ಹಾಡುಗಳ ಹೊತ್ತು ಬರುತ್ತಿದ್ದಾನೆ “ವರ್ಧನ “

"ವರ್ಧನ " ಚಿತ್ರದ ಹಾಡುಗಳು ಬಿಡುಗಡೆಗೆ ಸಿದ್ಧವಾಗಿವೆ.  ಇದೇ ತಿಂಗಳ 13ಕ್ಕೆ ವಿಭಿನ್ನ ರೀತಿಯಲ್ಲಿ ಹಾಡುಗಳನ್ನು ಕೇಳಿಸುವ ಪ್ರಯತ್ನ ಚಿತ್ರ ತಂಡದ್ದು . 

 

 

img-20161111-wa0074ಫುಲ್ ಫ್ಲೆಡ್ಜ್ಡ್  ನಾಯಕ ನಟನಾಗಿ, ಸಕ್ಕತ್ ಸ್ಮಾರ್ಟಾಗಿ  ಆಗಿ ಬರ್ತಾ ಇರೋ ಹರ್ಷವರ್ಧನ್ ಹೇಳುವ ಪ್ರಕಾರ “ವರ್ಧನ ” ಚಿತ್ರದ ಮಹೂರ್ತ ಕ್ಕ್ಕೆ ಕ್ಲಾಪ್ ಮಾಡಿದ್ದು ಒಬ್ಬ ಅಂಗವಿಕಲ . ಅದು ನನ್ನದೇ ಆಸೆ ಆಗಿತ್ತು. ನಿರ್ದೇಶಕ ನಾಗೇಂದ್ರ ಅರಸ್ , ನಿರ್ಮಾಪಕ  ಸುಧಾಕರ್ ಹಾಗೆಯೇ ಮಾಡೋಣ ಅಂಗವಿಕಲರೂ ನಮ್ಮವರೇ ಅಂತ ಪ್ರೋತ್ಸಾಹಿಸಿದ್ರು . ಆಡಿಯೋ ರಿಲೀಸ್ ಕೂಡ ಬೇರೆ ರೀತಿ ಮಾಡೋಣ ಇರುವವರಿಗೆ ಕೊಡುವುದಕ್ಕಿಂತ ಇಲ್ಲದವರಿಗೆ ಒಂದಿಷ್ಟು  ಖುಷಿ-ಸಿಹಿ ಹಂಚೋಣ ಅಂತ ನಮ್ಮ ನಿರ್ದೇಶಕರು ಹಾಗು  ನಮ್ಮ ತಂಡ ನಿರ್ಧರಿಸಿದೆ .ಇಲ್ಲೇ ಮಾಗಡಿ ರಸ್ತೆಯ ತಾವರೆಕೆರೆ ಬಳಿ ಇರೋ “ಸಾಯಿ ಅನಾಥಾಶ್ರಮ”ದಲ್ಲಿ ನಾಡಿದ್ದು 13ರಂದು ಬೆಳಿಗ್ಗೆ ೧೧ಕ್ಕೆ ಆಡಿಯೋ ರಿಲೀಸ್  ಇದೆ. ಹಾಡುಗಳು ತುಂಬಾನೇ ಚೆನ್ನಾಗಿ ಬಂದಿವೆ. ಗೆಲ್ಲುತ್ತೇವೆ ಅನ್ನೋ ಭರವಸೆ ಇದೆ.

 

fb_img_1462094892898ಇನ್ನು ನಿರ್ದೇಶಕ ನಾಗೇಂದ್ರ ಅರಸ್ ಗೆ ಈ ರೀತಿ ಕಣ್ಣಿಲ್ಲದವರ , ಕೈಕಾಲಿಲ್ಲದ ,ತಂದೆ -ತಾಯಿ ಇಲ್ಲದ ಅನಾಥ ಮಕ್ಕಳಿಗೆ ಅನ್ನ ಹಾಕುವುದರಲ್ಲಿ ಆನಂದವಿದೆಯಂತೆ . ಅವರೇ ಹೇಳುವ ಹಾಗೆ ದೊಡ್ಡ ದೊಡ್ಡ ಕಡೆ ರೀಲೀಸ್ ಮಾಡಬಹುದಿತ್ತು ಆದ್ರೆ ಅಲ್ಲಿಗೆ ಬಂದವರು ಅದು ಸರಿಯಿಲ್ಲ ಇದು ಸರಿಯಿಲ್ಲ ಅಂತ ಗೊಣಗುವುದರಲ್ಲಿ ಬ್ಯುಸಿ ಯಾಗಿರ್ತಾರೆ . ಈ ಮಕ್ಕಳಲ್ಲಿ ಅಂಥಾದ್ದು ಇರುವುದಿಲ್ಲ . ಇನ್ನು ವಿಶೇಷ ಅಂದ್ರೆ ಆಡಿಯೋ ರಿಲೀಸ್ ಕೂಡ ಈ ಮಕ್ಕಳೇ ಮಾಡ್ತಾರೆ .

ಇದುವರೆಗೂ ನನ್ನ ಸಿನಿಮಾದಲ್ಲಿ ಕೆಲಸ ಮಾಡಿದವರೆಲ್ಲ ಒಳ್ಳೊಳ್ಳೆ ಹೆಸರು ಮಾಡಿದ್ದಾರೆ . ಯಶ್ ಪೂರ್ಣ ಪ್ರಮಾಣದ ನಾಯಕನಾಗಿದ್ದು ನನ್ನ” ರಾಕಿ ” ಚಿತ್ರದಿಂದಲೇ . ಕ್ಯಾಮೆರಾ ಮೆನ್ ಕೃಷ್ಣ ಈಗ ಹೆಬ್ಬುಲಿ ಡೈರೆಕ್ಟರ್ .ಸುಧಾಕರ್ ಮುಕುಂದ ಮುರಾರಿ ಗೆ ಕೆಲಸ ಮಾಡಿದ್ದಾರೆ. ಇವ್ರೆಲ್ಲ ಇನ್ನು ಚೆನ್ನಾಗಿ ಬೆಳೆಯಲಿ . ವರ್ಧನ ಚಿತ್ರದ ಸಂಗೀತ ನಿರ್ದೇಶಕ ಮ್ಯಾಥ್ಯೂಸ್ ಮನು ಹೊಸಬರಾಗಿದ್ದರು ಬಹಳ ಚೆನ್ನಾಗಿ ಮಾಡಿದ್ದಾರೆ. ಸಾಧುಕೋಕಿಲ ಅವ್ರ ಅಣ್ಣನ ಮಗ . ತಂದೆ ಲಯೇಂದ್ರ ಕೂಡ ಸಂಗೀತ ನಿರ್ದೇಶಕರು . ರೋಮ್ಯಾಂಟಿಕ್ ಹಾಡುಗಳ ಜೊತೆಗೆ ತಾಯಿಯ ಹಾಡು ಇದೆ. ಆಕ್ಷನ್ ಸಾಂಗು ಇದೆ. ಒಟ್ಟಿನಲ್ಲಿ ಭಾವನಾತ್ಮಕ ಗೀತೆಗಳ ಭರಪೂರ ಮಿಶ್ರಣ .

-ವಿಭಾ

 

-Ad-

Leave Your Comments