ಕೊನೆಗೂ ಬಂತೇ “ಭರ್ಜರಿ”ಗೆ ಬಿಡುಗಡೆ ಭಾಗ್ಯ? 

ಯಾವಾಗ ಬಹದ್ದೂರು ಸಿನಿಮಾ ಸೂಪರ್‌ಹಿಟ್ ಆಯಿತೋ ಆಗಲೇ ನಿರ್ದೇಶಕ ಚೇತನ್‌ಕುಮಾರ್ ಮತ್ತು ಧ್ರುವ ಸರ್ಜಾ ಇನ್ನೊಂದು ಸಿನಿಮಾ ಮಾಡಬೇಕು ಅಂತ ಪ್ಲಾನ್ ಹಾಕಿಕೊಂಡರು. ಹಾಗೇ ಶುರುವಾಗಿದ್ದೇ ಭರ್ಜರಿ ಸಿನಿಮಾ. ಆದರೆ ಯಾವ ಗಳಿಗೆಯಲ್ಲಿ ಶುರು ಮಾಡಿದರೋ ಏನೋ. ನಾನಾ ಕಾರಣಗಳಿಂದ ಆ ಸಿನಿಮಾ ಮುಂದೆ ಹೋಗಲೇ ಇಲ್ಲ. ನಿರ್ಮಾಪಕರು ಬದಲಾದ್ರು . ಚಿತ್ರೀಕರಣ ಸ್ಥಳ ಬದಲಾಯಿತು. ಆದರೆ ಸಿನಿಮಾದ ಸದ್ದೇ ಇರಲಿಲ್ಲ. ಧ್ರುವ ಸರ್ಜಾ ಅಭಿಮಾನಿಗಳು ಕಾದು ಕಾದು ಸುಸ್ತಾದರು. ಆದರೆ ಇದೀಗ ಮತ್ತೆ ಖುಷಿ ಸುದ್ದಿ ಬಂದಿದೆ. ಭರ್ಜರಿ ಚಿತ್ರತಂಡ ಹಾಡಿನ ಚಿತ್ರೀಕಣಕ್ಕಾಗಿ ಸ್ಲೊವೇನಿಯಾಗೆ ಹೋಗಿದ್ದಾರೆ. ಹಾಡಿನ ಚಿತ್ರೀಕರಣ ಮುಗಿದರೆ ಆಮೇಲಾದರೂ ಭರ್ಜರಿ ಬಿಡುಗಡೆಯಾಗಬಹುದು.
ಸದ್ಯ ಚಿತ್ರತಂಡ ಸ್ಲೊವೇನಿಯಾದಲ್ಲಿ ಹಾಡಿನ ಚಿತ್ರೀಕಣದಲ್ಲಿದೆ. ಧ್ರುವ ಸರ್ಜಾ ಮತ್ತು ರಚಿತಾರಾಮ್ ಅವರು ಕೊರಿಯೋಗ್ರಾಫರ್ ಹರ್ಷ ನೇತೃತ್ವದಲ್ಲಿ ಹತ್ತಾರು ಡಾನ್ಸರ್‌ಗಳ ಜೊತೆ ಭರ್ಜರಿಯಾಗಿ ನರ್ತಿಸುತ್ತಿದ್ದಾರೆ. ಇದೇ ಖುಷಿಯಲ್ಲಿ ಚಿತ್ರತಂಡದ ಅನೇಕರು ಸೆಲ್ಫೀ ಹೊಡೆದುಕೊಂಡಿದ್ದಾರೆ. ಒಂದೆಡೆ ಸಾಂಗ್ ಶೂಟಿಂಗ್ ಖುಷಿಯಾದರೆ ಇನ್ನೊಂದೆಡೆ ಅಂತೂಇಂತೂ ಸಿನಿಮಾ ಮತ್ತೆ ಮುಂದುವರೆಯಿತಲ್ಲ ಅನ್ನೋ ಖುಷಿಯೂ ಇದೆ.
ಹಾಗೆ ನೋಡಿದರೆ ಭರ್ಜರಿ ಸಿನಿಮಾ ಧ್ರುವ ಮತ್ತು ಚೇತನ್‌ಕುಮಾರ್ ಇಬ್ಬರಿಗೂ ಮಹತ್ವಾಕಾಂಕ್ಷೆಯ ಪ್ರೊಜೆಕ್ಟು. ಅವರಿಬ್ಬರೂ ಆ ಸಿನಿಮಾಗಾಗಿ ಅನೇಕ ವರ್ಷಗಳನ್ನು ಕಳೆದಿದ್ದಾರೆ. ಅಟ್‌ಲೀಸ್ಟ್ ಅವರಿಬ್ಬರಿಗಾಗಿಯಾದರೂ ಈ ಸಿನಿಮಾ ಆದಷ್ಟು ಬೇಗ ಬಿಡುಗಡೆಯಾಗಬೇಕಿದೆ. ಧ್ರುವ ಅಭಿಮಾನಿಗಳು ಕೂಡ ಖುಷಿಯಾಗಬಹುದು. ಆಮೇಲೆ ಧ್ರುವ ಸರ್ಜಾರ ಹಯಗ್ರೀವ ಸಿನಿಮಾ ಆದಷ್ಟು ಬೇಗ ಸಿದ್ಧವಾಗಿ ಬಿಡುಗಡೆಯಾಗುವುದು ಒಳ್ಳೆಯದು.
-Ad-

Leave Your Comments