ಉಪ್ಪಿ ಹೊಸ ಹೊಸ ಸಾಹಸ !

ಪ್ರಜಾಕೀಯ ಅಂತ ಹೇಳಿಕೊಂಡು ರಾಜಕೀಯಕ್ಕೆ ಬಂದ ಉಪೇಂದ್ರ ಇದೀಗ ಮತ್ತೊಂದು ರಾಜಕೀಯ ಪಕ್ಷ ಸ್ಥಾಪನೆಗೆ ಮುಂದಾಗಿದ್ದಾರೆ. ಇದನ್ನು ಸ್ವತಃ ಉಪೇಂದ್ರ ಅವರೇ ಘೋಷಣೆ ಮಾಡಿದ್ದಾರೆ. ಈಗಾಲೇ ಕರ್ನಾಟಕ ಪ್ರಜ್ಞಾವಂತರ ಜನತಾ ಪಾರ್ಟಿ (KPJP) ಸೇರಿದ್ದ ನಟ ಉಪೇಂದ್ರ, ಪಕ್ಷದಲ್ಲಿ ಉಂಟಾದ ಸಣ್ಣ ಪುಟ್ಟ ಭಿನ್ನಮತೀಯ ವಿಚಾರಗಳಿಂದ ಬೇಸತ್ತು ಪ್ರಜಾಕೀಯ ಎಂಬ ಹೊಸ ರಾಜಕೀಯ ಪಕ್ಷ ಸ್ಥಾಪನೆಗೆ ನಿರ್ಧಾರ ಮಾಡಿದ್ದಾರೆ.
ಈ ಮೊದಲು ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ ಯಲ್ಲಿ ಕೆಲಸ ಮಾಡ್ತಿದ್ದ ಉಪೇಂದ್ರ ವಿರುದ್ಧ ನಿನ್ನೆ ಸಂಸ್ಥಾಪಕ ಅಧ್ಯಕ್ಷ ಮಹೇಶ್ ಗೌಡ ಸಿಡಿದೆದ್ದಿದ್ರು. ಪಕ್ಷದಿಂದ ಉಪೇಂದ್ರ ಅವರನ್ನು ಉಚ್ಛಾಟಿಸುವ ಹೇಳಿಕೆಯನ್ನೂ ನೀಡಿದ್ರು. ಈ ಬೆಳವಣಿಗೆ ಬಳಿಕ ಬೇಸರಗೊಂಡಿದ್ದ ಉಪೇಂದ್ರ ಬೇರೊಂದು ಪಕ್ಷ ಸ್ಥಾಪಿಸಿ, ರಾಜಕೀಯ ಮಾಡಲು ನಿರ್ಧಾರ ಮಾಡಿದ್ದಾರೆ. ಈ ಬಾರಿಯ ವಿಧಾನಸಭಾ ಚುನಾವಣೆಗೆ ಆಯೋಗ ಮಾನ್ಯತೆ ನೀಡದಿದ್ರೆ, ಬಿಬಿಎಂಪಿ ಚುನಾವಣೆಗೆ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ.
ರುಪ್ಪೀಸ್ ರೆಸಾರ್ಟ್ ಬಳಿ ಸೇರಿದ್ದ ನೂರಾರು ಕಾರ್ಯಕರ್ತರು ಉಪೇಂದ್ರ ಅವರಿಗೆ ಬೆಂಬಲಿಸಿದ್ದಾರೆ. ಉಪೇಂದ್ರ ಯಾವುದೇ ನಿರ್ಧಾರ ಕೈಗೊಂಡರು  ನಮ್ಮ ಒಪ್ಪಿಗೆ ಇದೆ ಎಂದಿದ್ದಾರೆ. ಈ ನಡುವೆ ಬಿಜೆಪಿ ಸೇರ್ತಾರೆ ಅನ್ನೋ ಮಾತಿನ ಬಗ್ಗೆ ಮಾಧ್ಯಮದವರು ಕೇಳಿದಾಗ ನಾನು ಯಾವುದೇ ಪಕ್ಷ ಸೇರುವುದಿಲ್ಲ. ನಾನು ನನ್ನ ಸ್ವಂತ ರಾಜಕೀಯ ಪಕ್ಷದ ಮೂಲಕವೇ ಕೆಲಸ ಮಾಡ್ತೇನೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಆದ್ರೆ ಇದೀಗ ಒಮ್ಮೆ ಎಡವಟ್ಟು ಮಾಡಿಕೊಂಡಿರುವ ಉಪೇಂದ್ರ ಮತ್ತೊಮ್ಮೆ ತೊಂದರೆಗೆ ಒಳಗಾಗದಿರಲಿ ಅನ್ನೋದು ಅಭಿಮಾನಿಗಳ ಆಶಯ.
ಜ್ಯೋತಿ ಗೌಡ, ನಾಗಮಂಗಲ
-Ad-

Leave Your Comments