ಉಪೇಂದ್ರ ಹೊಸ ಸಿನಿಮಾಕ್ಕೆ ಶುಭ ಮಹೂರ್ತ !!

ವಿಜಯಲಕ್ಷ್ಮಿ ಅರಸ್ ಬ್ಯಾನರ್ ಅಡಿಯಲ್ಲಿ ರಿಯಲ್ ಸ್ಟಾರ್ ಉಪೇಂದ್ರ –  ಡಿ೦ಪಲ್ ಕ್ವೀನ್ ರಚಿತಾ ರಾಮ್ ಮುಖ್ಯ ಭೂಮಿಕೆಯಲ್ಲಿರುವ ಹೊಸ ಚಿತ್ರದ ಮಹೂರ್ತ ಇಂದು ನೆರವೇರಿದೆ .

20161212_123007uppi-pooje

ಕಂಠೀರವ ಸ್ಟುಡಿಯೋದಲ್ಲಿ ಅದ್ದೂರಿ ಮಹೂರ್ತ

ಇನ್ನೂ ಹೆಸರಿಡದ ವಿಜಯಲಕ್ಷ್ಮಿಯವರ ಅರಸ್ ಅವ್ರ ಕನಸಿನ ಚಿತ್ರದ ಮಹೂರ್ತಕ್ಕಾಗಿ ಬೃಹತ್ ಶಿವಲಿಂಗ ನಿರ್ಮಾಣವಾಗಿತ್ತು. ಮಂತ್ರ ಘೋಷದೊಂದಿಗೆ ಪ್ರಾರಂಭವಾದ ಪೂಜೆಗೆ ಚಿತ್ರ ತಂಡದ ಪ್ರಮುಖರು, ಹಿತೈಷಿಗಳು ಸಡಗರದಿಂದ ಭಾಗವಹಿಸಿದರು. ನಿರ್ಮಾಪಕಿ ವಿಜಯಲಕ್ಷ್ಮಿ ಕ್ಲಾಪ್ ಮಾಡಿದ್ರು.

20161212_103530

ಉಪೇಂದ್ರ ರಚಿತಾ ರಾಮ್ ಶಿವಲಿಂಗಕ್ಕೆ ಪುಷ್ಪಾರ್ಚನೆ ಮಾಡುವ ಮೊದಲ ದೃಶ್ಯ ಸೆರೆ ಹಿಡಿಯಲಾಯಿತು .

20161212_104309

ರಿಯಲ್ ಸ್ಟಾರ್ ರಿಯಲ್ ಟಾಕ್ !!

20161212_152112-1

ಇದು ಒಂಥರಾ ಬುದ್ದಿವಂತ, ರಕ್ತಕಣ್ಣೀರು ಕ್ಯಾಟಗರಿಗೆ ಸೇರಿದ ಸಿನಿಮಾ.ವಿಡಂಬನೆ ಇರೋವಂಥ ಸಿನಿಮಾ.ಒಳ್ಳೆ ಸಬ್ಜೆಕ್ಟ್ ಇದೆ. ಸ್ಕ್ರಿಪ್ಟ್ ಕೆಲಸದಲ್ಲಿ ನಾನು ಸ್ವಲ್ಪ ಮಟ್ಟಿಗೆ ತೊಡಗಿಸಿ ಕೊಳ್ತೀನಿ. ಸ್ವಲ್ಪ ಕಾಲೆಳೆಯುವ ಸಿನಿಮಾನೇ.

ಹೊಸ ಸಿನಿಮಾ ಉತ್ಸಾಹದಲ್ಲಿ ಡಿ೦ಪಲ್ ರಾಣಿ ರಚಿತಾ

ಉಪೇಂದ್ರ ಅವರ ಸಿನಿಮಾ ನೋಡ್ತಾ ಬೆಳೆದವಳು ನಾನು. ಅವರ ಜೊತೆ ಅಭಿನಯಿಸ್ತಾ ಇರೋ ಮೊದಲ ಸಿನಿಮಾ ಇದು. ತುಂಬಾ ಖುಷಿಯಲ್ಲಿದ್ದೇನೆ. ಪಾತ್ರವು ಚೆನ್ನಾಗಿದೆ. ಟ್ರಡಿಷನಲ್ ಹುಡುಗಿ . ಸ್ಕೂಲ್ ಯುನಿಫಾರ್ಮ್ ಹಾಕ್ಕೊಳ್ಳೋ ಸನ್ನಿವೇಶಾನು ಇದೆ. ಉಪೇಂದ್ರ ಅವ್ರ ಜೊತೆ ನಟಿಸಬೇಕಾದ್ರೆ ಪಾತ್ರ ಸ್ಟ್ರಾಂಗ್ ಅನ್ನೋ ಆಸೆ ಇತ್ತು. ಅಂಥಾ ಅವಕಾಶ ಈ ಹೊಸ ಚಿತ್ರದಲ್ಲಿ ಸಿಕ್ಕಿದೆ. ಕಥೆ ತುಂಬ ಚೆನ್ನಾಗಿದೆ.

 ವಿಜಯಲಕ್ಷ್ಮಿ ಮೊದಲ ಕನಸು 

ನಿರ್ಮಾಪಕಿ ವಿಜಯಲಕ್ಷ್ಮಿ ಅರಸ್ ಕಂಠೀರವ ಸ್ಟುಡಿಯೋ ಛೇರ್ಮನ್ ಆಗಿದ್ದವರು . ಇದು ಅವರ ಮೊದಲ ಚಿತ್ರ . ಕಥೆ -ಚಿತ್ರಕಥೆಯೂ ಅವರದ್ದೇ . ಅವರೇ ಹೇಳಿದಂತೆ ಇದು ಅವರ ಕನಸಿನ ಸಿನಿಮಾ. ಚಿಕ್ಕಪ್ಪ ಕೆಂಪರಾಜ ಅರಸ್ ಸಿನಿಮಾ ಮಾಡುವುದನ್ನು ನೋಡುತ್ತಾ ಬೆಳೆದ ವಿಜಯಲಕ್ಷ್ಮಿಯವರಿಗೆ 12 ವರುಷದ ಬಾಲ್ಯದಲ್ಲೇ ತಾನೂ ಒಂದು ಸಿನಿಮಾ ಮಾಡಬೇಕು ಅನ್ನುವ ಆಸೆ ಹುಟ್ಟಿಕೊಂಡಿತ್ತಂತೆ. ಅದೀಗ ನನಸಾಗುವ ಘಳಿಗೆ ಕೂಡಿ ಬಂದಿದೆ. ತಾವು  ಬರೆದಿರುವ ಕಥೆಗೆ ಉಪೇಂದ್ರ ಅವರಲ್ಲದೆ ಮತ್ಯಾರು ಸೂಕ್ತ ಅಲ್ಲ . ಅವರು ಅಭಿನಯಿಸಿದರೆ  ಮಾತ್ರ ಕಥೆಗೆ ನ್ಯಾಯ ಒದಗಿಸುವುದು ಸಾಧ್ಯ. ಜೊತೆಗೆ ರಚಿತಾ ರಾಮ್ ಸೌಮ್ಯ ಸ್ವಭಾವದ ಪಾತ್ರಕ್ಕೆ ಸರಿ ಹೊಂದುತ್ತಾರೆ, ಮುದ್ದಾದ ಹುಡುಗಿ  ಅನ್ನುವ ಕಾರಣಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ . ಇದು ಇಡೀ ಕುಟುಂಬ ಕುಳಿತು ನೋಡುವಂತ ಚಿತ್ರವಾಗಿ ನಿಮ್ಮ ಮುಂದೆ ಬರಲಿದೆಯಂತೆ.

ನಿರ್ದೇಶಕ ಮಾದೇಶ್ ಮಾತಿಗಿಳಿದಾಗ 

ನನ್ನ ಹಲವು ಚಿತ್ರಗಳನ್ನು ಜನ ಮೆಚ್ಚಿಕೊಂಡಿದ್ದಾರೆ. ಇದು ಕೂಡ ನಮ್ಮ ಜನರೆಲ್ಲಾ ಖುಷಿಯಿಂದ ನೋಡುವ ಸಿನಿಮಾ ಆಗಲಿದೆ. ಕಮರ್ಷಿಯಲ್ ಚಿತ್ರ. ಒಳ್ಳೆಯ ದಿನ ಇದೆ ಅನ್ನೋ ಕಾರಣಕ್ಕೆ ಮಹೂರ್ತ ಮಾಡಿದ್ದೇವೆ. ಇನ್ನು ಒಂದೆರಡು ತಿಂಗಳು ಸ್ಕ್ರಿಪ್ಟ್ ಕೆಲಸವಿದೆ. ನಿರ್ಮಾಪಕಿ ವಿಜಯಲಕ್ಷ್ಮಿ ಅವರದ್ದೇ ಕಥೆ . ಎಂ ಎಸ್ ರಮೇಶ್ , ಕೆ ವಿ ರಾಜು ನಮ್ಮ ಹೀರೋ ಉಪೇಂದ್ರ ಅವರು ಸಂಭಾಷಣೆ ಕೆಲಸದಲ್ಲಿ ಸೇರಿಕೊಳ್ಳುತ್ತೇವೆ. ಇದು ಉಪೇಂದ್ರ ಅವರ ಜೊತೆ ನನ್ನ ಮೊದಲ ನಿರ್ದೇಶನ . ಮನೋರಂಜನೆಯ ಜೊತೆ ಸಂದೇಶ ಇದ್ದೆ ಇರತ್ತೆ. ಉಪೇಂದ್ರ ಟಿಪಿಕಲ್ ಸ್ಟೈಲ್ ಸೇರಿಸಿ ಹೊಸದನ್ನೂ ಕೊಡ್ತೀವಿ. ದಸರಾ ಹಬ್ಬಕ್ಕೆ ತೆರೆಗೆ ತರುವ ಯೋಜನೆ ಇದೆ.

ಹೊಸಚಿತ್ರದ ಕ್ಯಾಮರಾ ಹೊಣೆ ರಾಜೇಶ್ ಕಟ್ಟಾ . ಎಡಿಟರ್ ಕೆ ಎಂ ಪ್ರಕಾಶ್ ,ಅಸೋಸಿಯೇಟ್ ಡೈರೆಕ್ಟರ್ ಲಿಂಗರಾಜ್ , ಕಾರ್ಯಕಾರಿ ನಿರ್ಮಾಪಕರು ಎ ಕೇಶವ,ಎ ನರಸಿಂಹ, ಮಂಜುನಾಥ

ಅದ್ದೂರಿಯಾಗಿ ನೆರವೇರಿದ ಹೊಸ ಚಿತ್ರದ ಮಹೂರ್ತಕ್ಕೆ ಆಗಮಿಸಿದ ವಾಣಿಜ್ಯಮಂಡಳಿ ಅಧ್ಯಕ್ಷ ಸಾ ರಾ ಗೋವಿಂದು, ಚಿನ್ನೇಗೌಡರು ಮತ್ತಿತರರು ಶುಭ ಕೋರಿದರು .

 

-Ad-

Leave Your Comments