ಕೆ.ಜಿ.ಎಫ್ ನಲ್ಲಿ ರಾಕಿಂಗ್ ಸ್ಟಾರ್ ಯಶ್ ಖದರ್ ಹೇಗಿದೆ ಗೊತ್ತಾ

ರಾಕಿಂಗ್ ಸ್ಟಾರ್ ಯಶ್ ಬಹುನಿರೀಕ್ಷಿತ ಸಿನಿಮಾ ಕೆ.ಜಿ.ಎಫ್ . ಪ್ರತೀ  ಚಿತ್ರದಲ್ಲೂ ತನ್ನ ಅಭಿನಯ, ಸ್ಟೈಲಿಶ್ ಲುಕ್ ನಿಂದ ಪ್ರೇಕ್ಷಕರಿಗೆ  ಹುಚ್ಚು ಹಿಡಿಸುವ ಯಶ್ ತಮ್ಮ ಹೊಸ ಸಿನಿಮಾದಲ್ಲಿ ಭಾರೀ ಕಟ್ಟುಮಸ್ತಾಗಿ , ಖಡಕ್ಕಾಗಿ ಬರ್ತಿದ್ದಾರೆ ಅನ್ನೋದನ್ನ ಹೇಳ್ತಾ ಇದೆ ಕೆ.ಜಿ.ಎಫ್ ಚಿತ್ರೀಕರಣದ ಚಿತ್ರಗಳು. ಜೊತೆಗೆ ಅಲ್ಲಿರುವ ಗುಡಿಸಲುಗಳು  ,ಹರಿದ ಬಟ್ಟೆ ತೊಟ್ಟ  ಮಕ್ಕಳು ಎಲ್ಲರನ್ನು ನೋಡ್ತಾ ಇದ್ರೆ ಅಮೀರ್ ಖಾನ್ ಸೂಪರ್ ಹಿಟ್ ಸಿನಿಮಾ ಲಗಾನ್ ನ ನೆನಪು ಕಣ್ಮುಂದೆ  ಬರುವಂತಿದೆ .

ಸ್ವತಃ ಯಶ್ ciniadda .com ಗೆ ನೀಡಿರುವ ಮಾಹಿತಿ ಪ್ರಕಾರ ಕನ್ನಡ ಚಿತ್ರರಂಗ ಹಿಂದೆಂದೂ ಕಂಡರಿಯದ ರೀತಿಯಲ್ಲಿ ತೆರೆಯ ಮೇಲೆ ಅದ್ದೂರಿಯಾಗಿ ಬರಲಿದೆ ಕೆ.ಜಿ.ಎಫ್ . ಅಷ್ಟೇ ಅಲ್ಲ ಭಾರತೀಯ ಚಿತ್ರರಂಗ ಕೂಡ ಕೆ.ಜಿ.ಎಫ್ ಕಡೆ ನೋಡುವ ಹಾಗೆ  ಹಾಲಿವುಡ್ ರೇಂಜ್ ನಲ್ಲಿ ಅಂದ್ರೆ ತಾಂತ್ರಿಕವಾಗಿ  ಅದ್ಭುತವಾಗಿ ತರುವ ಸಕಲ ಸಿದ್ಧತೆಗಳು ನಡೆಯುತ್ತಿವೆ. 

ಅಂದಹಾಗೆ ಹೊಂಬಾಳೆ ಫಿಲಂಸ್ ನ  ವಿಜಯ್ ಕಿರಗಂದೂರು ನಿರ್ಮಿಸಿ , ಉಗ್ರಂ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನ ಮಾಡ್ತಾ ಇದ್ದಾರೆ .  ಕೆ.ಜಿ.ಎಫ್  ಚಿತ್ರ ಎಪ್ಪತ್ತರ ದಶಕದಲ್ಲಿ  ಕೆ.ಜಿ.ಎಫ್ ನಲ್ಲಿ ನಡೆದ ನೈಜ ಘಟನೆಯ ಕಥೆಯನ್ನು ಒಳಗೊಂಡಿದೆ . ಯಶ್ ಮಹತ್ವಾಕಾಂಕ್ಷಿ ಯುವಕನ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ. ನಾಯಕಿಯಾಗಿ ಶ್ರೀನಿಧಿ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ.

ಇನ್ನು ಕೆ.ಜಿ.ಎಫ್  ಫಸ್ಟ್ ಲುಕ್ ಹೇಗಿರತ್ತಪ್ಪ ? ನಮ್ಮ ಯಶ್ ಯಾವ ಅವತಾರದಲ್ಲಿ ಕಾಣಿಸಿಕೊಳ್ತಾರೆ ಅಂತ ಮನಸ್ಸಿನಲ್ಲೇ ಬಣ್ಣಬಣ್ಣದ ಕಲ್ಪನೆ ಮಾಡಿಕೊಳ್ತಿರೋ ಅಭಿಮಾನಿಗಳು ಇಲ್ಲಿರೋ ಫೋಟೋಸ್ ನೋಡ್ತಾ ಇನ್ನಷ್ಟು ಖುಷಿ ಪಟ್ಕೊಳ್ತಾ ಇರಿ.  ciniadda.com ಫಾಲೋ ಮಾಡ್ತೀರಿ.

-Ad-

Leave Your Comments