ಹೋಮ್ ಮಿನಿಸ್ಟರ್ ಕನಸು ಕಾಣ್ತಿದ್ದಾರೆ ರಿಯಲ್ ಸ್ಟಾರ್ ಉಪೇಂದ್ರ

ರಿಯಲ್ ಸ್ಟಾರ್ ಉಪೇಂದ್ರ ಅವರು ಹೊಸದೊಂದು ಸಿನಿಮಾ ಮಾಡುತ್ತಿದ್ದಾರೆ. ಅದಕ್ಕೆ ‘ಹೋಮ್ ಮಿನಿಸ್ಟರ್’ ಎಂಬ ಹೆಸರನ್ನು ಇಡಲಾಗಿದೆ.

ಇತ್ತೀಚೆಗೆ ಆರ್‌ಆರ್‌ ನಗರದ ಸುಬ್ರಮಣ್ಯಸ್ವಾಮಿ ದೇವಸ್ಥಾನದಲ್ಲಿ ಸರಳವಾಗಿ ಸಿನಿಮಾ ಪೂಜೆ ನಡೆದಿದೆ. ಅಂದು ನಡೆದ ಸಿನಿಮಾ ಪೂಜೆ ವೇಳೆ ಉಪೇಂದ್ರ ಜತೆ ಪತ್ನಿ ಪ್ರಿಯಾಂಕ ಉಪೇಂದ್ರ ಸೇರಿದಂತೆ ಹಲವು ಮಂದಿ ಭಾಗಿಯಾಗಿದ್ದರು. ಸದ್ಯಕ್ಕೆ ತೆಲುಗಿನವರು ಸೇರಿ ಈ ಚಿತ್ರವನ್ನು ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಯಾರು ಆ್ಯಕ್ಷನ್‌-ಕಟ್‌ ಹೇಳುತ್ತಾರೆ ಎಂಬುದು ಸಸ್ಪೆನ್ಸ್‌ ಆಗಿದೆ. ಕನ್ನಡ, ತೆಲುಗು ಭಾಷೆಯಲ್ಲಿ ತಯಾರಾಗುತ್ತಿರುವ ಈ ಚಿತ್ರದ ಪೂಜೆ ಕಾರ್ಯ ಮುಗಿದಿದ್ದು, ಇಷ್ಟರಲ್ಲೇ ಚಿತ್ರ ಸೆಟ್ಟೇರಲಿದೆ. “ಹೋಮ್‌ ಮಿನಿಸ್ಟರ್‌’ ಅಂದಾಕ್ಷಣ, ಇದೊಂದು ರಾಜಕೀಯದ ಸುತ್ತ ಸುತ್ತುವ ಸಿನಿಮಾ ಇರಬಹುದೇ ಎಂಬ ಪ್ರಶ್ನೆ ಎದುರಾಗುತ್ತೆ. ಆದರೆ, ಈ ಚಿತ್ರದ ಶೀರ್ಷಿಕೆಗೂ, ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ.

ಸಾಮಾನ್ಯವಾಗಿ, ಮನೆಯಲ್ಲಿ ಮಾತನಾಡುವ ಪದ ಈ “ಹೋಮ್‌ ಮಿಸ್ಟರ್‌’. ಅದರಲ್ಲೂ ಗಂಡ, ಹೆಂಡತಿ ಕುರಿತು ಹೇಳುವಂತಹ ಪದವಿದು. ಈ ಚಿತ್ರದಲ್ಲೂ ಸಂಸಾರದ ಸಾರ ಇದೆ. ಹಾಗಾಗಿಯೇ ಈ  “ಹೋಮ್‌ ಮಿನಿಸ್ಟರ್‌’ ಅಂತ ನಾಮಕರಣ ಮಾಡಿ ಸಿನಿಮಾ ಮಾಡಲು ಸಜ್ಜಾಗಿದೆ ಚಿತ್ರತಂಡ. ಸದ್ಯಕ್ಕೆ ಉಪೇಂದ್ರ ಅವರು ಹೀರೋ ಆಗಿದ್ದಾರೆ. ಆದರೆ, ಅವರಿಗೆ ನಾಯಕಿ ಯಾರೆಂಬುದು ಪಕ್ಕಾ ಆಗಿಲ್ಲ. ಉಳಿದಂತೆ ಕಲಾವಿದರು, ತಂತ್ರಜ್ಞರು ಇನ್ನಷ್ಟೇ ಆಯ್ಕೆಯಾಗಬೇಕಿದೆ.

-Ad-

Leave Your Comments