ತಲೆ ಕೆಟ್ಟೆ ಹೋಯ್ತು… ಕೆರ ಕಿತ್ತೇ ಹೋಯ್ತು..

 ರಾಜಾಹುಲಿ, ಗಜಪಡೆಯಲ್ಲಿ ಮಿಂಚಿದ ಹ್ಯಾಂಡ್ ಸಮ್ ಹೀರೊ ಹರ್ಷ ಅಭಿನಯದ ವರ್ಧನ ಚಿತ್ರದ ಹಾಡುಗಳು ಈಗಾಗಲೇ ಹಿಟ್ ಆಗಿವೆ. “ಸೋಜಿಗ ನನ್ನವ “, “ಮೊದಲ ಈ ಮಾತು”  ಹಾಡಿನ ಮಾಧುರ್ಯ ಮನಸ್ಸಿಗೆ ಹಿಡಿಸಿದೆ.  ಅಮ್ಮನಿಗಾಗಿ ಹಾಡುವ ಹಾಡು ” ಅನುರಾಗದ ತಾಯಿ” ಕೇಳುತ್ತಿದ್ದರೆ ಕಣ್ಣುತುಂಬಿ ಬರುತ್ತವimg-20161111-wa0034ಹಾಡುಗಳನ್ನು ಕೇಳಿದಾಗ ಹೇಗೆ ಶೂಟ್ ಮಾಡಿರಬಹುದು ? ಯಾವ ದೃಶ್ಯ ಎಲ್ಲಿ ? ಇಂಥೆಲ್ಲ ಕೂತೂಹಲ ತಣಿಸಲಿಕ್ಕೆ ಅಂತಾನೆ ಇಂದು ತಲೆ ಕೆಟ್ಟೆ ಹೋಯ್ತು .. ಕೆರ ಕಿತ್ತೇ ಹೋಯ್ತು ಹಾಡಿನ ವಿಡಿಯೋ ರಿಲೀಸ್ ಮಾಡಿದೆ ಚಿತ್ರತಂಡ. ಪಡ್ಡೆ ಹುಡುಗರಿಗೆ ಸಕತ್ ಇಷ್ಟವಾಗೋ ಸಾಂಗ್ “ತಲೆ ಕೆಟ್ಟೆ ಹೋಯ್ತು”. ಲವ್ ಮಾಡಿದ ಮೇಲೆ ಸಣ್ಣ ಪುಟ್ಟ ಕಿರಿಕ್ಕು , ಜಗಳ ಇರಲೇ ಬೇಕಲ್ಲ. ಆಗ ಹಂಗೇ ಈ ಹಾಡ್ ಕೇಳ್ಕೊಂಡ್ ಓಡಾಡ್ಕಳಿ. ವಿಡಿಯೋ ನೋಡ್ಕಂಡ್ ,ಸಮಾಧಾನ ಮಾಡ್ಕಳಿ.

ಏನೀ ಹಾಡಿನ ಕಥೆ ?

ನೆಲಮಂಗಲದ ಮೋಹನ್ ಡಿಕೆರೆ ಸ್ಟುಡಿಯೋದಲ್ಲಿ ಶೂಟ್ ಮಾಡಿರುವ ಈ ಹಾಡು ನಾಯಕ, ನಾಯಕಿ ಜೊತೆ ಕಿರ್ ..ಕಿರಿಕ್  ಮಾಡಿಕೊಂಡಾಗ ಬೇಸರದಿಂದ ಹಾಡೋ ಹಾಡು.

fb_img_1462094892898

 ವರ್ಧನ ಚಿತ್ರದ ಹಾಡುಗಳಿಗೆ ಹೊಸ ಕಂಠಗಳನ್ನು ಬಳಸಿಕೊಂಡಿದ್ದೇನೆ .  ತಲೆ ಕೆಟ್ಟೆ  ಹೋಯ್ತು  ಹಾಡಿರುವ ಸಚಿನ್ ಗೆ  ಈಗ ಅನೇಕ ಅವಕಾಶಗಳು ತೆರೆದುಕೊಂಡಿವೆ. ನಾಯಕಿ ನೇಹಾ ಪಾಟೀಲ್ ಗೆ ಬಹಳ ಒಳ್ಳೆ ಅವಕಾಶ ವರ್ಧನ . ನಾಯಕ ಹರ್ಷ ಈ ಸಿನಿಮಾ ಬಗ್ಗೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದು ಹರ್ಷಗೆ ಯಶಸ್ಸು ತರತ್ತೆ ಅನ್ನೋ ನಂಬಿಕೆ ನನಗಿದೆ . ACTION, EMOTION,COMEDY ಎಲ್ಲ ಸೇರಿಸಿ ಒಂದೊಳ್ಳೆ ಚಿತ್ರ ಮಾಡಿದ್ದೀವಿ ಕಾದು ನೋಡಿ ಅಂತಾರೆ ನಿರ್ದೇಶಕ ನಾಗೇಂದ್ರ ಅರಸ್.

ವರ್ಧನ ಬರುವುದು ಯಾವಾಗ ?  

ವರ್ಧನ ಸಂಪೂರ್ಣವಾಗಿ ಸಿದ್ಧವಾಗಿದೆ.ತೆರೆಗೆ ಬರುವುದಷ್ಟೇ ಬಾಕಿ. ಜನವರಿಯಲ್ಲಿ ರಿಲೀಸ್ ಮಾಡುವ ಯೋಜನೆ ಚಿತ್ರತಂಡದ್ದು .

 

-Ad-

Leave Your Comments