ಇದೇ 25 ರಿಂದ ಮತ್ತೆ ಮನಸೆಳೆವ “ವೀಕೆಂಡ್ ವಿತ್ ರಮೇಶ್”

ಕಿರುತೆರೆ ವಾಹಿನಿಗಳಲ್ಲಿ ಅತ್ಯಂತ ಜನಪ್ರಿಯ ಕಾರ್ಯಕ್ರಮಗಳನ್ನು ತನ್ನ ವೀಕ್ಷಕರಿಗೆ ನೀಡುತ್ತಾ ಬಂದಿರುವ ಜೀ ಕನ್ನಡ ವಾಹಿನಿ ಇದೀಗ ವೀಕೆಂಡ್ ವಿತ್ ರಮೇಶ್ ಸೀಜನ್-3 ಆರಂಭಿಸುತ್ತಿದೆ. ಈಗಾಗಲೇ 3 ಸೀಜನ್‍ಗಳಲ್ಲಿ ಹಲವಾರು ಸೆಲಬ್ರಿಟಿಗಳ ಹಿಂದಿರುವ ಜೀವನವನ್ನು ಅನಾವಣಗೊಳಿಸಿದ್ದು ಅತ್ಯಂತ ಜನಪ್ರಿಯ ರಿಯಾಲಿಟಿ ಷೋ ಆಗಿ ಅದು ಮೂಡಿಬಂದಿತ್ತು.

RA2ಛಾಲೆಂಜಿಂಗ್ ಸ್ಟಾರ್ ದರ್ಶನ್, ಯಶ್, ಸುದೀಪ್, ಶಿವಣ್ಣ, ಪುನೀತ್‍ರಾಜ್ ಕುಮಾರ್ ಸೇರಿದಂತೆ ಸ್ಯಾಂಡಲ್‍ವುಡ್‍ನ ಹಲವಾರು ಸ್ಟಾರ್ ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಹಿಂದಿನ ಜೀವನವನ್ನು ಒಮ್ಮೆ ಮೆಲುಕು ಹಾಕಿದ್ದಾರೆ. ಇದೇ 25ರ ಶನಿವಾರದಿಂದ ರಾತ್ರಿ 9ಕ್ಕೆ ಆರಂಭವಾಗಲಿರುವ ಈ ಕಾರ್ಯಕ್ರಮ ವೀಕೆಂಡ್‍ನಲ್ಲಿ ಸಿನಿಪ್ರಿಯರನ್ನು ಮತ್ತೊಮ್ಮೆ ರಂಜಿಸಲು ಅಣಿಯಾಗಿದೆ. ಈ ಷೋ ಮೊದಲ ಅತಿಥಿಯಾಗಿ ಬಹುಭಾಷಾ ನಟ ಪ್ರಕಾಶ್ ರೈ ಅವರು ಕಾಣಿಸಿಕೊಳ್ಳಲಿದ್ದಾರೆ.

prakash rai

ಪ್ರತಿ ಶನಿವಾರ ಹಾಗೂ ಭಾನುವಾರ ಪ್ರಸಾರವಾಗುವ ಈ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮುಂದಿನ ದಿನಗಳಲ್ಲಿ ನವರಸ ನಾಯಕ ಜಗ್ಗೇಶ್, ಮಾಜಿ ಪ್ರಧಾನಿ ದೇವೇಗೌಡ, ನಟಿ ರಮ್ಯ, ಧರ್ಮಸ್ಥಳದ ಧರ್ಮದರ್ಶಿ ವೀರೇಂದ್ರ ಹೆಗ್ಡೆ, ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ, ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಗಂಗಾವತಿ ಪ್ರಾಣೇಶ್, ವಿ.ಹರಿಕೃಷ್ಣ, ಜಯಂತ್ ಕಾಯ್ಕಿಣಿ ಸೇರಿದಂತೆ ಇನ್ನು ಹಲವಾರು ಗಣ್ಯರು ವೀಕೆಂಡ್‍ನಲ್ಲಿ ರಮೇಶ್ ಅವರ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

weekend with ramesh

ಅಬ್ಬಾಯ್ ನಾಯ್ಡು ಸ್ಟುಡಿಯೋದಲ್ಲಿ ಈ ಕಾರ್ಯಕ್ರಮದ ಚಿತ್ರೀಕರಣಕ್ಕಾಗಿ ಭವ್ಯವಾದ ಸೆಟ್ಟನ್ನು ಹಾಕಲಾಗಿದೆ. ಹಿಂದಿನಂತೆಯೇ ಸುಂದರವಾದ ಹಾಟ್ ಸೀಟ್ ಕೂಡ ಇದ್ದು ವಾಲ್ ಆಫ್ ಫ್ರೇಮ್‍ನಲ್ಲಿ ಭಾಗವಹಿಸಿದ ಎಲ್ಲಾ ಸೆಲಬ್ರಿಟಿಗಳ ಆತ್ಮೀಯರ ಜೊತೆಗಿನ ಪೋಟೋ ಕೂಡ ಸೇರಿಸಿಕೊಳ್ಳಲಿದೆ. ಸದ್ಯ 14 ವಾರಗಳ ಪ್ರಸಾರವಾಗಲಿರುವ ಈ ಕಾರ್ಯಕ್ರಮದಲ್ಲಿ 28 ಎಪಿಸೋಡ್‍ಗಳು ಮೂಡಿಬರಲಿವೆ ಈ ಪತ್ರಿಕಾ ಘೋಷ್ಠಿಯಲ್ಲಿ ಜೀ ವಾಹಿನಿಯ ಬಿಜಿನೆಸ್ ಹೆಡ್ ಆದ ರಾಘವೇಂದ್ರ ಹುಣಸೂರ್ ಭಾಗವಹಿಸಿದ್ದರು.

-Ad-

Leave Your Comments