ಬಾಹುಬಲಿಗೆ ಬಿಡುಗಡೆ, ಸತ್ಯರಾಜ್ ಗೆ ವಾರ್ನಿಂಗ್ !

ಬಹುದಿನಗಳಿಂದ ಬಾಹುಬಲಿ 2 ಕರ್ನಾಟಕದಲ್ಲಿ ತೆರೆಕಾಣುತ್ತದೋ ಇಲ್ವೋ ಅನ್ನುವಂತಾ ಪ್ರಶ್ನೆ , ಕುತೂಹಲಕ್ಕೆ ಇಂದು ತೆರೆಬಿದ್ದಿದೆ. ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಸತ್ಯರಾಜ್ ಕ್ಷಮೆ ಕೇಳಿಸುವುದಷ್ಟೇ ನಮಗೆ ಮುಖ್ಯವಾಗಿತ್ತು. ಅದು ಸಾಧ್ಯವಾಗಿದೆ. ಅವ್ರು ವಿಷಾದ ಯಾಚಿಸುತ್ತೇನೆ ಅಂದಿರುವುದು ಕ್ಷಮೆ ಯಾಚಿಸಿದ್ದೇನೆ ಎಂದೇ ಅರ್ಥ. ಶಾಸನ ಭಾಷೆಯಲ್ಲಿ ನಾವು ಕೂಡ ತಪ್ಪು ಮಾಡಿದ್ದಾಗ ವಿಷಾದ ವ್ಯಕ್ತಪಡಿಸುತ್ತೇನೆ ಎಂದೇ ಹೇಳುವುದು. ಆದ್ದರಿಂದ ಈ ವಿಷಯವನ್ನು ಹೆಚ್ಚು ಲಂಬಿಸದೆ ಇಲ್ಲಿಗೆ ಬಿಟ್ಟು ಬಿಡುತ್ತಿದ್ದೇವೆ . ಬಾಹುಬಲಿ ಚಿತ್ರಕ್ಕೆ ನಮ್ಮಿಂದ ಯಾವ ಅಡ್ಡಿಯೂ ಇಲ್ಲ. ಚಿತ್ರದ ನಿರ್ದೇಶಕರ ಬಗ್ಗೆಯಾಗಲಿ , ಸಿನಿಮಾ ಬಗ್ಗೆಯಾಗಲಿ ನಮಗೆ ದ್ವೇಷವಿಲ್ಲ. ಎಲ್ಲರೂ ಸಿನಿಮಾ ನೋಡಿ.

ಇಷ್ಟೇ ಅಲ್ಲದೆ ಮುಂದೆ ಸತ್ಯ ರಾಜ್ ಏನಾದ್ರೂ ಕರ್ನಾಟಕ , ಕನ್ನಡಿಗರ ವಿರುದ್ಧ ನಾಲಿಗೆ ಹರಿಯಬಿಟ್ಟು ಅವಹೇಳನಕಾರಿ ಮಾತುಗಳನ್ನ ಆಡಿದರೆ ತಕ್ಕ ಪಾಠ ಕಳಿಸುತ್ತೇವೆ ಎಂದಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ ರಾ ಗೋವಿಂದು ಸೌತ್ ಇಂಡಿಯನ್ ಫಿಲಂ ಚೇಂಬರ್ ನಲ್ಲಿ ನಾವು ವಿಚಾರಿಸಿದ್ದೇವೆ. ತಮಿಳುನಾಡಿನಲ್ಲಿ ಕನ್ನಡ ಚಿತ್ರಗಳನ್ನ ರದ್ದು ಮಾಡಿಲ್ಲ. ಹಾಗೇನಾದ್ರೂ ಅವರು ಮಾಡಿದ ಪಕ್ಷದಲ್ಲಿ ನಾವು ತಮಿಳು ಚಿತ್ರಗಳನ್ನು ಇಲ್ಲಿ ರದ್ದು ಮಾಡುತ್ತೇವೆ ಅಂದ್ರು.

ಒಟ್ಟಿನಲ್ಲಿ ಬಾಹುಬಲಿ ಚಿತ್ರ ತಂಡ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಅತ್ತ ಕಡೆ ಸತ್ಯರಾಜ್ ಗೆ ಖಡಕ್ ಎಚ್ಚರಿಕೆ ಸಿಕ್ಕಿದೆ .  

-Ad-

Leave Your Comments