ಎಲ್ಲೋ ಹುಟ್ಟಿ ಎಲ್ಲೋ ಬೆಳೆದ ಜೀವಗಳು ಪ್ರೀತಿಸಿ , ಭಾವಗಳ ಬೆಸುಗೆಯಲ್ಲಿ ಮಿಂದು ಒಂದಾಗುವುದೆಂದರೆ!? ಅದೊಂದು ದಿವ್ಯ ಅನುಭೂತಿ !!
ಒಲಿದ ಪ್ರೀತಿಗೆ ಕುಟುಂಬದ ಒಪ್ಪಿಗೆಯೂ ಸೇರಿದರೆ ಸಂಭ್ರಮಕ್ಕೆ ಎಣೆಯೆಲ್ಲಿ ?
ಇಂಥದೊಂದು ಸಂಭ್ರಮ-ಸಡಗರಕ್ಕೆ ಸಜ್ಜಾಗಿ ನಿಂತಿದ್ದಾರೆ ಕನ್ನಡ ಚಿತ್ರರಂಗದ ಯಶೋವಂತ ಕಲಾಕಾರರು. ಯಶ್ -ರಾಧಿಕಾ ಪಂಡಿತ್ ಚಿತ್ರ ರಸಿಕರು ಕಣ್ಣರಳಿಸಿ, ಕಣ್ತುಂಬಿಕೊಂಡ ಅಪೂರ್ವ ಜೋಡಿ!! ಅವರೀಗ ದಾಂಪತ್ಯದ ಹೊಸ್ತಿಲಲ್ಲಿದ್ದಾರೆ. ಮಂಗಳ ವಾದ್ಯಗಳು ಮೊಳಗಿ, ಹಿರಿಯರ ಆಶೀರ್ವಾದ, ಕಿರಿಯರ ಹಾರೈಕೆಗಳು ಅರಳಿ ಮದುವೆ ಎಂಬ ಮರೆಯಲಾಗದ ಮಂಗಳ ಕಾರ್ಯ ಘಟಿಸುವುದೊಂದೇ ಬಾಕಿ ಉಳಿದಿದೆ.
“ನಮ್ ಯಶ್ ಬಂಗಾರದಂಥ ಹುಡುಗ ಚೆನ್ನಾಗ್ ನೋಡ್ಕೊಮ್ಮ ರಾಧಿಕಾ” ಅಂತ ಯಶ್ ಅಭಿಮಾನಿಗಳು, ಹತ್ತಿರದ ಬಂಧುಗಳು ಹರಸುತ್ತಿದ್ದರೆ , “ನಮ್ ರಾಧಿಕಾ ಮುತ್ತಿನಂಥ ಹೆಣ್ಣು ಚೆನ್ನಾಗಿ ಕಾಪಾಡ್ಕೊಳಿ ಯಶ್ “ಅಂತ ರಾಧಿಕಾ ಅಭಿಮಾನಿಗಳು, ಆಪ್ತರು ಹಾರೈಸುತ್ತಿರುವುದುಂಟು.
ಮದುವೆ ಎಂಬ ಮಂಗಳ ಕಾರ್ಯದಲ್ಲಿ ಕೊಟ್ಟ ಉಡುಗೊರೆಗಳು ಎಷ್ಟು ಕಾಲ ಉಳಿಯುತ್ತವೋ ? ಗೊತ್ತಿಲ್ಲ. ಆದರೆ ಹಾರೈಸಿದ ನುಡಿಗಳು ಚಿರಕಾಲ ನೆನಪಿನಲ್ಲಿ ಉಳಿಯುವಂಥವು. ಅಪರೂಪದ, ಅನುರೂಪ ವಧುವರರಿಗೆ ನಿಮ್ಮ ಹಾರೈಕೆಗಳು ಸೇರಿ ಪ್ರೇಮಪೂರಿತ ದಾಂಪತ್ಯ ಅರಳಿನಗಲಿ ಎಂಬ ಅಭಿಲಾಷೆ ciniadda.com ದು.
ತಮ್ಮ ವಿವಾಹದ ಕರೆಯೋಲೆಯಲ್ಲಿ ಮದುವೆ ,ಸಂಬಂಧಗಳ ಬಗ್ಗೆ ಆಪ್ತ ಸಾಲುಗಳ ತುಂಬಿ, ಪ್ರೀತಿಯಿಂದ ಆಹ್ವಾನಿಸಿದವರು ಯಶ್ .ಓದಿನ ಅಭಿರುಚಿಯುಳ್ಳ ಅಪರೂಪದ ಕಲಾವಿದ ನಮ್ಮ ಅಣ್ತಮ್ಮ
ಇವರಿಬ್ಬರ ಮದುವೆಗೆ ಮರೆಯಲಾಗದ ಶುಭ ಹಾರೈಕೆಗಳು ನಿಮ್ಮಿಂದ ಬರಲಿ ಅವು ಯಶ್-ರಾಧಿಕಾ ಮನ-ಮನೆಯಲ್ಲಿ ಉಳಿಯಲಿ.
ಹತ್ತು ಸಾಲುಗಳಲ್ಲಿ ನಿಮ್ಮ ಶುಭಾಶಯವಿದ್ದರೆ ಸಾಕು. ನಿಮ್ಮ ಹಾರೈಕೆಗಳನ್ನು ಚೆಂದದ ಫ್ರೇಮಿನಲ್ಲಿಟ್ಟು ನಿಮ್ಮ ಹೆಸರಿನ ಸಮೇತ ಯಶ್ – ರಾಧಿಕಾ ಗೆ ತಲುಪಿಸುವ ಹೊಣೆ ನಮಗಿರಲಿ.
ಕಳಿಸುವಿರಲ್ಲ ?
ದಿನಾಂಕ -10-12-2016ರ ಒಳಗೆ ಮೇಲಿನ ಫ್ರೇಮಿನಲ್ಲಿರುವ ಇಮೇಲ್ ,fbಗೆ ಇನ್ಬಾಕ್ಸ್ ಮಾಡಿ.