ಸರ್ಕಾರ ಸಾಲ ಮನ್ನಾ ಮಾಡಬೇಕು-ಯಶ್

ಸಾಮಾಜಿಕ ಕೆಲಸದಲ್ಲಿ ತೊಡಗಿಕೊಳ್ಳುವ ಯಾರನ್ನೇ ಆದರೂ ಅದರಲ್ಲೂ ಸೆಲೆಬ್ರೆಟಿಗಳನ್ನು ಸಂಶಯದ ದೃಷ್ಟಿಯಿಂದ ನೋಡುವ ಕಾಲವಿದು. ಸಮಾಜ ಸೇವೆ ಅನ್ನುವುದು ಮುಂದಿನ ಅಧಿಕಾರದ ಗದ್ದುಗೆ ಏರಲು ಇಂದಿನ ಬಂಡವಾಳ ಅಂದುಕೊಂಡಿರುವವರೇ ಹೆಚ್ಚು. ಹಾಗಾಗಿ ಕಲಾವಿದನಾಗಿ ತನ್ನ ಬೆಳವಣಿಗೆಯ ಬಗ್ಗೆ ಮಾತ್ರ  ಚಿಂತಿಸದೆ, ಅನ್ನದಾತರ ಪರವಾಗಿ ಮಿಡಿಯುತ್ತಿರುವ ಯಶ್ ಗೆ ಪದೇ ಪದೇ ರಾಜಕೀಯ ಪ್ರವೇಶ ಮಾಡ್ತೀರಾ ಅನ್ನುವಂಥ ಪ್ರಶ್ನೆಗಳು ಎದುರಾಗುತ್ತಿವೆ.

 

ಅದ್ಯಾವುದಕ್ಕೂ ಅಂಜದ ಯಶ್ ಜನಸಾಮಾನ್ಯನ ಬದುಕಿಗೆ ಸ್ಪೂರ್ತಿಯಾಗುವ ಕಾರ್ಯದಲ್ಲಿದ್ದಾರೆ . ಇದಕ್ಕೆ ಮತ್ತೊಂದು ಸಾಕ್ಷಿ ರೈತ ಸಂಚಾರ. ಇಂದು ಚಿತ್ರದುರ್ಗದ ಮುರುಘಾ ಮಠದ ಅನುಭವ ಮಂಟಪದಲ್ಲಿ ಆಯೋಜಿಸಲಾಗಿದ್ದ ರೈತ ಸಂಚಾರ ಕಾರ್ಯಕ್ರಮದಲ್ಲಿ ಭಾಗವಹಿಸುವ ಮುನ್ನ ಯಶ್ ಆಡಿದ ಮಾತುಗಳಿವು .

ಚದುರಿದ ರೈತ ಸಂಘಟನೆಗಳು ಒಂದಾಗಬೇಕಿದೆ. ಇಂಥಾ ಬರದ ಪರಿಸ್ಥಿತಿಯಲ್ಲಿ ಸರ್ಕಾರ ಸಾಲ ಮನ್ನಾ ಮಾಡಬೇಕು. ಒಬ್ಬರ ಮೇಲೆ ಒಬ್ಬರು ಬೆರಳು ತೋರಿಸೋದು ಸರಿಯಲ್ಲ. ಇನ್ನು ಮುಂದೆ ರೈತರು ಸಾಲ ಮನ್ನಾ ಕೇಳದಂತೆ  ವ್ಯವಸ್ಥೆ ಕಲ್ಪಿಸಬೇಕಿದೆ .

 ಮಳೆಗಾಲದ ಹೊತ್ತಿಗೆ ಕೆರೆಗಳ ಹೂಳೆತ್ತಿ ನೀರು ತುಂಬಿಕೊಳ್ಳಲು ಸಿದ್ಧಪಡಿಸಬೇಕು. ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ತ್ವರಿತ ಗತಿಯಲ್ಲಿ ನಡೆಯಲಿ. ಭದ್ರಾ ಕಾಮಗಾರಿ ಇಷ್ಟು ವರ್ಷಗಳ ಕಾಲ ವಿಳಂಬವಾಗಿದ್ದು ದುರದೃಷ್ಟಕರ ಅಂದ್ರು.

ನೀವೂ ಗಮನಿಸಿ ನೋಡಿ .ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಇದುವರೆಗೆ ಬಂದ ಯಾವ ಸ್ಟಾರ್ ನಟರು( ಕನ್ನಡ ಪ್ರಜ್ಞೆ ಬೆಳೆಸಿದ ರಾಜ್ ಕುಮಾರ್ ಅವರನ್ನು  ಹೊರತು ಪಡಿಸಿ ) ಇಷ್ಟು ಸಮತೂಕ,ಸಮುದಾಯ ಪ್ರಜ್ಞೆಯಿಂದ ನಾಡಿಗಾಗಿ ಮಿಡಿದ, ನಡೆದಂತೆ ನುಡಿಯುತ್ತಾ  ಜನರೊಡನೆ ನಿಲ್ಲುತ್ತಿರುವ ನಿಜನಾಯಕನಿಲ್ಲ.

 

-Ad-

Leave Your Comments