ದುಬಾರಿ ವೆಚ್ಚದ ಮದುವೆಗೆ ತೆರಿಗೆ ಹಾಕಿದರೆ ಕಟ್ಟೋಣ ಬಿಡಿ – ಯಶ್

ಕನ್ನಡ ಚಿತ್ರರಂಗದ ಜೊತೆಗೆ ಯಶ್ -ರಾಧಿಕಾ ಪಂಡಿತ್ ಅಭಿಮಾನಿಗಳ ದಂಡು ವಿವಾಹಮಹೋತ್ಸವದ ಶುಭಘಳಿಗೆಗಳನ್ನು ಕಣ್ತುಂಬಿಕೊಳ್ಳಲು ಕಾತರಿಸುತ್ತಿದೆ.

yash-radhika

ಬಂಧುಬಳಗ, ಸ್ನೇಹಿತರು ,ಹಿತೈಷಿಗಳು, ಕಲಾವಿದರು , ಅಭಿಮಾನಿಗಳು ಮೇಳೈಸುವ ಮದುವೆ ಅದ್ಧೂರಿಯಾಗುವುದರಲ್ಲಿ ಎರಡು ಮಾತಿಲ್ಲ . ಈ ಮಧ್ಯೆ ದುಬಾರಿ ವೆಚ್ಚದ ವಿವಾಹಕ್ಕೆ  ತೆರಿಗೆ ವಿಧಿಸುವ ಸರ್ಕಾರದ ಪ್ರಸ್ತಾವದ ಬಗ್ಗೆ ಯಶ್ ಪ್ರತಿಕ್ರಿಯೆ( ಟೈಮ್ಸ್ ಗ್ರೂಪ್ ವರದಿ  )  ಹೇಗಿರಬಹುದು ಅನ್ನುವ ಕುತೂಹಲಕ್ಕೆ ಉತ್ತರವಿಲ್ಲಿದೆ.

yash-2890

ಮದುವೆ ಅನ್ನುವುದು ಖಾಸಗಿ ವಿಷಯ. ಅದಕ್ಕಾಗಿ ಎಷ್ಟು ವ್ಯಯಿಸಬೇಕು ? ಎಲ್ಲಿ ಹೇಗೆ ಮಾಡ್ಬೇಕು ? ಅದೆಲ್ಲ ಅವರವರಿಗೆ ಬಿಟ್ಟ ವಿಚಾರ. ಇಷ್ಟೇ ಹಣ ಖರ್ಚು ಮಾಡ್ಬೇಕು ಅಂತ ಸರ್ಕಾರ ಕಡಿವಾಣ ಹೇರೋಕ್ಕಾಗಲ್ಲ. ನೀವು ಶ್ರಮವಹಿಸಿ ಸಂಪಾದಿಸಿ , ಸರ್ಕಾರಕ್ಕೆ ತೆರಿಗೆ ಹಣ ಕಟ್ಟಿದ ಮೇಲೆ ನಿಮಗೆ ಬೇಕಾದಂತೆ ನಿಮ್ಮ ದುಡ್ಡನ್ನು ಬಳಸಿಕೊಳ್ಳುವುದನ್ನು ಯಾರೂ ತಡೆಯೋದಿಕ್ಕೆ ಆಗುವುದಿಲ್ಲ. ದೊಡ್ಡ ದೊಡ್ಡ ಮದುವೆಗಳಲ್ಲಿ  ಆಹಾರ , ನೀರು ವೇಸ್ಟ್ ಮಾಡದಂತೆ , ಕಸ ಹೆಚ್ಚಿಸದಂತೆ ಕಡಿವಾಣ ಹಾಕುವುದು ಒಳ್ಳೆಯ ಬೆಳವಣಿಗೆ.  

ಸರ್ಕಾರ ದುಬಾರಿ ಮದುವೆಗೆ ತೆರಿಗೆ ವಿಧಿಸಿದರೆ ಕಟ್ಟೋಣ . ಆ ಹಣವನ್ನ ಸರ್ಕಾರ ಒಳ್ಳೆಯ ಕೆಲಸಗಳಿಗೆ ಬಳಸಿಕೊಳ್ಳಲಿ . 

  • ಅಂದಹಾಗೆ ದುಬಾರಿ ವೆಚ್ಚದ ಮದುವೆಗಳಿಗೆ ತೆರಿಗೆ ಇನ್ನು ಜಾರಿಯಾಗಿಲ್ಲ .  ಪ್ರಸ್ತಾವನೆಯ ಹಂತದಲ್ಲಿದೆ.

 

-Ad-

Leave Your Comments