ಮಂಡ್ಯದ ಗಂಡು ಮತ್ತೆ ಮಂತ್ರಿ..?

ಸಿನಿಪ್ರಿಯರಲ್ಲಿ ಮಂಡ್ಯದ ಗಂಡು ಅಂತಾನೇ ಜನಜನಿತವಾಗಿರುವ ಅಂಬರೀಷ್‍ಗೆ ಮತ್ತೆ ಒಳ್ಳೆ ಕಾಲ ಬಂದಿದೆ.. ಸ್ವತಃ ಸಿಎಂ ಸಿದ್ದರಾಮಯ್ಯ ಅಂಬರೀಶ್ ನಿವಾಸಕ್ಕೆ ಭೇಟಿ ನೀಡಿ, ಔತಣ ಸವಿದಿದ್ದಾರೆ.. ವಸತಿ ಸಚಿವರಾಗಿದ್ದ ನಟ ಅಂಬರೀಷ್‍ರನ್ನು ಸಿಎಂ ಸಿದ್ದರಾಮಯ್ಯ ಕೈಬಿಟ್ಟ ಬಳಿಕ ಅಂಬರೀಷ್ ರಾಜಕೀಯ ಚಟುವಟಿಕೆಗಳಿಂದ ದೂರು ಉಳಿದಿದ್ರು.. ನಂಜನಗೂಡು ಹಾಗೂ ಗುಂಡ್ಲುಪೇಟೆ ಚುನಾವಣಾ ಪ್ರಚಾರದಲ್ಲೂ ಅಂಬರೀಷ್ ಕಾಣಿಸಿಕೊಂಡಿರಲಿಲ್ಲ.. ಈ ನಡುವೆ ಅಂಬರೀಷ್ ಎಸ್.ಎಂ ಕೃಷ್ಣ ಹಾದಿಯಲ್ಲೇ ಬಿಜೆಪಿ ಸೇರ್ತಾರೆ.. ಸುಮಲತಾ ಅಂಬರೀಷ್‍ಗೆ ಬಿಜೆಪಿಯಲ್ಲಿ ಎಂಎಲ್‍ಎ ಟಿಕೆಟ್ ಕೊಡೋದು ನಿಶ್ಚಯ ಆಗಿದೆ ಅನ್ನೋ ಮಾತುಗಳು, ಚರ್ಚೆಗಳು  ಕೇಳಿ ಬಂದಿದ್ದವು. ಇದೀಗ ಎಲ್ಲಾ ವಿಚಾರಗಳಿಗೆ ಸಿಎಂ ಭೇಟಿ -ಮಾತುಕತೆ ತೆರೆ ಎಳೆಯಲು ಹೊರಟಿದೆ.

ಏನೇ ಆಗಲಿ ಕನ್ನಡ ಸಿನಿಮಾ ರಂಗದಲ್ಲಿ ಓರ್ವ ಹಿರಿಯಣ್ಣನ  ಸ್ಥಾನದಲ್ಲಿರುವ ಅಂಬರೀಷ್‍ಗೆ ಮತ್ತಷ್ಟು ಅಧಿಕಾರ ಸಿಗಲಿ. ಸಿನಿಮಾ ರಂಗದ ಕರ್ಣ ಕೊನೆ ಉಸಿರು ಇರುವ ತನಕ ಜನರ ನಡುವೆಯೇ ಇರಲಿ ಅನ್ನೋದು ಅಂಬಿ ಅಭಿಮಾನಿಗಳ ಒಕ್ಕೊರಲ  ಒತ್ತಾಯ.. ಅಂಬರೀಷ್ ಯಾರಿಗೂ ಕೇರ್ ಮಾಡದ ಡೋಂಟ್‍ಕೇರ್ ಮಾಸ್ಟರ್!!  ಅವರು ಅಭಿಮಾನಿಗಳಿಗೆ ಹೋಗ್ರಲೋ ನನ್ ಮಕ್ಳ ಅಂದ್ರೆ ಆಶೀರ್ವಾದ ಇದ್ದ ಹಾಗೆ ಅಂತಾರೆ ಅಭಿಮಾನಿಗಳು.. ಅದೇ ಮಾತನ್ನು ಬೇರೊಬ್ಬ ಸಚಿವರೋ.. ಅಧಿಕಾರಿಯೋ ಹೇಳಿದ್ರೆ ಕಥೆ ಅಲ್ಲ ಜೀವನ ಆಗ್ತಿತ್ತು ಅನ್ನೋದ್ರಲ್ಲಿ ಅನುಮಾನವೇ ಇಲ್ಲ.. ಒಟ್ನಲ್ಲಿ ಅಂಬರೀಷ್ ಮತ್ತೆ ಸಚಿವರಾಗ್ತಾರೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ.. ಸಿದ್ದರಾಮಯ್ಯ ಭೇಟಿ ಹಿಂದೆ ರಾಜಕೀಯ ತಂತ್ರಗಾರಿಕೆ ಇದೆ ಅನ್ನೋದ್ರಲ್ಲಿ ಸಂಶಯವಿಲ್ಲ..ಅಂಬಿ -ಸಿದ್ದರಾಮಯ್ಯ ಒಳ್ಳೆ ಸ್ನೇಹಿರಾಗಿದ್ದವ್ರು. ಮಂತ್ರಿ ಪದವಿಯಿಂದ ಹೇಳದೆ ಕೇಳದೆ ಮನೆಗೆ ಕಳುಹಿಸಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದ ಅಂಬಿ ನೋವು ಮರೆತು ಮತ್ತೆ ನಗೆಯಾಡಿದ್ದಾರೆ. ಅದು ಅಂಬಿಯ ಹುಟ್ಟುಗುಣ. ಸಿಟ್ಟು ಕ್ಷಣಿಕ ಸ್ನೇಹ ಅಪಾರ . ಪ್ರಚಾರಕ್ಕೆ ಬಾರಪ್ಪ ಪಕ್ಷದ ಜೊತೆ ನಿಂತ್ಕಳಪ ಮಂತ್ರಿ ಮುಂದಿನ ದಪ  ಮಾಡಿದರಾಯ್ತು ಅಂತ ಸಿದ್ದರಾಮಯ್ಯನವರು ಕೇಳಿದ್ರೆ  ಸ್ನೇಹಕ್ಕೆ ಅಂಬಿ ಕಟ್ಟು ಬಿದ್ದರೂ ಆಶ್ಚರ್ಯವಿಲ್ಲ. ಅಧಿಕಾರಕ್ಕಾಗಿ ಹಪಹಪಿಸುವ, ಏನು ಬೇಕಾದರೂ ಮಾಡುವ ಗುಣ ಅಂಬಿಯದಲ್ಲ. ಏನಾದ್ರು ಆಗಲಿ ನಮ್ಮೂರ ಗಂಡು ಮತ್ತೆ ಮಂತ್ರಿಯಾಗಲಿ ಅಂತ ಅಭಿಮಾನಿಗಳು ಕಾಯ್ತಿರೋದಂತು ಸುಳ್ಳಲ್ಲ.

ಮಂಜು , ಮಂಡ್ಯ

-Ad-

Leave Your Comments