ಪಿ ರುಪ್ಪಿ’ ಸಿನಿಮಾದ ಚಿತ್ರೀಕರಣ ಅಕ್ಟೋಬರ್‌ ಎಂಟರಿಂದ ಥಾಯ್ಲೆಂಡ್‌ನಲ್ಲಿ ಚಿತ್ರೀಕರಣ ಆರಂಭಗೊಳ್ಳಲಿದ್ದು, ಈ ಚಿತ್ರದಲ್ಲಿ ಉಪ್ಪಿ ನೆಗಟಿವ್‌ ಇಮೇಜ್‌ ಇರುವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈ ಚಿತ್ರದ ನಿರ್ದೇಶಕ ಮಾದೇಶ್‌ ಹೇಳುವ ಪ್ರಕಾರ ‘ಉಪ್ಪಿ ರುಪ್ಪಿ’ ಸದ್ಯ ಪ್ರಪಂಚದಲ್ಲಿ ನಡೆಯುತ್ತಿರುವ ಲಂಚದ ಸಬ್ಜೆಕ್ಟ್ನ್ನು ಒಳಗೊಂಡಿದೆ. ಈಗ ಉಪೇಂದ್ರ ಸದ್ಯ ಪ್ರಜಾಕೀಯದ ಮೂಲಕ ರಾಜಕಾರಣದಲ್ಲಿ ಸಂಚಲನ ಮೂಡಿಸಲು ತಯಾರಿ ನಡೆಸುತ್ತಿದ್ದಾರೆ. ಈ ರಾಜಕೀಯಕ್ಕೂ ‘ಉಪ್ಪಿ ರುಪ್ಪಿ’ ಒಂದು ವೇದಿಕೆಯಾಗುತ್ತದೆ ಎಂದಿದ್ದಾರೆ.
ಉಪೇಂದ್ರ 50ನೇ ಸಿನಿಮಾವನ್ನು ನಿರ್ದೇಶನ ಮಾಡುತ್ತಾರೆ ಎಂಬೆಲ್ಲ ಸುದ್ದಿಯಾಗಿತ್ತು. ಆದರೆ ಈಗ ಸಿಕ್ಕಿರುವ ಮಾಹಿತಿ ಪ್ರಕಾರ ಉಪ್ಪಿರುಪ್ಪಿಯೇ 50ನೇ ಸಿನಿಮಾವಾಗುತ್ತದೆ. ಉಪೇಂದ್ರ ಮೊದಲಿನಿಂದಲೂ ನೋಟು ಅಮಾನಿಕರಣವನ್ನು ಬೆಂಬಲಿಸಿಕೊಂಡು ಬಂದವರು. ಈ ಉಪ್ಪಿ ರುಪ್ಪಿ ಸಿನಿಮಾದಲ್ಲಿಯೂ ಅದೇ ಸಬ್ಜೆಕ್ಟ್ ಇದ್ದು, ಉಪೇಂದ್ರ ಈ ಸಿನಿಮಾದ ಕತೆಯ ಡಿಸ್ಕಷನ್‌ನಲ್ಲಿಯೂ ಪಾಲ್ಗೊಂಡಿದ್ದಾರೆ.
50ನೇ ಸಿನಿಮಾ ಯಾವುದಾಗುತ್ತದೆ ಎಂದು ಕೇಳಿದಾಗಲೆಲ್ಲಾ ಉಪ್ಪಿ, ನನ್ನ ರಾಜಕೀಯ ಪ್ರವೇಶವೇ 50ನೇ ಚಿತ್ರ ಎಂದು ಹೇಳುತ್ತಿದ್ದರು, ಈಗ ಉಪ್ಪಿ ರುಪ್ಪಿ ಸಿನಿಮಾದಲ್ಲಿ ರಾಜಕೀಯವಕ್ಕೆ ಪ್ರವೇಶಕ್ಕೆ ವೇದಿಕೆಯಾಗುವಂತಹ ಸಾಕಷ್ಟು ಅಂಶಗಳಿವೆ. ಹಾಗಾಗಿ ಇದೆನ್ನೇ ಅವರು 50ನೇ ಸಿನಿಮಾವಾಗಿಸಲು ಸಿದ್ದತೆ ನಡೆಸಿದ್ದಾರೆ. ಜನ ನನ್ನನ್ನು ರಿಯಲ್‌ ಸ್ಟಾರ್‌ ಎಂದು ಕರೆದು ಕರೆದೂ 49 ಸಿನಿಮಾಗಳಾಗಿವೆ. ಈಗ ರಿಯಲ್‌ ಲೈಫ್‌ಗೆ ಹತ್ತಿರವಾಗುವಂತಹ ಸಿನಿಮಾ 50ನೇಯದಾಗುತ್ತದೆ ಎನ್ನುತ್ತಾರೆ ಉಪ್ಪಿ.
ಇದರ ಜತೆಗೆ ಹೋಮ್‌ ಮಿನಿಸ್ಟರ್‌, ನಾಗಾರ್ಜುನ ಚಿತ್ರಗಳನ್ನು ಉಪ್ಪಿ ಮುಗಿಸಿಕೊಡಲಿದ್ದಾರೆ. ಉಪ್ಪಿ ರುಪ್ಪಿಗೆ ವಿಜಯಲಕ್ಷ್ಮೇ ಅರಸ್‌ ಬಂಡವಾಳ ಹಾಕುತ್ತಿದ್ದು, ಈ ಚಿತ್ರದಲ್ಲಿ ಸಾಧು ಕೋಕಿಲಾ, ರವಿಶಂಕರ್‌, ಶೋಭರಾಜ್‌ ಸೇರಿ ಸಾಕಷ್ಟು ಮಂದಿ ನಟಿಸುತ್ತಿದ್ದಾರೆ. ರಚಿತಾ ರಾಮ್‌ ಇದೇ ಮೊದಲಿಗೆ ಉಪ್ಪಿಗೆ ಜೋಡಿಯಾಗಿದ್ದಾರೆ.
-Ad-

Leave Your Comments