ಯಡವಟ್ಟು ಮಾಡಿಕೊಳ್ಳುತ್ತಿದ್ದಾರಾ ಉಪೇಂದ್ರ ..?

ನಟ ಉಪೇಂದ್ರ ಕನ್ನಡ ಚಿತ್ರಲೋಕದಲ್ಲಿ ಎಷ್ಟು ಸ್ವಸಾಮರ್ಥ್ಯದಿಂದ ಮೇಲೆ ಬಂದಿದ್ದಾರೋ ಅದೇ ರೀತಿ ದೇಶ ರಾಜ್ಯವನ್ನು ಕಂಡರು ಕೂಡ ಅವರಿಗೆ ಅಷ್ಟೇ ಅಭಿಮಾನ, ದೇಶವನ್ನು ಮುನ್ನಡೆಸುವ ಬಗ್ಗೆ ಸಾಕಷ್ಟು ಆಶಾಭಾವದಿಂದ ಕನಸು ಕಾಣುತ್ತಿದ್ದಾರೆ.

ಒಂದು ರಾಜ್ಯ ಎಂದರೆ ಹೀಗಿರಬೇಕು ಈ ರೀತಿಯ ಅಭಿವೃದ್ಧಿ ಕೆಲಸಗಳಾಗಬೇಕು ಅದನ್ನು ಸಾರ್ವಜನಿಕವಾಗಿ ಹೀಗೆ ಹೇಳಿಕೊಳ್ಳಬೇಕು ಅಂತ ಸಾಕಷ್ಟು ಬಾರಿ ಮಾಧ್ಯಮಗಳಲ್ಲಿ ಮಾತನಾಡಿದ್ದಾರೆ.. ಭ್ರಷ್ಟಾಚಾರವನ್ನು ವಿರೋಧಿಸಬೇಕು ಶಿಷ್ಟಾಚಾರವನ್ನು ಪಾಲಿಸಬೇಕು ಒಬ್ಬ ರಾಜಕಾರಣಿಗೆ ಅದರಲ್ಲೂ ಯಾವುದೇ ಆಸ್ತಿ ಪಾಸ್ತಿ ಮಾಡುವ ಆಸೆ ಆಕಾಂಕ್ಷೆಗಳು ಇರಬಾರದು. ಕೇವಲ ಓರ್ವ ಪ್ರಜಾ ಸೇವಕನಾಗಿ ರಾಜಕಾರಣಿ ಕೆಲಸ ಮಾಡ್ಬೇಕು ಅಂತ ಮಾಧ್ಯಮಗಳ ಮುಂದೆ ತಮ್ಮ ಮನದಾಳದ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

ಆದರೆ ಬಿಜೆಪಿ ಸೇರಿ ಬಿಟ್ರೆ ಅದೆಲ್ಲ ಸಾಧ್ಯಾನಾ..?

ಬಿಜೆಪಿ ಒಂದು ರಾಷ್ಟ್ರೀಯ ಪಕ್ಷ ಆ ಪಕ್ಷಕ್ಕೆ ತನ್ನದೇ ಆದ ಸಿದ್ಧಾಂತಗಳು ಇರುತ್ತವೆ ದೆಹಲಿಯಲ್ಲಿ ಕುಳಿತು ಹೇಳುವ ಹೈಕಮಾಂಡ್ ಮಾತಿಗೆ ರಾಜ್ಯ ನಾಯಕರು ತಲೆದೂಗ ಬೇಕಾಗುತ್ತದೆ. ಆದರೆ ರಾಜ್ಯವೊಂದರ ಅಭಿವೃದ್ಧಿ ಬಗ್ಗೆ ಸಾಕಷ್ಟು ಕನಸು ಕಾಣುತ್ತಿರುವ ರಿಯಲ್ ಸ್ಟಾರ್ ಉಪೇಂದ್ರ ಗೆ ಬಿಜೆಪಿ ಪಕ್ಷದಲ್ಲಿ ಅಷ್ಟೊಂದು ಸ್ವಾತಂತ್ರ್ಯ ಸಿಗುತ್ತಾ..? ಇಲ್ಲಾ ರಾಷ್ಟ್ರೀಯ ಪಕ್ಷ ಹೇಳಿದ್ದಾಗೆ ನಟ ಉಪೇಂದ್ರ ಕೇಳಿಕೊಂಡು ರಾಜಕಾರಣಕ್ಕೆ ಹೊಂದಿಕೊಳ್ತಾರಾ ಅನ್ನುವ ಪ್ರಶ್ನೆ ಕನ್ನಡ ಚಿತ್ರರಂಗದ ಜತೆಗೆ ಸಾರ್ವಜನಿಕರನ್ನು ಕಾಡುತ್ತಿದೆ ..

ಮಹದಾಯಿ ವಿಚಾರದಲ್ಲಿ ಧ್ವನಿ ಎತ್ತಲು ಉಪೇಂದ್ರ ಗೆ ಸಾಧ್ಯಾನಾ..?

ನಟ ಉಪೇಂದ್ರ ಕರ್ನಾಟಕದ ಜನರಿಗೆ ತನ್ನ ಕೈಲಾದ ಸಹಾಯ ಮಾಡಬೇಕು ಆದಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು ಅನ್ನೋ ಮಹದಾಸೆಯಿಂದ ರಾಜಕಾರಣಕ್ಕೆ ಬರುತ್ತಿದ್ದಾರೆ. ಆದ್ರೆ ನಟ ಉಪೇಂದ್ರರ ಆಸೆ ಆಕಾಂಕ್ಷಿಗಳಲ್ಲಿ ಒಂದು ರಾಷ್ಟ್ರೀಯ ಪಕ್ಷದ ಕಪಿಮುಷ್ಟಿಯಲ್ಲಿ ಸಿಕ್ಕಿ ಬಿಡ್ತಾರಾ ಅನ್ನೋ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ . ಯಾಕಂದ್ರೆ ಗೋವಾ ಮತ್ತು ಕರ್ನಾಟಕದಲ್ಲಿ ನಡುವಿರುವ ಮಹದಾಯಿ ನದಿ ನೀರಿನ ಹಂಚಿಕೆ ವಿವಾದದಲ್ಲಿ ಬಿಜೆಪಿ ನಾಯಕರು ಹೈಕಮಾಂಡ್ ಮುಂದೆ ಬಾಲ ಮುದುರಿಕೊಂಡು ಕುಳಿತಿದ್ದಾರೆ . ದೆಹಲಿಯಲ್ಲಿರುವ ಹೈಕಮಾಂಡ್ ಹೇಳಿದ್ದೇ ನ್ಯಾಯ ಅದೇ ಕರ್ನಾಟಕದ ಪಾಲಿಗೆ ಪಂಚಾಮೃತ ವಾಗಿರುತ್ತದೆ.. ಆದ್ರೆ ಬಿಜೆಪಿ ಸೇರುವ ಉಪೇಂದ್ರ ಇದರ ಬಗ್ಗೆ ಧ್ವನಿ ಎತ್ತುತ್ತಾರಾ..? ಉಪೇಂದ್ರ ಧ್ವನಿ ಎತ್ತಿದ್ದರು ಅದಕ್ಕೆ ಹೈಕಮಾಂಡ್ ಮಟ್ಟದಲ್ಲಿ ನ್ಯಾಯ ಸಿಗುತ್ತಾ..?

ಬಿಜೆಪಿ ಸೇರಿ ಎಡವಟ್ಟು ಮಾಡಿಕೊಳ್ಳುತ್ತಿದ್ದಾರೆ ಉಪೇಂದ್ರ..?

ಹೌದು ಅಂತಾನೇ ಹೇಳಬಹುದು ಯಾಕೆಂದರೆ ದೇಶದಲ್ಲಿ ಈಗಿರುವ ರಾಜಕಾರಣಿಗಳು, ರಾಜಕೀಯ ಪಕ್ಷಗಳ ಬಗ್ಗೆ ಜನರಲ್ಲಿ ಅಸಹನೆ ಇದೆ . ಎಲ್ಲ ಪಕ್ಷಗಳಲ್ಲೂ ಒಳ್ಳೆಯವರು ಇದ್ದಾರೆ ಕೆಟ್ಟವರೂ ಇದ್ದಾರೆ ಭ್ರಷ್ಟಾಚಾರ ಮಾಡುವ ಜನರು ಯಾವ ಪಕ್ಷದಲ್ಲೂ ಇಲ್ಲ ಎಂದು ಹೇಳುವಂತಿಲ್ಲ ಅನ್ನೋದು ನಮ್ಮ ದೇಶದ ಜನರ ಭಾವನೆಯಾಗಿದೆ . ಆದರೆ ಭ್ರಷ್ಟಾಚಾರ ನಿರ್ಮೂಲನೆ ಮಾಡಬೇಕೆಂಬ ಮಹದಾಸೆ ಮತ್ತು ಕಲ್ಪನೆಗಳನ್ನು ಹೊತ್ತಿಕೊಂಡಿರುವ ನಟ ಉಪೇಂದ್ರ ಈಗಿರುವ ಪಕ್ಷದ ಜೊತೆ ಹೋದರೆ, ತಮ್ಮ ಮನಸೋ ಇಚ್ಛೆ ಕೆಲಸ ಮಾಡಲು ಸಾಧ್ಯವಾಗುತ್ತಾ ಇದನ್ನು ನಟ ಉಪೇಂದ್ರ ಯೋಚನೆ ಮಾಡಿರುವ ಯೋಚನೆ ಮಾಡಿದರೂ ಕೂಡ ಬಿಜೆಪಿ ಸಭೆಗೆ ಹೋಗುತ್ತಿರುವುದು ಯಾಕೆ ಅನ್ನೋದಕ್ಕೆ ಇನ್ನೇನು ಕೆಲವೇ ಕ್ಷಣದಲ್ಲಿ ಉತ್ತರ ಸಿಗಲಿದೆ .

ಜ್ಯೋತಿ ಎಂ ಗೌಡ

-Ad-

Leave Your Comments