ಕರುನಾಡಿನ ಸಾಹಸ ಸಿಂಹನ 8ನೇ ಪುಣ್ಯ ತಿಥಿ

ಇಂದು ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ 8ನೇ ಪುಣ್ಯತಿಥಿ. ಅಭಿಮಾನ್ ಸ್ಟುಡಿಯೋದಲ್ಲಿ ಅಭಿಮಾನಿಗಳಿಂದ ವಿಷ್ಣು ಅವರ ಸ್ಮಾರಕಕ್ಕೆ ಪೂಜೆ ನಡೆದು ಗೌರವ ಸಲ್ಲಿಸಲಾಗುತ್ತಿದೆ.

ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣು ಅವರ ಪುಣ್ಯ ತಿಥಿಯನ್ನು ಅಭಿಮಾನಿಗಳು ಅನ್ನದಾನ‌, ರಕ್ತದಾನ ಹಾಗೂ ಆರೋಗ್ಯ ತಪಾಸಣೆ ಕಾರ್ಯಕ್ರಮಗಳ ಮೂಲಕ ನಡೆಸಲಾಗುತ್ತಿದೆ. ನಾಡಿನ ಎಲ್ಲಾ ಕಡೆಯಿಂದ ಅಭಿಮಾನಿಗಳಿಂದು ವಿಷ್ಣು ಸ್ಮಾರಕದ ಬಳಿ‌‌‌ ಬರ್ತಿದ್ದಾರೆ. ಕೇವಲ ಅಭಿಮಾನ್ ಸ್ಟುಡಿಯೋ ಮಾತ್ರವಲ್ಲದೇ ಸರ್ಕಲ್ ಗಳಲ್ಲಿ ಆಟೋ ನಿಲ್ದಾಣಗಳಲ್ಲಿ ಸಾಹಸ ಸಿಂಹನ ಭಾವಚಿತ್ರಕ್ಕೆ ಪೂಜೆ ಮಾಡಿ ಪುಣ್ಯ ತಿಥಿ ಆಚರಿಸಲಾಗುತ್ತಿದೆ.

ಈ ಬಾರಿ ನಗರದಲ್ಲಿ ವಿಷ್ಣು ಅವರ ಮೂರು‌ ಪ್ರತಿಮೆಗಳು ಅನಾವರಣ ಆಗುತ್ತಿರುವುದು ವಿಶೇಷ. ಈ ಬಾರಿಯು ವಿಷ್ಣು ಕುಟುಂಬ, ಭಾರತಿ‌ ವಿಷ್ಣುವರ್ಧನ್‌ ಸಮಾಧಿ ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆ ಕಡಿಮೆ ಇದೆ. ಸುಮಾರು ಹತ್ತುವರೆ ಹನ್ನೊಂದುಗಂಟೆಗೆ ಅಭಿಮಾನಿಗಳಿಂದ ಸ್ಮಾರಕಕ್ಕೆ ಪೂಜೆ ಆರಂಭವಾಗಿದೆ.

-Ad-

Leave Your Comments