“ವರ್ಧನ” ನಾಳೆಗೆ ತೆರೆಗಿಲ್ಲ ಯಾಕೆ ?

ನಾಗೇಂದ್ರ ಅರಸ್ ನಿರ್ದೇಶನದ ರಾಜಾಹುಲಿ ಖ್ಯಾತಿಯ ಹರ್ಷವರ್ಧನ್ ಅಭಿನಯದ ನಿರೀಕ್ಷಿತ  “ವರ್ಧನ” ಚಿತ್ರ ನಾಳೆ ಅಂದ್ರೆ ಶುಕ್ರವಾರ ತೆರೆಕಾಣುತ್ತಿಲ್ಲ. ಬಹುದಿನಗಳಿಂದ  ವಿಡಿಯೋ ಹಾಡುಗಳ ಮೂಲಕ ಸದ್ದು  ಮಾಡಿದ್ದ ಚಿತ್ರಕ್ಕೆ ಪ್ರೇಕ್ಷಕರನ್ನ ಮುಟ್ಟುವ ಕಾಲ ಕೂಡಿಬಂದಿಲ್ಲ.

ನಾಳೆಗೆ ಬಿಡುಗಡೆ ಆಗಬೇಕಿದ್ದ “ವರ್ಧನ”ಕ್ಕೆ ಸಾಕಷ್ಟು ಪ್ರಚಾರ ಕೊಟ್ಟಿತ್ತು ಚಿತ್ರತಂಡ. ಈಗ ಇದ್ದಕ್ಕಿದ್ದಂತೆ  ತಾಂತ್ರಿಕ ಕಾರಣಗಳಿಂದ ಬಿಡುಗಡೆ ಸಾಧ್ಯವಾಗುತ್ತಿಲ್ಲ ಎಂಬ ಮಾಹಿತಿ ರವಾನಿಸಿದೆ.ಜೊತೆಗೆ ಬಿಡುಗಡೆಯ ದಿನಾಂಕದ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದಿದೆ.

ಚಿತ್ರತಂಡದ ಸದಸ್ಯರೊಬ್ಬರ ಪ್ರಕಾರ “ವರ್ಧನ” ಬಿಡುಗಡೆಗೆ ತೊಡಕಾಗಿದ್ದು ತಾಂತ್ರಿಕ ದೋಷವಲ್ಲ. ಸೆನ್ಸಾರ್ ಮಂಡಳಿಯಿಂದ ಸರ್ಟಿಫಿಕೇಟ್ ಪಡೆಯುವ ಮುನ್ನವೇ ಚಿತ್ರ ಬಿಡುಗಡೆಯ ದಿನಾಂಕ ಗೊತ್ತು ಮಾಡಿದ್ದು. ಸರ್ಟಿಫಿಕೇಟ್ ಇನ್ನೂ ಸಿಗದಿರುವುದರಿಂದ ಬಿಡುಗಡೆ ಸಾಧ್ಯವಾಗುತ್ತಿಲ್ಲ . ಜೊತೆಗೆ ಅನುಭವಿ ನಿರ್ದೇಶಕರಾದ ನಾಗೇಂದ್ರ ಅರಸ್ ಹೀಗೇಕೆ ಮಾಡಿದರು ಅನ್ನುವುದು ಎಲ್ಲರ ಪ್ರಶ್ನೆಯಾಗಿದೆ.

ciniadda.com ಜೊತೆ ಮಾತನಾಡಿದ ಹೆಸರು ಹೇಳಲಿಚ್ಚಿಸದ ಸೆನ್ಸಾರ್ ಮಂಡಳಿಯ ಹಿರಿಯ ಸದಸ್ಯರೊಬ್ಬರು  ಹೇಳಿದ ಹಾಗೆ ಸರ್ಟಿಫಿಕೇಟ್ ತೆಗೆದುಕೊಳ್ಳದೆ ಚಿತ್ರದ ಬಿಡುಗಡೆ ದಿನಾಂಕ ಹೇಳಿರುವುದು ಸರಿಯಲ್ಲ. ಬಹಳಷ್ಟು ಚಿತ್ರಗಳು ಸೆನ್ಸಾರ್ ಸಾಲಿನಲ್ಲಿ ಇರುತ್ತವೆ.  ನಾವು ಬೇಗ ಬೇಗನೆ ಕ್ಲಿಯರ್ ಮಾಡ್ತಾನೆ ಇರ್ತೀವಿ. ಅಪ್ಲೈ ಮಾಡಿದ ಇಪ್ಪತ್ತೊಂದು ದಿನಗಳ ಒಳಗೆ ಸರ್ಟಿಫಿಕೇಟ್ ಕೊಡಬೇಕು . ಇಲ್ಲದಿದ್ದಾಗ ಮಾತ್ರ ಸಂಬಂಧ ಪಟ್ಟವರು ಪ್ರಶ್ನಿಸಬಹುದು. ಕೆಲವರು ಏನ್ ಮಹಾ ಆಗೋಗತ್ತೆ ನೋಡ್ಕಳಾಣ ಅಂತ ಡೇಟ್ ಅನೌನ್ಸ್ ಮಾಡಿಬಿಡ್ತಾರೆ. ಕೊನೆಗೆ ಒದ್ದಾಡ್ತಾರೆ. ಸಿನಿಮಾ ಮಾಡೋದು ಸರಿ ಆಮೇಲೆ ಕಾನೂನಿನ ಪ್ರಕಾರ ತೆರಿಗೆ ವಿನಾಯಿತಿ ,ಸೆನ್ಸಾರ್ ಸರ್ಟಿಫಿಕೇಟ್ ತೆಗೆದುಕೊಂಡು ರಿಲೀಸ್ ಡೇಟ್ ಅನೌನ್ಸ್ ಮಾಡಿದ್ರೆ ಇಂಥಾ ತೊಂದರೆಗಳು ಇರೋದಿಲ್ಲ .

varathana2816-mಒಟ್ಟಿನಲ್ಲಿ ವರ್ಧನದ ಮೂಲಕ ಯಶಸ್ಸನ್ನು ಹುಡುಕುತ್ತಿರುವ ಚಿತ್ರದ ನಾಯಕ ಹರ್ಷವರ್ಧನ್ ಗೆ ಈ ಘಟನೆ ಬೇಸರ ಮೂಡಿಸಿರುವುದಂತೂ ನಿಜ. ಆಪ್ತರ ಕರೆಗಳನ್ನೂ ಸ್ವೀಕರಿಸದೆ ಸುಮ್ಮನಿದ್ದುಬಿಟ್ಟಿದ್ದಾರಂತೆ . ಚಿತ್ರ ತೆರೆಕಂಡಾಗ ಅವರ ಕನಸು ನನಸಾಗಲಿದೆಯಾ ಅನ್ನುವುದನ್ನು ಪ್ರೇಕ್ಷಕರೇ ಹೇಳಬೇಕು.

-Ad-

Leave Your Comments