ಯಡಿಯೂರಪ್ಪನಾಗ್ತಾರಾ ರಿಯಲ್ ಸ್ಟಾರ್ ಉಪೇಂದ್ರ !?

ರಾಜಕೀಯಕ್ಕೂ ಸಿನೆಮಾಗೂ ಭಾರೀ  ಹಳೆಯ  ನಂಟು. ಇಲ್ಲಿರೋರು ಅಲ್ಲಿ ಹೋಗೋದು ಅಲ್ಲಿರೋರು ಇಲ್ಲಿಗೆ ಬರೋದು ಕಾಮನ್ . ರಾಜಕೀಯಕ್ಕೆ ಸಿನೆಮಾ ಒಂದು ರೀತಿ  ಲಾಂಚ್  ಪ್ಯಾಡ್ ಆಗಿ ಹೋಗಿದೆ. ಸಿನಿಮಾ ಪಾಪ್ಯುಲಾರಿಟಿಯಿಂದ ಚುನಾವಣೆಯಲ್ಲಿ ಗೆದ್ದು ಬಂದವರೂ ಇದ್ದಾರೆ. ಸಿನಿಮಾದಿಂದ ರಾಜಕೀಯಕ್ಕೆ ಜಿಗಿದವರ ಪಟ್ಟಿ  ದೊಡ್ಡದಿದೆ. ಅಂಬರೀಶ್, ಜಗ್ಗೇಶ್, ಉಮಾಶ್ರೀ ,ಜಯಮಾಲ ಶ್ರುತಿ, ತಾರಾ, ಮಾಳವಿಕಾ, ಯೋಗೇಶ್ವರ್, ಯಡಿಯೂರಪ್ಪನಾಗ್ತಾರಾ ಬಿಸಿ ಪಾಟೀಲ್, ಮುನಿರತ್ನ  ಮುಂತಾದವರು.
ತಮಿಳು -ತೆಲುಗು ಚಿತ್ರರಂಗದಲ್ಲಂತೂ  ಸಿನೆಮಾ ರಂಗದವರೆ ಆಳುವವರಾಗಬೇಕು ಅನ್ನೋ ಮನಸ್ಥಿತಿ ಇದೆ. ಎಂ ಜಿ ಆರ್ ,ಎನ್ ಟಿ ಆರ್ , ಕರುಣಾನಿಧಿ,ಜಯಲಲಿತ, ಚಿರಂಜೀವಿ, ಹೀಗೆ ಪಟ್ಟಿ ಬೆಳೆಯುತ್ತದೆ.
ರಾಜಕಾರಣದಿಂದ ಸಿನಿಮಾಕ್ಕೆ ಇಣುಕಿದವರು
 ಈ ಆಟದಲ್ಲಿ ಸೋತವರೂ ಇದ್ದಾರೆ. ಅನಂತ್ ನಾಗ್ ಒಮ್ಮೆ ಹಾಗೆ ಹೋಗಿ ಹೀಗೆ ವಾಪಸ್ ಬಂದಿದ್ರು..
ಇನ್ನು ರಾಜಕಾರಣದಿಂದ ಸಿನೆಮಾ ಕಡೆ ಮುಖ ಮಾಡುವುದು ವಿರಳ. ಎಲ್ಲೋ ಒಮ್ಮೆ ಎಂ ಪಿ ಪ್ರಕಾಶ್, ರಾಮಕೃಷ್ಣ ಹೆಗಡೆ, ಜೆ ಹೆಚ್ ಪಟೇಲ್ ಬಣ್ಣ ಹಚ್ಚಿದ್ದರು ಅಷ್ಟೇ.. ಅದು ಬಿಟ್ಟರೆ ಸಂಪೂರ್ಣ ತೊಡಗಿಸಿಕೊಳ್ಳೋದು ಆಗಿಲ್ಲ. ಎಂ. ಎಲ್. ಎ  ನೆ ಲ ನರೇಂದ್ರಬಾಬು ಅವ್ರು ಆಗೊಮ್ಮೆ ಈಗೊಮ್ಮೆ ಬಣ್ಣ ಹಚ್ಚುತ್ತಿದ್ದಾರೆ ಅಷ್ಟೆ.
ಇದೆಲ್ಲ ಹಳೆಯದ್ದು, ದೂರದ ಮಾತಾಯಿತು.ಈಗಿನವರನ್ನ ನೋಡೋದಾದ್ರೆ ರಾಜಕಾರಣಿಗಳು ತಮ್ಮ ಮಕ್ಕಳನ್ನ ಸಿನೆಮಾದಲ್ಲಿ ನೆಲೆ ನಿಲ್ಲಿಸೋಕೆ ಒದ್ದಾಡೋದು ಕಣ್ಣಿಗೆ ರಾಚುತ್ತಿದೆ. ಕುಮಾರಸ್ವಾಮಿ ಪುತ್ರ ನಿಖಿಲ್, ಹೆಚ್ ಎಂ ರೇವಣ್ಣ ಪುತ್ರ ಪ್ರಜ್ವಲ್ ಇನ್ನಿತರರು.
ಇನ್ನು ಎಲ್ಲರಿಗೂ  ಗೊತ್ತಿರೋ ವಿಷ್ಯ  ಏನಪ್ಪಾ ಅಂದ್ರೆ ಚುನಾವಣೆ ಹತ್ತಿರ  ಬರುತ್ತಿದ್ದ  ಹಾಗೆ ಕುಮಾರಸ್ವಾಮಿ ಅವರ  ಜೀವನ ಚರಿತ್ರೆ ಎಂದು ಹೇಳಲಾಗ್ತಿರೋ ಭೂಮಿ ಪುತ್ರ ಫಿಲ್ಮ್  ಅನೌನ್ಸ್ ಮಾಡಿರೋದು. ಆ ಚಿತ್ರದ ಅದ್ದೂರಿ ಮುಹೂರ್ತನೂ ಆಚರಿಸ್ಕೊಂಡಾಗಿದೆ. ಅದರ ಬೆನ್ನಲ್ಲೇ ಇವಾಗ ರಾಜ್ಯದ ಮತ್ತೊಬ್ಬ ಸ್ಟಾರ್ ರಾಜಕಾರಣಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಸಿನೆಮಾ ಆಗ್ತಿರೊ ಸುದ್ದಿ ಬರ್ತಾ ಇದೆ.
ಯಡಿಯೂರಪ್ಪನವರ ಬಲಗೈ ಬಂಟ ಬಿಜೆಪಿ ಮುಖಂಡ ರುದ್ರೇಶ್ ಅವ್ರು ಈ ಸಿನೆಮಾ ಮಾಡಲು ಮುಂದಾಗಿದ್ದಾರೆ. ಈ ಕುರಿತು “ನೇಗಿಲಯೋಗಿ” “ಮಣ್ಣಿನ ಮಗ” ಎಂಬ ಎರೆಡು ಟೈಟಲ್  ನೋಂದಾಯಿಸಿದ್ದಾರೆ ಎನ್ನಲಾಗಿದೆ.
ಯಡಿಯೂರಪ್ಪನಾಗಿ ಉಪ್ಪಿ !
 ಯಡಿಯೂರಪ್ಪನವರ ಪಾತ್ರ ನಿರ್ವಹಿಸಲು ರಿಯಲ್ ಸ್ಟಾರ್ ಉಪೇಂದ್ರ ಅವರೇ ಸೂಕ್ತ ಎಂದು ಅವರನ್ನ ಸಂಪರ್ಕಿಸಲಾಗಿದೆ  ಅವರೂ ಒಪ್ಪಿಕೊಂಡಿದ್ದಾರೆ ಎಂಬ ಮಾಹಿತಿ  ತಿಳಿದು ಬಂದಿದೆ.
ಇನ್ನು ಯಡಿಯೂರಪ್ಪನವರ ಬದುಕಲ್ಲಿ ಬಹುಮುಖ್ಯ ಪಾತ್ರ ವಹಿಸಿದ  ಅನಂತ್ ಕುಮಾರ್ ಅವರ ಪಾತ್ರದಲ್ಲಿ ಕುಮಾರ್ ಬಂಗಾರಪ್ಪ,! ಶೋಭಾ ಕರಂದ್ಲಾಜೆ ಆಗಿ ಶ್ರುತಿ ಬಣ್ಣ ಹಚ್ಚುವ ಸುದ್ದಿ ಇದೆ.
ಇನ್ನೊಂದು ಬಹುಮುಖ್ಯ ಪಾತ್ರ ಈಶ್ವರಪ್ಪನವರಾಗಿ ಯಾರು ಮಾಡ್ತಾರೆ ಅನ್ನೋದು ಸದ್ಯದ ಕುತೂಹಲ .  ಈ ನಡುವೆ ಬಿ ಎಸ್ ವೈ ನನ್ನ ಬಗ್ಗೆ ಸಿನೆಮಾ ಮಾಡುವುದೇನು ಬೇಡ ಎಂದಿದ್ದಾರಂತೆ. ಆದರೆ ಸಿನೆಮಾ ಆಗದಿರುವ ಲಕ್ಷಣ ಏನೂ ಕಾಣುತ್ತಿಲ್ಲ…
ಒಟ್ಟಾರೆ ಚುನಾವಣೆ ಹತ್ತಿರ ಬರುತ್ತಿದ್ದಂತೆ  ರಾಜಕಾರಣಿಗಳೆಲ್ಲ ತಮ್ಮ ಸಿನೆಮಾ ಮಾಡಿ ಜನಮನ ಸೆಳೆಯುವ ತಂತ್ರಕ್ಕೆ ಮೊರೆ ಹೋಗ್ತಿದ್ದಾರೆ.
ಯಾರ ಸಿನೆಮಾ ಹಿಟ್ ಆಗತ್ತೆ? ಯಾರ  ಸಿನೆಮಾ ಕಿಕ್ ಔಟ್  ಆಗತ್ತೆ ಅಂತ ಪ್ರೇಕ್ಷಕ ಅಲಿಯಾಸ್ ಮತದಾರ ನಿರ್ಧರಿಸಬೇಕು.
_ವಿನಯ್
-Ad-

Leave Your Comments