ಕಿಚ್ಚು ಹಚ್ಚುತ್ತಾ ಕಿಚ್ಚನ “ದಿ ವಿಲನ್ ” ಹೇರ್ ಸ್ಟೈಲ್ ?

ಕಿಚ್ಚ ಸುದೀಪ್ ತನ್ನ ಅಭಿನಯದಿಂದ ಸಿನಿರಸಿಕರಿಗೆ ಹುಚ್ಚು ಹಿಡಿಸೋದ್ರಲ್ಲಿ ಎತ್ತಿದ ಕೈ . ಅಷ್ಟೇ ಅಲ್ಲ ತನ್ನ ಹೇರ್ ಸ್ಟೈಲ್ ನಿಂದ  ಕಿಚ್ಚು ಹಚ್ಚಿ ಹುಡುಗರು -ಹುಡುಗಿಯರು ಅನ್ನದೆ  ಎಲ್ಲರೂ ತಾಮುಂದು ನಾಮುಂದು ಅಂತ ಬಿರಬಿರನೆ ಬಾರ್ಬರ್ ಶಾಪ್ , ಸ್ಪಾ , hairstylist ಗಳ ಬಳಿಗೆ ಹೊಡಿಸೋದ್ರಲ್ಲೂ ನಂಬರ್ ಒನ್  !!

ಹೆಬ್ಬುಲಿ ಹೇರ್ ಸ್ಟೈಲ್ ಯಾವ ರೇಂಜ್ ನಲ್ಲಿ ಜನರಿಗೆ ಇಷ್ಟವಾಗಿತ್ತು ನೀವೆಲ್ಲ್ಲ ನೋಡೇ ಇದ್ದೀರಿ. ಈಗ ಪ್ರೇಮ್ ನಿರ್ದೇಶನದ  “ದಿ ವಿಲನ್ “ಸರದಿ ಶುರುವಾಗಿದೆ. ಈಗ ಸುದೀಪ್ ಮಾಡಿಸಿಕೊಂಡಿರೋ  ಹೇರ್ ಸ್ಟೈಲು ಬೇಸಿಗೆಗೂ ಹೇಳಿ ಮಾಡಿಸಿದಂತಿದೆ. ನೋಡೋಕು ಸಕ್ಕತಾಗಿದೆ .ಅಂದಮೇಲೆ ಬಿಟ್ಟಾರೆಯೇ ನಮ್ ಜನ !?

ಈಗಾಗಲೇ ಕಿಚ್ಚನ ಲುಕ್ಕಿಗೆ ಫುಲ್ ಫಿದಾ ಆಗಿರೋ ಸಿನಿಪ್ರೇಮಿಗಳು ತಮ್ಮ ತಮ್ಮ ಸ್ಟೈಲ್ ಚೇಂಜ್ ಮಾಡಿಸಿಕೊಂಡು ಹೆಂಗೆ  “ದಿ ವಿಲನ್ “? ಅಂತಿದ್ದಾರೆ . ಅಷ್ಟೇ ಅಲ್ಲದೆ ಬೈಕ್ ಗಳ ಮೇಲೆ “ದಿ ವಿಲನ್ “ನ ಫಸ್ಟ್ ಲುಕ್ ಸುದೀಪ್ ಪೋಸ್ಟರ್ ರಾರಾಜಿಸ್ತಾ ಇದೆ .

ಇತ್ತೀಚೆಗಂತೂ ಹೇರ್ ಸ್ಟೈಲ್ ವಿಷಯದಲ್ಲಿ ಪಕ್ಕಾ ಟ್ರೆಂಡ್ ಸೆಟ್ಟರ್ ಅಂದ್ರೆ ಅದು ಸುದೀಪ್ ಮಾತ್ರ. ಇದು ಮಾಸ್ ಮೇನಿಯಾ ಆಗೋ ಲಕ್ಷಣಗಳಂತು ಕಾಣ್ತಾ ಇದೆ.

-Ad-

Leave Your Comments