ರಶ್ಮಿಕಾ ವಿವಾದ ಕುರಿತು ಯಶ್ ಹೇಳಿದ್ದೇನು?

ಕಿರಿಕ್ ಪಾರ್ಟಿ ಖ್ಯಾತಿಯ ನಟಿ ರಷ್ಮಿಕಾ ಮಂದಣ್ಣ ಅವರು ನಟ ಯಶ್ ಕುರಿತು ಸಂದರ್ಶನವೊಂದರಲ್ಲಿ ನೀಡಿದ್ದ ಹೇಳಿಕೆ ವ್ಯಾಪಕ ಟೀಕೆಗೆ ಗುರಿಯಾಗಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಯಶ್ ಅಭಿಮಾನಿಗಳು ರಷ್ಮಿಕಾ ವಿರುದ್ಧ ಕೆಂಡಾಮಂಡಲವಾಗಿರುವ ಬೆನ್ನಲ್ಲೇ ಈ ಕುರಿತು ಫೇಸ್ ಬುಕ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಯಶ್, ಈ ವಿವಾದಕ್ಕೆ ಪ್ರಬುದ್ಧವಾಗಿ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

ಸಂದರ್ಶನದ ವೇಳೆ ರಶ್ಮಿಕಾ ಅವರಿಗೆ ಸಂದರ್ಶನಕಾರ ಕನ್ನಡ ಚಿತ್ರರಂಗದಲ್ಲಿ ಶೋ ಆಫ್ ತೋರಿಸುವ ನಟ ಯಾರು ಎಂಬ ಪ್ರಶ್ನೆ ಹಾಕಿದರು. ಇದಕ್ಕೆ ಇಷ್ಟವಿಲ್ಲದ ಮನಸ್ಸಿನಲ್ಲೇ ಉತ್ತರಿಸಿದ ರಶ್ಮಿಕಾ, ‘ಯಶ್ ಸರ್’ ಎಂದು ಉತ್ತರಿಸಿದ್ದರು. ರಷ್ಮಿಕಾ ಅವರ ಈ ಉತ್ತರವನ್ನು ದೊಡ್ಡ ವಿವಾದವಾಗಿ ಬಿಂಬಿಸಲಾಗಿತ್ತು. ಈ ಬಗ್ಗೆ ಯಶ್ ನೀಡಿರುವ ಪ್ರತಿಕ್ರಿಯೆ ಹೀಗಿದೆ.

‘ಎಲ್ಲರಿಗೂ ನಮಸ್ಕಾರ..

ಒಬ್ಬ ನಟನಾಗಿ ನಿಮ್ಮೆಲ್ಲರ ಪ್ರೀತಿ ಮತ್ತು ಅಭಿಮಾನವನ್ನು ಸಂಪಾದಿಸುವುದನ್ನೇ ಗುರಿಯಾಗಿಟ್ಟುಕೊಂಡು ಕೆಲಸ ಮಾಡುವ ನಾನು, ಕೆಲವೊಮ್ಮೆ ಎದುರಾಗುವ ಅನಗತ್ಯ ಎನಿಸುವ ವಿಷಯಗಳನ್ನು ನಿರ್ಲಕ್ಷಿಸುವ ಸ್ವಭಾವನನ್ನು ರೂಢಿಸಿಕೊಂಡಿದ್ದೇನೆ. ಆದರೆ ನನ್ನನ್ನು ಪ್ರೀತಿಸುವ ನಿಮ್ಮ ಮನಸಿಗೆ ನೋವಾದಾಗ ಪ್ರತಿಕ್ರಿಯೆ ನೀಡದೆ ಇರುವುದು ನನ್ನಿಂದ ಸಾಧ್ಯವಿಲ್ಲ. ನಿಮ್ಮ ಅಭಿಮಾನದ ಪ್ರೀತಿಗೆ ಬೆಲೆಕಟ್ಟಲಾಗುವುದಿಲ್ಲ. ಅದಕ್ಕೆ ನಾನೆಂದು ಚಿರರುಣಿ.

ರಶ್ಮಿಕಾ ಅವರು ವೈಯಕ್ತಿಕವಾಗಿ ನನಗೆ ಪರಿಚಿತವಿಲ್ಲ. ಇದುವರೆಗೂ ಭೇಟಿಯೂ ಮಾಡಿಲ್ಲ. ಮಾತು ಸಹ ಆಡಿಲ್ಲ. ಹಾಗೆಂದು ಅವರಿಗೆ ನನ್ನ ಬಗ್ಗೆ ಯಾವುದೇ ರೀತಿಯ ಅಭಿಪ್ರಾಯ ಇರಬಾರದೆಂದೇನಿಲ್ಲ. ಅವರ ಅಭಿಪ್ರಾಯ ಅವರದು. ಅದನ್ನು ಹೀಗಳೆಯುವ ಕೆಲಸ ಯಾರೂ ಮಾಡಬಾರದು. ಎಲ್ಲರ ಅಭಿಪ್ರಾಯ ಗೌರವಿಸೋಣ. ಒಬ್ಬರ ಭಿಪ್ರಾಯ ಇನ್ನೊಬ್ಬರ ವ್ಯಕ್ತಿತ್ವವನ್ನು ನಿರ್ಧರಿಸುವುದಿಲ್ಲ. ಈ ವಿಷಯ ಇಲ್ಲಿಗೆ ಬಿಟ್ಟುಬಿಡಿ, ಇಲ್ಲಿ ಚರ್ಚಿಸುವಂತದ್ದು ಏನೂ ಇಲ್ಲ!

ಕೆಲವೇ ದಿನಗಳಲ್ಲಿ ಕೆ.ಜಿ.ಎಫ್ ಚಿತ್ರದ ಮತ್ತೊಂದು ಸ್ಟಿಲ್ ಬರಲಿದೆ. ಅಲ್ಲಿಯವರೆಗೆ ಈದ್ ಮುಬಾರಕ್!’

ಯಶ್ ಮಾಡಿರೋ ಕೆಲಸಗಳ ಒಂದೇ ಒಂದು ತುಣುಕಿನಷ್ಟಾದರೂ ರಶ್ಮಿಕಾ ಮಾಡಿದ್ರೆ ಸಾಮಾಜಿಕ ಕೆಲಸ ಮಾಡುವುದರ ಹಿಂದಿನ ಕಷ್ಟ ,ಅದಕ್ಕೆ ಬೇಕಿರುವ ಬದ್ಧತೆ ಎಂಥಾದ್ದು ಅನ್ನೋದು ಸ್ವಲ್ಪನಾದ್ರು ಗೊತ್ತಿರ್ತಿತ್ತು ಎಂಬುದು ಯಶ್ ಅಭಿಮಾನಿಗಳ ವಾದ.

-Ad-

Leave Your Comments