ದರ್ಶನ್ 50ನೇ ಸಿನಿಮಾದಲ್ಲಿ ವಿವೇಕ್ ಒಬೆರಾಯ್ ?

ಚಾಲೆಂಜಿಂಗ್ ಸ್ಟಾರ್  ದರ್ಶನ್ ಅವರ 50ನೇ ಸಿನಿಮಾ ಯಾವುದು ಅಂತಾ ಯೋಚನೆ ಮಾಡ್ತಿದ್ದೀರಾ..? ಅದೇ  ಗಾಂಧಿನಗರದ ಅತ್ಯಂತ ಹೆಚ್ಚು ವೆಚ್ಚದ ಸಿನಿಮಾ ಕುರುಕ್ಷೇತ್ರ. ಈ ಸಿನಿಮಾಗೆ ನಿರ್ಮಾಪಕ ಮುನಿರತ್ನ ಬಂಡವಾಳ ಹೂಡಿಕೆ ಮಾಡ್ತಿದ್ದಾರೆ . 100 ಕೋಟಿ ವೆಚ್ಚದಲ್ಲಿ ತಯಾರಾಗಲು ಪ್ಲಾನ್ ಸಿದ್ದವಾಗಿದ್ದು ನಾಗಣ್ಣ  ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಈ 50ನೇ ಸಿನಿಮಾದಲ್ಲಿ ಬಾಲಿವುಡ್ ನಟ ವಿವೇಕ್ ಒಬೆರಾಯ್ ಆ್ಯಕ್ಟ್ ಮಾಡ್ತಾರೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ.

ಕುರುಕ್ಷೇತ್ರದಲ್ಲಿ ಕನ್ನಡದ ಕೃಷ್ಣನಾಗಿ ವಿವೇಕ್..

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಿನಿಮಾದಲ್ಲಿ ನಟ ದರ್ಶನ್ ರನ್ನು ಅದ್ಬುತವಾಗಿ ತೋರಿಸಿದ್ದ ನಿರ್ದೇಶಕ ನಾಗಣ್ಣ, 50ನೇ ಸಿನಿಮಾದಲ್ಲಿ ಇತಿಹಾಸ ಸೃಷ್ಟಿಸಲು ಮುಂದಾಗಿದ್ದಾರೆ. ನಾಗಣ್ಣ ಅವರ ಕನಸಿಗೆ ಹಣ ಹೂಡಿಕೆ ಮಾಡುವ ಮೂಲಕ ಸಾಥ್ ಕೊಡ್ತಿರೋದು ನಿರ್ಮಾಪಕ ಮುನಿರತ್ನ. ಬಾಹುಬಲಿಯನ್ನು ಮೀರಿಸುವ ಸಿನಿಮಾ ಮಾಡ್ತೀವಿ ಎಂದಿರುವ ನಿರ್ಮಾಪಕ ಮುನಿರತ್ನ ಅವರು, ಈ ಸಿನಿಮಾವನ್ನು ಭಾರತ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡಬೇಕು ಎಂದುಕೊಂಡಿದ್ದಾರೆ. ಈ ಸಿನಿಮಾದಲ್ಲಿ ಸಾಕಷ್ಟು ಸಿನಿ ಸ್ಟಾರ್ ಗಳು ಆ್ಯಕ್ಟ್ ಮಾಡಲಿದ್ದು, ಬೇರೆ ಭಾಷೆಗಳಲ್ಲೂ ಬರುವ ಸಾಧ್ಯತೆ ಇದೆ.

ಈಗಾಗಲೇ ಮಾತುಕತೆ ನಡೀತಿದ್ಯಂತೆ..

ಇದಕ್ಕೂ ಮೊದಲು ಕುರುಕ್ಷೇತ್ರದಲ್ಲಿ ಕೃಷ್ಟನಾಗಿ ಸ್ಯಾಂಡಲ್ ವುಡ್ ನ ರಿಯಲ್ ಕೃಷ್ಟ, ಹುಡುಗಿಯರ ಪಾಲಿನ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯ ಮಾಡಲಿದ್ದಾರೆ ಎನ್ನಲಾಗಿತ್ತು. ಆದ್ರೀಗ ಹೊಸ ಸುದ್ದಿಯಾಗಿ ಕೃಷ್ಣನ ಪಾತ್ರಕ್ಕೆ ವಿವೇಕ್ ಒಬೆರಾಯ್ ಬರೋದು ಪಕ್ಕಾ ಎನ್ನಲಾಗ್ತಿದೆ. ಈಗಾಗಲೇ ಒಂದು‌ಸುತ್ತಿನ ಮಾತುಕತೆ ಕೂಡ ನಡೆದಿದೆ ಅನ್ನೋ ಮಾತುಗಳೂ ಕೇಳಿ ಬಂದಿವೆ. ಆದರೆ ರವಿಚಂದ್ರನ್  ಈ ಪಾತ್ರ ಯಾಕೆ ಮಾಡಲಿಲ್ಲ ಅನ್ನೋದು ಮಾತ್ರ ನಿಗೂಢವಾಗಿದೆ..

ಜ್ಯೋತಿ ಎಂ ಗೌಡ

-Ad-

Leave Your Comments