ಕೆಜಿಫ್ ನಲ್ಲಿ ಯಶ್ ಪೊಲೀಸ್ ಆಫಿಸರೋ? ಸೈನಿಕನೋ? ಹೋರಾಟಗಾರನೋ?

ಅನುಮಾನವೇ ಬೇಡ. ಕೆಜಿಎಫ್ ಸಿನಿಮಾ ಯಶ್ ಲೈಫಲ್ಲಿ ಸದ್ಯಕ್ಕೆ ಮ್ಯಾಗ್ನಂ ಓಪಸ್. ದೊಡ್ಡ ಬಜೆಟ್, ದೊಡ್ಡ ತಂಡ, ಸುದೀರ್ಘ ಚಿತ್ರೀಕರಣ, ಸೂಪರ್ ಸೆಟ್, ಐದು ಭಾಷೆಯಲ್ಲಿ ನಿರ್ಮಾಣ ಎಲ್ಲವೂ ಸೇರಿ ಕೆಜಿಎಫ್ ಗೆ ಬೇರೆಯದೇ ಆದ ತೂಕ ಒದಗಿ ಬಂದಿದೆ. ಹಾಗಾಗಿ ಕೆಜಿಎಫ್ ಸಿನಿಮಾ ಎಂದರೆ ಸಾಕು ಕನ್ನಡ ಸಿನಿಮಾ ಅಭಿಮಾನಿಗಳ ಕಣ್ಣು ಚುರುಕಾಗುತ್ತದೆ. ಕಿವಿ ನೆಟ್ಟಗಾಗುತ್ತದೆ. ಇದೇ ಸಂದರ್ಭದಲ್ಲಿ ಕೆಜಿಎಫ್ ಚಿತ್ರದ ಕೆಲವು ಶೂಟಿಂಗ್ ಚಿತ್ರಗಳು ಬಿಡುಗಡೆಯಾಗಿವೆ.

ಒಂದರಲ್ಲಿ ಗಡ್ಡಧಾರಿ ಯಶ್ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡರೆ ಇನ್ನೊಂದು ಫೋಟೋದಲ್ಲಿ ಅಚ್ಚ ಬಿಳಿ ವಸ್ತ್ರಧರಿಸಿ ತಲೆಗೊಂದು ಬಿಳಿ ಟೋಪಿ ಇಟ್ಟುಕೊಂಡಿದ್ದಾರೆ. ಆ ಟೋಪಿಯನ್ನು ನಿರ್ದೇಶಕ ಪ್ರಶಾಂತ್ ನೀಲ್ ಸರಿ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಬಿಳಿ ವಸ್ತ್ರ ಒಂದೋ ಟ್ರಾಫಿಕ್ ಪೋಲೀಸರ್ ಧರಿಸುತ್ತಾರೆ ಅಥವಾ ಭಾರತೀಯ ನೌಕಾದಳದ ಸೈನಿಕರು ಧರಿಸುತ್ತಾರೆ. ಹೀಗಾಗಿ ಕೆಜಿಎಫ್ ಸಿನಿಮಾದಲ್ಲಿ ಯಶ್ ಗೆ ಎರಡು ಶೇಡ್ ಪಾತ್ರಗಳಿರುವ ಸಾಧ್ಯತೆ ಇದೆ.

ಇದು ಎಂಭತ್ತರ ದಶಕದ ಕತೆಯಾದ್ದರಿಂದ ಅಲ್ಲದೇ ಕೆಜಿಎಫ್ ನಲ್ಲಿ ನಡೆಯುವ ಕತೆಯಾದ್ದರಿಂದ ಯಶ್ ಒಂದೆಡೆ ಗಣಿಯಲ್ಲಿ ಕೆಲಸ ಮಾಡುತ್ತಾ ಇನ್ನೊಂದೆಡೆ ನೌಕಾದಳದ ಆಫೀಸರ್ ಆಗಿರುವ ಸಾಧ್ಯತೆಯೂ ಇರಬಹುದು. ಅಥವಾ ಖಳನಾಯಕರ ಕಣ್ಣಿಗೆ ಮಣ್ಣೆರಚಲು ನೌಕಾದಳದ ದಿರಿಸು ಧರಿಸಿ ಬಂದಿರಬಹುದು. ಹೀಗೆ ಕೆಜಿಫ್ ಕುರಿತು ನಾನಾ ಲೆಕ್ಕಾಚಾರಗಳು ಶುರುವಾಗಿವೆ.

-Ad-

Leave Your Comments