ಚಲನಚಿತ್ರ ವಾಣಿಜ್ಯ ಮಂಡಳಿಗೆ ಮತ್ತೊಂದು ವರ್ಷವೂ ಸಾ.ರಾ. ಗೋವಿಂದು ?

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರ ಅವಧಿ ಮುಗಿದಿದೆ . ಚುನಾವಣೆ  ನಡೆದಿಲ್ಲ ಅಂತ ನಿರ್ಮಾಪಕ ಭಾಮಾ ಹರೀಶ್ ಮತ್ತು ಅವರ ತಂಡ ಪ್ರತಿಭಟನೆ ನಡೆಸಿತ್ತು.  ಅವಧಿ ಮುಗಿದರೂ  ಸಾ.ರಾ.ಗೋವಿಂದು ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆದಿದ್ದಾರೆ ಎಂಬ ವಿರೋಧವೂ ವ್ಯಕ್ತವಾಗಿತ್ತು. ಇದೀಗ ಚಿತ್ರರಂಗದ ಪ್ರಮುಖರ ಗುಂಪು ಸಾ .ರಾ.ಗೋವಿಂದು ಅವರನ್ನೇ ಮುಂದುವರಿಸುವ ಇಚ್ಛೆ ವ್ಯಕ್ತಪಡಿಸಿದೆ.

ಇದೇ ವಿಚಾರಕ್ಕೆ ಸಂಬಂಧ ಪಟ್ಟಂತೆ  ಶುಕ್ರವಾರ ಜಯಣ್ಣ, ನಟ ಜಗ್ಗೇಶ್ , ಕೆ ಮಂಜು,ರಾಕ್ ಲೈನ್  ವೆಂಕಟೇಶ್ ಜೊತೆಗೆ  ಹಲವರು ಚಲನಚಿತ್ರ ವಾಣಿಜ್ಯ ಮಂಡಳಿ ಆವರಣದಲ್ಲಿ ಸಭೆ ನಡೆಸಿ ಸಾ.ರಾ. ಗೋವಿಂದು ಅವರೇ ಮತ್ತೊಂದು  ಅವಧಿಗೆ ಅಧ್ಯಕ್ಷರಾಗಿ ಮುಂದುವರೆಯಬೇಕು ಎಂಬ ನಿರ್ಧಾರಕ್ಕೆ  ಬಂದಿದ್ದಾರೆ .

ಸಾ.ರಾ. ಗೋವಿಂದು ಅವರ ಅಧ್ಯಕ್ಷತೆಯಲ್ಲಿ ಸಾಕಷ್ಟು ಉತ್ತಮ ಕೆಲಸಗಳು ಆಗಿವೆ. ಅವರಿಂದ ಇಂತಹ ಮತ್ತಷ್ಟು ಉತ್ತಮ ಕೆಲಸಗಳು ಆಗಬೇಕಿದೆ. ಅವರೇ ಅಧ್ಯಕ್ಷರಾಗಿ ಮುಂದುವರಿದರೆ ಸೂಕ್ತ ಎಂಬ ಅಭಿಪ್ರಾಯದೊಂದಿಗೆ  ಚಿತ್ರರಂಗದ ವತಿಯಿಂದ ಮನವಿ ಸಲ್ಲಿಸಿದ್ದಾರೆ ರಾಕ್ ಲೈನ್ ವೆಂಕಟೇಶ್ .

ಜೂನ್ 16 ರಂದು ಸರ್ವ ಸದಸ್ಯರ ಸಭೆ ನಡೆಯಲಿದೆ. ಸಾ.ರಾ.ಗೋವಿಂದು ಅಧ್ಯಕ್ಷರಾಗಿ ಮುಂದುವರೆಯುತ್ತಾರಾ ಎನ್ನುವುದು ಅಂದೇ ನಿರ್ಧಾರವಾಗುವ ಸಾಧ್ಯತೆ ಇದೆ.

-Ad-

Leave Your Comments