ಬ್ರಹ್ಮ ಬಂದು ಕನ್ನಡದಲ್ಲಿ ಮಾತಾಡಿದ್ರು ಬಾಹುಬಲಿಗೆ ಜಾಗ ಬಿಡಲ್ವಂತೆ ವಾಟಾಳ್ .

ರಾಜಮೌಳಿ ಬಾಹುಬಲಿ ಬಿಡುಗಡೆಗೆ  ಸಹಕರಿಸಿ ಎಂಬ ಮನವಿಯನ್ನ ಕನ್ನಡದಲ್ಲಿ ವಿಡಿಯೋ , ಪತ್ರದ ಮೂಲಕ ಕೇಳಿಕೊಂಡ ಮೇಲೆ ವಾಟಾಳ್ ನಾಗರಾಜ್ ಚಿತ್ರದುಗ್ರದಲ್ಲಿ ಪ್ರತಿಕ್ರಿಯಿಸಿದ್ದಾರೆ .

ರಾಜಮೌಳಿ ಯಾವ ರೂಪದಲ್ಲಿ ಹೇಳಿದ್ರು ಒಪ್ಪಲ್ಲ.ಸತ್ಯರಾಜ್ ಕನ್ನಡಿಗರ ಸ್ವಾಭಿಮಾನ ಕೆಣಕಿದ್ದಾರೆ. ಬಹಿರಂಗ ಕ್ಷಮೆ ಕೇಳಲೇಬೇಕು. ಕನ್ನಡ ಒಕ್ಕೂಟ ರಾಜಮೌಳಿ ಮನವಿಯನ್ನು ಒಪ್ಪುವುದಿಲ್ಲ . ಸತ್ಯರಾಜ್ ಕನ್ನಡಿಗರ ಕ್ಷಮೆ ಕೇಳದೆ ಇದ್ದರೆ ಬ್ರಹ್ಮ ಬಂದು ಕನ್ನಡದಲ್ಲಿ ಮಾತಾಡಿದ್ರು ಕೂಡ ನಾವು ಒಪ್ಪುವುದಿಲ್ಲ.

ಕ್ಷಮಾಪಣೆ ಕೇಳದೆ ಹೋದರೆ ಚಿತ್ರ ಬಿಡುಗಡೆ ಇಲ್ಲ. 28 ಕ್ಕೆ ಬಾಹುಬಲಿ ಬಿಡುಗಡೆ ದಿನ ಬೆಂಗಳೂರು ಬಂದ್ ಮಾಡ್ತಿದ್ದೇವೆ. ಕನ್ನಡ ಚಿತ್ರರಂಗ ನಮ್ಮ ಜೊತೆಗಿದೆ.ಸತ್ಯರಾಜ್ ಹೇಳಿಕೆ ಒಂಭತ್ತು ವರ್ಷ ಹಳೆಯದೇ ಇರಬಹುದು.ಆದರೆ ಸಾಕ್ಷಿ ಈಗ ಸಿಕ್ಕಿದೆ.  ಏಪ್ರಿಲ್ 21 ಸತ್ಯರಾಜ್ ಭೂತದಹನ ಮಾಡಲಿದ್ದೇವೆ ಅಂದಿದ್ದಾರೆ .

 

-Ad-

Leave Your Comments