ಉಪೇಂದ್ರ ದಂಪತಿ ಶಾಲೆಗೆ ಹೋಗಿದ್ದ್ಯಾಕೆ ?

ಸೂಪರ್ ಸ್ಟಾರ್ ಗಳ ಬದುಕಿನ ಬಗ್ಗೆ ಬಹುತೇಕರಿಗೆ ಕುತೂಹಲ ಇರುತ್ತದೆ. ಅವರೆಲ್ಲಾ ತಮ್ಮ ಮಕ್ಕಳ ಜೊತೆ ಸಮಯ ಕಳೆಯುತ್ತಾರೋ ಇಲ್ಲವೋ, ಅವರ ಶಾಲೆಗೆ ಹೋಗುತ್ತಾರೋ ಇಲ್ಲವೋ, ಪೋಷಕರ ಸಭೆ ನಡೆದಾಗ ಸ್ಟಾರ್ ಗಳೇ ಶಾಲೆಗೆ ಹೋಗುತ್ತಾರೋ ಇಲ್ಲ ಬೇರೆಯವರು ಹೋಗುತ್ತಾರೋ.. ಇಂಥಾ ಕುತೂಹಲಗಳಿಗೆ ಸದ್ಯ ಉತ್ತರ ಕೊಟ್ಟಿದ್ದು ಸೂಪರ್ ಸ್ಟಾರ್ ಉಪೇಂದ್ರ ಮತ್ತು ಪ್ರಿಯಾಂಕ ದಂಪತಿ.

ಉಪೇಂದ್ರ ದಂಪತಿ ಮಕ್ಕಳು ಬೆಂಗಳೂರಿನ ಪ್ರಸಿದ್ಧ ವ್ಯಾಲಿ ಸ್ಕೂಲ್ ನಲ್ಲಿ ಓದುತ್ತಿದ್ದಾರೆ. ಈ ವ್ಯಾಲಿ ಶಾಲೆಯ 39ನೇ ವರ್ಷದ ವಾರ್ಷಿಕೋತ್ಸವ ಇತ್ತೀಚೆಗೆ ನಡೆಯಿತು. ಆ ಸಮಾರಂಭದಲ್ಲಿ ಉಪೇಂದ್ರ ಮಕ್ಕಳಾದ ಆಯುಷ್ ಮತ್ತು ಐಶ್ವರ್ಯಾರ ನತ್ಯ ಕಾರ್ಯಕ್ರಮವೂ ಇತ್ತು. ಸಾಮಾನ್ಯವಾಗಿ ಮಕ್ಕಳಿಗೆ ತಮ್ಮ ಕಾರ್ಯಕ್ರಮ ನೋಡಲು ತಂದೆ ತಾಯಿ ಬರಬೇಕು ಅನ್ನುವ ಆಸೆ ಇರುತ್ತದೆ. ಆ ಆಸೆಯನ್ನು ಉಪೇಂದ್ರ ದಂಪತಿ ಈಡೇರಿಸಿದ್ದಾರೆ.
ಉಪೇಂದ್ರ ಮತ್ತು ಪ್ರಿಯಾಂಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಷ್ಟೇ ಅಲ್ಲ, ಮಕ್ಕಳೊಂದಿಗೆ ಮಕ್ಕಳಾಗಿ ಅಲ್ಲಿ ನಡೆದ ಕಾರ್ಯಕ್ರಮಗಳ ಫೋಟೋ ತೆಗೆದಿದ್ದಾರೆ. ಮಕ್ಕಳ ಜೊತೆ ಸೆಲ್ಫೀ ತೆಗೆಸಿಕೊಂಡು ಸಂಭ್ರಮಿಸಿದ್ದಾರೆ. ಈ ಚೆಂದವನ್ನು ನೀವೂ ಫೋಟೋಗಳಲ್ಲಿ ನೋಡಿ ಬಿಡಿ.
-Ad-

Leave Your Comments