ಮತ್ತೆ ಒಲಿದು ಬರುತ್ತಾ ಬಾಕ್ಸ್ ಆಫೀಸ್ ಸುಲ್ತಾನ್ ಪಟ್ಟ!?

ಖಡಕ್ ಲುಕ್, ಮಾಸ್ ಸ್ಟೈಲ್ ಅಂದ್ರೆ ಅಲ್ಲಿ ದರ್ಶನ್ ಇದ್ದೇ ಇರ್ತಾರೆ. ಇದು ಅವರಿಗಷ್ಟೆ ಸೀಮಿತವಲ್ಲ ಅವರ ಅಭಿಮಾನಿಗಳೂ  ಮಾಸ್ ಬಳಗದವರೆ.  ಬಾಕ್ಸ್ ಆಫೀಸ್ ಗೆ ಲಗ್ಗೆ ಇಡೋಕೆ ಸರ್ವ ತಯಾರಿ ಮಾಡಿಕೊಂಡಂತಿರುವ ಚಕ್ರವರ್ತಿ ಹೇಗಿದ್ದ ? ಹೇಗಾದ ಒಂದ್ಸಲ ನೋಡಿಬಿಡೋಣ.

ಅಷ್ಟಕ್ಕೂ  ದರ್ಶನ್ ರವರ ಹಾದಿ ಹೇಗಿತ್ತು?  

ಮಗ ಒಬ್ಬ ಕ್ರಿಕೆಟರ್ ಆಗಬೇಕು ಅಂದುಕೊಂಡ ಅಪ್ಪನಿಗೆ ನಾನೊಬ್ಬ ಹಿರೋ ಆಗಬೇಕು ಎಂದು ಅದಕ್ಕೆ ಬೇಕಾದ ಪೂರ್ವ ತಯಾರಿ ಮಾಡಿ ಆಗೊಂದು ಈಗೊಂದು ಪಾತ್ರ ಮಾಡಿದ ದರ್ಶನ್ ತೂಗುದೀಪ್ ಅವರಿಗೆ ಧಾರಾ ವಾಹಿಯಲ್ಲಿ ನಟಿಸಲು ಅವಕಾಶ ಬಂತು .. ದಿಗ್ಗಜನಂಥ ಖಳನಟನ ಮಗನಾದರೂ ಬದುಕು ಸಾಗಿಸಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ.

 ಮೆಜೆಸ್ಟಿಕ್ ಅನ್ನೊ ಮಾಸ್ ಸಿನಿಮಾ ಸಿಕ್ಕಿದ್ದೇ ಬದುಕು ಗೆಲುವಿನ ರುಚಿ ತೋರಿಸಿತ್ತು .ಇದೇ ಸಿನಿಮಾ ನೋಡಿ ಕೈ ಹಿಡಿದಿದ್ದು. ಅಲ್ಲಿಂದ ಶುರುವಾದ ಸ್ಯಾಂಡಲ್ ವುಡ್ ಜರ್ನಿ ಒಂದಾದರ ಮೇಲೊಂದರಂತೆ ಸಿನಿಮಾಗಳು ಒಲಿದು ಬಂತು. ಆದ್ರೆ ಮೆಜೆಸ್ಟಿಕ್ ತದನಂತರದಲ್ಲಿ ದರ್ಶನ್ ನಾರ್ಮಲ್ ಸಿನಿಮಾದಲ್ಲಿ ನಟಿಸಿದ್ರು..
ಧ್ರುವ,ನಿನಗೋಸ್ಕರ,ಕಿಟ್ಟಿ ಹೀಗೆ ನಾನಾ ರೀತಿಯ ಚಿತ್ರಗಳಲ್ಲಿ ನಟಿಸಿದ್ರು.

 ಯಾರಿಗೆ ಲಕ್ ಯಾವಾಗ ಒಲಿದು ಬರುತ್ತೋ ಹೇಳೋರ್ಯಾರು .. ನಮ್ಮ ಇಂಡಸ್ಟ್ರಿಯಲ್ಲಿ ನಟನೆ ಜೊತೆಗೆ ಲಕ್ ಇರೋದು ತುಂಬಾನೇ ಮುಖ್ಯ. ನನ್ನ ಪ್ರೀತಿಯ ರಾಮು ಚಿತ್ರದಲ್ಲಿ ಅದ್ಭುತವಾಗಿ ನಟಿಸಿದರು ಉತ್ತುಂಗಕ್ಕೇರಲಿಲ್ಲ. ಸಾಧಾರಣ ಚಿತ್ರಗಳ ಸಾಲು ನಡೆದಿತ್ತು . ಅದಾದ ನಂತರ ಒಂದರ  ಮೇಲೊಂದರಂತೆ ಕರಿಯ , ಕಲಾಸಿಪಾಳ್ಯ , ಸಂಗೊಳ್ಳಿ ರಾಯಣ್ಣ ,ಸಾರಥಿ ಯಂಥ ಹಿಟ್ ಸಿನಿಮಾ ಕೊಟ್ಟು ಸ್ಯಾಂಡಲ್ ವುಡ್ ನ .ಬಾಕ್ಸ್ ಆಫೀಸ್ ಸುಲ್ತಾನ್ ಅನ್ನೋ ಪಟ್ಟಕ್ಕೇರಿದ್ರು..

ದರ್ಶನ್ ಸ್ನೇಹಕ್ಕೆ ಬಹಳ ಪ್ರಾಮುಖ್ಯತೆ ಕೊಡ್ತಾರಂತೆ . ಸ್ಯಾಂಡಲ್ ವುಡ್ ನಲ್ಲಿ ಸುದೀಪ್ ಅವರನ್ನ ಇಷ್ಟ ಪಡ್ತಿದ್ದ  ದರ್ಶನ್ ಸಿಸಿಎಲ್ ನಿಂದ ಬಹಳ ಆಪ್ತರೆನಿಸಿದ್ರು. ಯಾವುದೇ ಕಾರ್ಯಕ್ರಮದಲ್ಲು ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ತಿದ್ರು ..

ಇಷ್ಟಕ್ಕೂ ಬಾಕ್ಸ್ ಆಫೀಸ್ ಸುಲ್ತಾನ್ ಪಟ್ಟಕ್ಕೆ ಕುತ್ತು ತಂದಿತ್ತಾ  ಪತ್ನಿಯ ಜಗಳ?

ಕೇವಲ ಚಾಲೆಂಜಿಂಗ್ ಸ್ಟಾರ್ ಆಗಿದ್ದ ದರ್ಶನ್ ಗೆ ಬಾಕ್ಸ್ ಆಫೀಸ್ ಸುಲ್ತಾನ್ ಪಟ್ಟ ಸಿಕ್ಕಿದ್ದು ವಿಜಯ ಸಾರಥಿ ಅನ್ನೋ ಪತ್ರಕರ್ತನಿಂದ ಅವರನ್ನು ಎಂದಿಗೂ ಮರೆಯಲಾರೆ ಅಂತಾರೆ ದರ್ಶನ್

ದರ್ಶನ್ ಸ್ವಲ್ಪ ಮುಂಗೋಪಿ ಅಂತಾರೆ ಕೆಲ ಸ್ನೇಹಿತ್ರು ಅಷ್ಟೆ ಅಲ್ಲ ಸ್ವತಃ ಅವರ ತಮ್ಮ ದಿನಕರ್ ತೂಗುದೀಪ್ ಕೂಡ ಅವರ ಅಣ್ಣನ ಕೋಪಿಷ್ಟ ಅಂತಾರೆ ಬಟ್ ಇದೇ ಕೋಪ ತಾರಕ್ಕಕ್ಕೇರಿ ಪತಿ ಪತ್ನಿಯ ನಡುವೆ ಜಗಳಕ್ಕೆ ಕಾರಣವಾಯ್ತು .

ಯಾವ ಪ್ರೀತಿ ಇಷ್ಟವಾಗಿ ದರ್ಶನ್ ಅವರ ಬದುಕಿನ ನೋವನ್ನು ಮರೆಸಿತ್ತೋ ಮದುವೆಯಾಗಿ ಸುಮಾರು ವರ್ಷಗಳ ನಂತರ ಅದೇ ಪ್ರೀತಿ ದರ್ಶನ್ ಪಾಲಿಗೆ ಮುಳುವಾಯ್ತು..

ಎಲ್ಲವೂ ಸರಿ ಇದ್ದಂತ ಸಂದರ್ಭದಲ್ಲಿ ದರ್ಶನ್ ಮನೆಗೆ ಸರಿಯಾಗಿ ಬರಲ್ಲ ಅನ್ನೋ ಮಾತು ಕೇಳಿ ಬರ್ತಿತ್ತು . ಮತ್ತೊಂದು ಸಂಬಂಧದ ಮಾತು ಹರಿದಾಡಿತ್ತು .ಇದನ್ನ ಮನಗಂಡ ಅವರ ಪತ್ನಿ ವಿಜಯಲಕ್ಷ್ಮಿ  ಸಿಡಿದು ನಿಂತಿದ್ರು . ವಿಜಯಲಕ್ಷ್ಮಿ ಮೇಲು ಆಪಾದನೆಗಲು ಕೇಳಿ ಬಂದಿದ್ದವು . ಈ ಜಗಳ ವಿಕೋಪಕ್ಕೆ ತಿರುಗಿ ಕೈ ಕೈ ಮಿಲಾಯಿಸುವ ಹಂತಕ್ಕೂ ಬಂತು..

ಅಷ್ಟರಲ್ಲಾಗಲೇ, ವಿಜಯಲಕ್ಷ್ಮಿ ತಮ್ಮ ಮಗ ವಿನೇಶ್ ನೊಂದಿಗೆ  ಮನೆ ಬಿಟ್ಟು ಹೊರಟುಬಿಟ್ಟಿದ್ದರು . ಅಲ್ಲಿಂದ   ಪೊಲೀಸ್ ಠಾಣೆಯ ಮೆಟ್ಟೇಲೇರಿ ಹೈ ಡ್ರಾಮಾವೆ ನಡೆದು ಹೋಯ್ತು…

ದರ್ಶನ್ ಅವರ ಮುಂಗೋಪವೆ ಅವರು ಕಂಬಿ ಹಿಂದೆ ಹೋಗುವಂಥ   ಪರಿಸ್ಥಿತಿ ತಂದೊಡ್ಡಿತು. ಇದಕ್ಕೂ ಮುನ್ನ ದಿನಕರ್ ಅವರ ನಿರ್ದೇಶನದ ಅಡಿಯಲ್ಲಿ ಬರ್ತಿದ್ದ ಸಿನಿಮಾ ಸಾರಥಿ  ಶೂಟಿಂಗ್ ಹಂತದಲ್ಲಿರುವಾಗ್ಲೆ ದರ್ಶನ್  ಜೈಲು ಸೇರಿದ್ರು..

ಸಾರಥಿ ಕೊಟ್ಟ ವರ !!

ಒಂದಷ್ಟು ದಿನಗಳ ಕಾಲ  ಜೈಲಿನಲ್ಲಿದ್ದ ದರ್ಶನ್ ಗೆ ಅಭಿಮಾನಿಗಳ ಬಳಗ ಮಾತ್ರ ಕಡಿಮೆ ಆಗಲಿಲ್ಲ.  ಯಾವಾಗ ತಮ್ಮ ಹೀರೋ  ಸಿನಿಮಾ ಬರುತ್ತೋ ಅವರನ್ನು ನೋಡ್ತಿವೋ ಅನ್ನೋ ಹಂಬಲಕ್ಕೆ ಬಿದ್ರು. ಜೈಲು ಸೇರಿದ್ದು ಸಿನಿಮಾಗೆ ಹೊಡೆತ ಬೀಳುತ್ತೇನೋ ಅನ್ನುವ ಆತಂಕ ಸ್ವತಃ ದರ್ಶನ್ ಗೆ ಇದ್ದಿದ್ದು ಸುಳ್ಳಲ್ಲ.

ಆದ್ರೆ ದರ್ಶನ್ ಗೆ ಜೈಲು ಸೇರಿದ್ದೇ ವರವಾಯ್ತೋ ಏನೋ  ಜೈಲಿನಿಙದ ಬಂದ ತಕ್ಷಣವೇ ಯಾವುದಕ್ಕೂ ಮಣಿಯದೆ ಸಾರಥಿ ಸಿನಿಮಾ ಮುಗಿಸಿ ತಮ್ಮ ಅಭಿಮಾನಿಗಳಿಗೆ ಅರ್ಪಿಸಿದ್ರು .ಅಭಿಮಾನಿಗಳು ಅದೇನು ಅನುಕಂಪವೋ, ಪ್ರೀತಿಯೋ , ಸಿನಿಮಾ ಮಾಡಿದ ಮೋಡಿಯೋ ಸಾರಥಿಯನ್ನು ಸುಲ್ತಾನನ ಪಟ್ಟಕ್ಕೇರಿಸಿದ್ರು.

ಕಳಚಿದ ಕೀರೀಟ ..

ಇದಾದ ಬಳಿಕ ದರ್ಶನ್ ಅಂಬರೀಷ ,ಐರಾವತನಾಗಿ ಬಂದರೂ ಗೆಲುವು ಮರೀಚಿಕೆಯಂತೆ ಆಡಿಸಿತ್ತು .ಜಗ್ಗುದಾದ ಸ್ವಲ್ಪ ಮಟ್ಟಿಗೆ ಉಸಿರಾಡುವಂತೆ ಮಾಡಿತ್ತು. ಯಾವ ಹತ್ತಾರು ಸಿನಿಮಾಗಳ ಮಧ್ಯೆ  ದರ್ಶನ್ ಹೈಲೈಟ್ ಆಗಿ ಸುಲ್ತಾನ ಅನ್ನಿಸಿಕೊಂಡಿದ್ರೋ ಅದೇ   ಹತ್ತಾರು ಸಿನಿಮಾಗಳ ಮಧ್ಯೆ  ಒಬ್ಬರಾಗಿಬಿಟ್ರು ದರ್ಶನ್ ..ಸುಲ್ತಾನ್ ಪಟ್ಟ ಕಳಚಿಬಿದ್ದಿತ್ತು..

ಮುರಿದ ಬಿದ್ದ ಗೆಳೆತನ

ಈ ಮಧ್ಯೆ ದಚ್ಚು-ಕಿಚ್ಚ ಸ್ನೇಹ ಹಳಸಿದ ವಾಸನೆ ಶುರುವಾಗಿತ್ತು .ಸುದೀಪ್  ತನ್ನ ಕ್ಲಾಸ್ ಕಳಚಿ ಮಾಸ್ ಚಿತ್ರಗಳನ್ನ ಕೊಟ್ಟು ಗೆಲುವಿನ ದಾರಿ ಕಂಡುಕೊಂಡಿದ್ರು.  ನನ್ನ ಗೆಳೆಯ ದರ್ಶನ್ ಬಾಕ್ಸ್ ಆಫೀಸ್ ಸುಲ್ತಾನ ಅಂದಿದ್ದ ಸುದೀಪ್ ಸ್ವಲ್ಪ ವರ್ಷದಲ್ಲೇ ಬಾಕ್ಸ್ ಆಫೀಸ್ ಧೂಳ್ ಎಬ್ಬಿಸೋ ಗೆಲ್ಲೋ ಕುದುರೆ ಆಗಿಬಿಟ್ರು. ಹೆಬ್ಬುಲಿ ಅಬ್ಬರಿಸಿ ಬಿಡ್ತು . ದರ್ಶನ್, ಸುದೀಪ್ ಎಂದೋ ಆಡಿದ ಮಾತಿನ ಎಳೆ ಹಿಡಿದು ತಮ್ಮ fb ಅಕೌಂಟ್ ನಲ್ಲಿ ನೋವು ತೋಡಿಕೊಂಡ್ರು.  ಸುದೀಪ್ ದರ್ಶನ್ ರ ಟ್ವಿಟರ್ ಜಗಳ ಶುರುವಾಗಿತ್ತು .

ಮೆಜೆಸ್ಟಿಕ್ ಚಿತ್ರ ಸುದೀಪ್ ಬಿಟ್ಟು ಕೊಟ್ಟಿದ್ದು ಅನ್ನೋ ಮಾತಿಗೆ ಕೋಪಗೊಂಡ  ದರ್ಶನ್ ಟ್ವಿಟರ್ ನಲ್ಲಿ ಖಾರವಾಗೆ ಪ್ರತಿಕ್ರಿಯೆ ನೀಡಿದ್ರು ವಾದ ವಿವಾದದ ನಡುವೆ ಸ್ನೇಹ ಅನ್ನೊ ಸಂಬಂಧದ ಕೊಂಡಿ ಕಳಚಿಬಿತ್ತು.

ಚಕ್ರವರ್ತಿಯ ಸವಾಲುಗಳು ?

ಬಟ್ ದರ್ಶನ್ ಅವರಲ್ಲಿರೋ ಹಠ, ಛಲ  ಅವರನ್ನ ಸುಮ್ಮನೆ ಕೂರಲು ಬಿಟ್ಟಿಲ್ಲ .”ಚಕ್ರವರ್ತಿ”ಯ ರೂಪದಲ್ಲಿ ಬರ್ತಾ ಇದೆ. ಒಂದು ಕಡೆ ತೆರೆಯ ಮೇಲೆ ಪುಟಿಯುವ ಪ್ರತಿಭೆ ,ತಮ್ಮದೇ ಸಮುದಾಯದ ರಾಕಿಂಗ್ ಸ್ಟಾರ್ ಯಶ್ , ಮತ್ತೊಂದು ಕಡೆ ಅಬ್ಬರಿಸುತ್ತಿರುವ ಅಭಿನಯ ಚಕ್ರವರ್ತಿ , ಮಗದೊಂದು ಕಡೆ ರಾಜಕುಮಾರನ ಗೆಲುವು ಇದೆಲ್ಲವನ್ನು ಮೀರಿಸಿ ಚಕ್ರವರ್ತಿಯಾಗಿ ನಿಲ್ಲುವ ಅನಿವಾರ್ಯತೆ ಇಲ್ಲದಿಲ್ಲ. 

ಈ ಮಧ್ಯೆ ಮಾತುಕತೆಯಲ್ಲೂ ಸ್ವಲ್ಪ ತಣ್ಣಗಾದ ಹಾಗಿದ್ದಾರೆ  ದರ್ಶನ್. ಹೆಚ್ಚು ಮಿಡಿಯಾಗೆ ತೆರೆದುಕೊಳ್ಳದೆ ತನ್ನ ಪಾಡಿಗೆ ತಾನಿದ್ದು ತೆರೆಯ ಮೇಲಷ್ಟೇ ಅಬ್ಬರಿಸುವ ದಚ್ಚು ಚಕ್ರವರ್ತಿಯ ಬಗ್ಗೆ ಮಾತಾಡುವಾಗ  ಮಾತ್ತ್ರ ಲವಲವಿಕೆಯಿಂದ ಕಣ್ಣರಳಿಸಿ ಮಾತಾಡುತ್ತಿದ್ದಾರೆ. ಅಲ್ಲಿ ಭರವಸೆ , ನಂಬಿಕೆ ,ಛಲ ತುಂಬಿರುವುದಂತೂ ನಿಜ.

ಕಾದಿದ್ದು ಸಾರ್ಥಕವಾದೀತಾ ?

ಟ್ರೇಲರ್ ನಲ್ಲೆ ಸಾಕಷ್ಟು ಹವಾ ಕ್ರಿಯೇಟ್ ಮಾಡಿರೋ  “ಚಕ್ರವರ್ತಿ ” ದರ್ಶನ್ ಗೆ ಸಾಕಷ್ಟು ಹೋಪ್ ತಂದುಕೊಟ್ಟಿರೋದಂತು ಸತ್ಯ..ದರ್ಶನ್ ಅವರೆ ಹೇಳುವಂತೆ ಈ ಸಿನಿಮಾ ಪಕ್ಕಾ  ಹಿಟ್ ಆಗುತ್ತೆ. ಜನ ಗೆಲ್ಲಿಸೇ ಗೆಲ್ಲಿಸ್ತಾರೆ ಅನ್ನುವಂತೆ ಈಗಾಗಲೇ ಸೋಷಿಯಲ್ ಮಿಡೀಯಾಗಳಲ್ಲಿ ದರ್ಶನ್ ಅವರ ಹವಾ ಜೋರಾಗಿದೆ..

ಅದಲ್ಲದೆ ಖುದ್ದು ದರ್ಶನ್ ಹೇಳುವಂತೆ ಚಕ್ರವರ್ತಿ ಯಾವ ಹೊರ ರಾಜ್ಯದ  ಸಿನಿಮಾಗಳಿಗಿಂತ ಕಮ್ಮಿ ಇಲ್ಲ ನಾವಾ  -ಅವರಾ  ನೋಡೇಬಿಡೋಣ ಅಂತಿದ್ದಾರೆ! ಇದು ಕೂಡ ಕನ್ನಡ ಚಿತ್ರಗಳ ಜತೆ ಪೈಪೋಟಿ ಮಾಡಲ್ಲ ನಾವೆಲ್ಲಾ ಒಂದು ಅನ್ನೋ ಮೆಸೇಜ್ ಪಾಸ್ ಮಾಡಿ ಎಲ್ಲರ ಬೆಂಬಲ ಪಡೆಯೋ ಇಚ್ಛೆ ಇದ್ದಂತಿದೆ. ಜೊತೆಗೆ ತಮ್ಮ fb ಲೈವ್ ನಲ್ಲಿ ಶಿವಣ್ಣನ್ನ ನೋಡಿ ಲಾಂಗ್ ಹಿಡಿಯೋದು ಕಲಿತೆ ಅಂದಿರೋದು ಸ್ನೇಹಕ್ಕೆ ಸ್ನೇಹ ಪ್ರೀತಿಗೆ ಪ್ರೀತಿ ನಾನು ಸ್ನೇಹಜೀವಿ ಅನ್ನೋ ಸಂದೇಶ ರವಾನಿಸಿದಂತಿದೆ .

ಇಂದು ರಾತ್ರಿ ಹನ್ನೆರಡು ಗಂಟೆಗೆ  ರಿಲೀಸ್ ಆಗಲಿರೋ ಚಕ್ರವರ್ತಿ ಸಿನಿಮಾ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಾ? ಮತ್ತೆ ದರ್ಶನ್ ಗೆ ಅನಿವಾರ್ಯವಾಗಿರುವ ಬಾಕ್ಸ್ ಆಫೀಸ್ ಸುಲ್ತಾನಾ  ಅನ್ನೊ ಪಟ್ಟ ತಂದುಕೊಡುತ್ತಾ ಅನ್ನೋದನ್ನ ಮಾತ್ರ ಕಾದೇ  ನೋಡಬೇಕು.

ಏನೇ ಇರಲಿ , ನಮ್ಮ ಕಡೆಯಿಂದಲೂ ಚಕ್ರವರ್ತಿ ಸಿನಿಮಾ ಗೆ ಆಲ್ ದಿ ಬೆಸ್ಟ್ .

_ಪಲ್ಲವಿ ಗೌಡ

-Ad-

Leave Your Comments