ಗೋರಕ್ಷಕನಾಗುತ್ತಿರುವ ರಾಕಿಂಗ್ ಸ್ಟಾರ್ ಯಶ್!

ಕನ್ನಡ ಸಿನಿಮಾ ರಂಗದಲ್ಲಿ ತನ್ನದೇ ಆದ ಫ್ಯಾನ್ ಫಾಲೋವರ‍್ಸ್ ಕ್ರಿಯೆಟ್ ಮಾಡಿಕೊಂಡಿರುವ ನಟ ಅಂದ್ರೆ ಅದು ರಾಕಿಂಗ್ ಸ್ಟಾರ್ ಯಶ್.. ಇತ್ತೀಚಿಗೆ ಬರ ಪೀಡಿತ ಜಿಲ್ಲೆಗಳಲ್ಲಿ ಕುಡಿಯುವ ನೀರು ಒದಗಿಸಿದ್ದ ಯಶ್ ನೇತೃತ್ವದ ಯಶೋಮಾರ್ಗ ಸಂಸ್ಥೆ ನಂತ್ರ ಕೊಪ್ಪಳ ಜಿಲ್ಲೆಯಲ್ಲಿ ಕೆರಯ ಹೂಳೆತ್ತುವ ಮೂಲಕ ಗಮನ ಸೆಳೆದಿತ್ತು.. ಆ ಸ್ಥಳಕ್ಕೆ ಪತಿಪತ್ನಿ ಸಮೇತವಾಗಿ ತೆರಳಿ ಹೂಳೆತ್ತುವ ಕಾಮಗಾರಿಗೆ ಸ್ವತಃ ಯಶ್ ಚಾಲನೆ ಕೊಟ್ಟಿದ್ರು.. ಸಾಕಷ್ಟು ಪ್ರಶಂಸೆಗಳ ಮಹಾಪೂರವೇ ಹರಿದುಬಂದಿತ್ತು..

ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದು, ರಾಕಿಂಗ್ ಸ್ಟಾರ್ ಯಶ್ ಯಶೋಮಾರ್ಗದ ಮೂಲಕ ಸಮಾಜಮುಖಿ ಕೆಲಸಗಳನ್ನ ಮುಂದುವರಿಸಿದ್ದಾರೆ.. ಭೀಕರ ಬರಗಾಲ ಎದುರಿಸುತ್ತಿರುವ ಅನ್ನದಾತರ ಬೆನ್ನಿಗೆ ನಿಂತಿರುವ ಯಶ್.. ಜಾನುವಾರುಗಳ ಮೇವಿನ ಕೊರತೆ ನೀಗಿಸಲು ಮುಂದಾಗಿದ್ದಾರೆ.. ಕೊಳ್ಳೆಗಾಲ ಸಮೀಪದ ಮಲೆಮಹದೇಶ್ವರ ಬೆಟ್ಟ ಹಾಗು ಅಲ್ಲಿನ ಹಲವು ಪ್ರದೇಶಗಳಿಗೆ ತೆರೆಳಿ ಜಾನುವಾರುಗಳಿಗೆ ಮೇವಿನ ಸಮಸ್ಯೆಯನ್ನು ಪರಿಹರಿಸಲು ಮುಂದಾಗಿದ್ದಾರೆ.. ಇಲ್ಲಿನ ಸಮಸ್ಯೆ ಬಗ್ಗೆ ಮಾಧ್ಯಮದ ಬಂದ ವರದಿ ಹಾಗು ವಿಡಿಯೋ ನೊಡಿ ಮನನೊಂದಿದ್ದ ಯಶ್, ಗೋಶಾಲೆ ರೀತಿಯಲ್ಲೇ ಯಶೋಮಾರ್ಗ ಮೂಲಕ ಕೆಲಸ ಮಾಡಲು ಸಜ್ಜಾಗಿದ್ದಾರೆ..

ಈ ಕೆಲಸಕ್ಕೆ ಸರ್ಕಾರವನ್ನು ವಿಶ್ವಾಸಕ್ಕೆ ತೆಗೆದುಕೊಂಡಿರುವ ನಟ ಯಶ್, ಚಾಮರಾಜನಗರ ಸಂಸದ ಧೃವನಾರಾಯಣ್ ಹಾಗೂ ಪಶುಸಂಗೋಪನಾ ಸಚಿವ ಎ ಮಂಜು ಜೊತೆ ಮಾತನಾಡಿ ಸಹಕಾರ ಕೋರಿದ್ದಾರೆ. ಇಷ್ಟೆಲ್ಲಾ ಮಾಹಿತಿಯನ್ನು ಸ್ವತಃ ಯಶ್ ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಬರೆದುಕೊಂಡಿದ್ದಾರೆ.. ಯಾವುದೇ ಪ್ರಚಾರ ಬೇಕಿಲ್ಲ ಎನ್ನುವ ಸ್ಟೃಟ್ ಫಾರ್ವಡ್ ಹುಡುಗ ಯಶ್, ಸದ್ದಿಲ್ಲದೇ ಸಮಾಜಮುಖಿ ಕೆಲಸದಲ್ಲಿ ತೊಡಗಿದ್ದಾರೆ.. ಯಶ್ ಅವರ ಈ ಹೊಸ ಪ್ರಯತ್ನಕ್ಕೆ ಯಶಸ್ಸು ಸಿಗಲಿ ಎಂಬುದು ಸಿನಿಅಡ್ಡ ಆಶಯ..

ಜೋಮ, ಮಂಡ್ಯ

-Ad-

Leave Your Comments