ರಾಕಿಂಗ್ ಸ್ಟಾರ್ ಬರ್ತ್ ಡೇ ಹೇಗಿತ್ತು.. 

ಸ್ಯಾಂಡಲ್ ವುಡ್ ನ ಮೋಸ್ಟ್ ಪಾಪ್ಯುಲರ್ ಅಂಡ್ ಅತೀ ಬೇಡಿಕೆಯ ನಟ ಅಂದ್ರೆ ರಾಕಿಂಗ್ ಸ್ಟಾರ್ ಯಶ್.. ಇವತ್ತು 32ನೇ ವರ್ಷಕ್ಕೆ ಕಾಲಿಟ್ಟಿರುವ ಯಶ್ ಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಮಧ್ಯ ರಾತ್ರಿ 12ಗಂಟೆಗೆ ಯಶ್ ಅಭಿಮಾನಿಗಳು ಕತ್ರಿಗುಪ್ಪೆಯ ಮನೆ ಮುಂದೆ ಜಮಾಯಿಸಿದ್ರು. ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಅಭಿಮಾನಿಗಳಿಗೆ ನಿರಾಸೆ ಮಾಡದ ರಾಜಾಹುಲಿ , ಮೊದಲು ಕುಟುಂಬ ಸಮೇತ ಮಹಡಿ ಮೇಲೆ ನಿಂತು ಕೈ ಬೀಸಿದ್ರು.. ಬಳಿಕ ಪತ್ನಿ ರಾಧಿಕಾ ಪಂಡಿತ್ ಜೊತೆ ಅಭಿಮಾನಿಗಳ ಸನಿಹಕ್ಕೆ ಬಂದು ಅವರು ತಂದಿದ್ದ ಬಗೆಬಗೆಯ ಕೇಕ್ ಗಳನ್ನು ಕತ್ತರಿಸಿದ್ರು. ಅಭಿಮಾನಿಗಳು ರಾಮಾಚಾರಿ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿಪಟ್ರು.
ಕೆಜಿಎಫ್ ಚಿತ್ರತಂಡದಿಂದ ಯಶ್ ಗೆ ಗಿಫ್ಟ್
ಯಶ್ ಕೆರಿಯರ್ ನಲ್ಲಿ ಮೊದಲ ಬಾರಿಗೆ ಸುಮಾರು ನೂರು ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗ್ತಿರೋ ಕೆಜಿಎಫ್ ಸಿನಿಮಾ ತಂಡ ಯಶ್ ಹುಟ್ಟುಹಬ್ಬಕ್ಕೆ ಸ್ಪೆಷಲ್ ಉಡುಗೊರೆ ನೀಡಿದೆ.. ಯೂಟ್ಯೂಬ್ ನಲ್ಲಿ ಕೆಜಿಎಫ್ ಚಿತ್ರದ ಟೀಸರ್ ರಿಲೀಸ್ ಮಾಡಿದ್ದು, ಒಂದೇ ದಿನದಲ್ಲಿ ಐದು ಲಕ್ಷ ಜನರು  ವೀಕ್ಷಣೆ ಮಾಡಿ ಯಶ್ ಸಿನಿಮಾಗೆ ಹೌಹಾರಿದ್ದಾರೆ. ಟೀಸರ್ ನಲ್ಲಿ ಒಂದು ಹವಾ ಕ್ರಿಯೇಟ್ ಮಾಡಿದ್ದು, KGF ಸಿನಿಮಾ ಬಾಸ್ ಜೀವನದಲ್ಲಿ ಮೈಲಿಗಲ್ಲು ಸೃಷ್ಟಿಸುತ್ತೆ ಎನ್ನುತ್ತಿದ್ದಾರೆ ಅಭಿಮಾನಿಗಳು. ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಸೇರಿ ಐದು ಭಾಷೆಗಳಲ್ಲಿ ತಯಾರಾಗುತ್ತಿರುವ ಕೆಜಿಎಫ್ ಸಿನಿಮಾದ ಈ ಟೀಸರ್ ನಲ್ಲಿ ಅನಂತ್ ನಾಗ್ ವಾಯ್ಸ್ ಇರೋದು ಮತ್ತಷ್ಟು ಕುತೂಹಲ ಕೆರಳಿಸಿದೆ..
ಅಭಿಮಾನಿಗಳು ರಾಕಿಂಗ್ ಸ್ಟಾರ್ ಯಶ್ ಮೇಲೆ  ಅಪಾರ ಪ್ರೀತಿ ಗೌರವ ಇಟ್ಟಿದ್ದು, ಮನೆ ಬಳಿ ನೆರೆದಿದ್ದ ಅಪಾರ ಸಂಖ್ಯೆಯ ಅಭಿಮಾನಿಗಳನ್ನ ನೋಡಿಯೇ  ಗೊತ್ತಾಗುತ್ತಿತ್ತು. ಹುಟ್ಟು ಹಬ್ಬದ ಹಿಂದಿನ ದಿನ ಹಲವು ಟಿವಿ ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದ ರಾಕಿಂಗ್ ಸ್ಟಾರ್ ತಮ್ಮ ಮುಂದಿನ ಕೆಜಿಎಫ್ ಸಿನಿಮಾ ಬಗ್ಗೆ ಮಾಹಿತಿ   ಬಿಚ್ಚಿಟ್ಟಿದ್ರು.. ನಿರ್ಮಾಪಕರು ಸಿನಿಮಾವನ್ನು ಸಾಕಷ್ಟು ದೊಡ್ಡ ಮಟ್ಟದಲ್ಲಿ ನಿರ್ಮಾಣ ಮಾಡ್ತಿದ್ದು, ಯಾವುದಕ್ಕೂ ಕೊರತೆ ಮಾಡಿಲ್ಲ. ಎಲ್ಲದಕ್ಕೂ ಸೈ ಎಂದಿದ್ದಾರೆ. ನನಗೂ ಸಿನಿಮಾ ಯಶಸ್ಸು ಕಾಣುವ ನಂಬಿಕೆ ಇದೆ. ಅಭಿಮಾನಿಗಳು ಯಾವತ್ತೂ ನನ್ನ ಕೈ ಬಿಟ್ಟಿಲ್ಲ ಕೆಜಿಎಫ್ ನಲ್ಲೂ ಕೈ ಹಿಡಿಯುತ್ತಾರೆ ಅಂತ ಅಪಾರ ನಂಬಿಕೆ ವ್ಯಕ್ತಪಡಿಸಿದ್ರು. ತೆಲುಗಿನ ಬಾಹುಬಲಿ ರೀತಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಕೂಡ ಎರಡು ಭಾಗಗಳಲ್ಲಿ ಬರುತ್ತಿದ್ದು ಚಾಪ್ಟರ್ ಒನ್ ಅನ್ನೋ ಸಬ್ ಟೈಟಲ್ ಹೊಂದಿದೆ.. ಯಶ್ ಲುಕ್ ಮಾತ್ರ ಕಠೋರವಾದ ಮುಖಚರ್ಯೆ ಹೊಂದಿದ್ದು, ನೋಡಿದವರಿಗೆ ಇಷ್ಟವಾಗ್ತಿದೆ..
ಜ್ಯೋತಿ ಗೌಡ, ನಾಗಮಂಗಲ
-Ad-

Leave Your Comments