ಫಲಿಸಿತು ಒಲವಿನ ಪೂಜಾಫಲ ! ನೆರವೇರಿತು ಯಶ್-ರಾಧಿಕಾ ಕಲ್ಯಾಣ!!

ಯಶ್-ರಾಧಿಕಾ ಪಂಡಿತ್ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿ  ಬೆಳಿಗ್ಗೆ 11.30ರಿಂದ 12.30ರ ಅಭಿಜಿತ್ ಲಗ್ನದಲ್ಲಿ ದಾಂಪತ್ಯ ಜೀವನಕ್ಕೆ ಅಡಿಯಿಟ್ಟಿದ್ದಾರೆ.

ಪ್ರಕೃತಿ ಮಡಿಲಲ್ಲಿ ಮಾಂಗಲ್ಯ ಧಾರಣೆ ಆಗಬೇಕು ಅನ್ನುವ ರಾಧಿಕಾ ಪಂಡಿತ್ ಆಸೆಯಂತೆ ಹಸಿರು ವನದಂತಿರುವ ವಾತಾವರಣದಲ್ಲಿ, ಅರುಣ್ ಸಾಗರ್ ರೂಪಿಸಿದ ಸೋಮನಾಥೇಶ್ವರ ಮಂಟಪದಲ್ಲಿ ಧಾರಾಮಹೂರ್ತ ನೆರವೇರಿದೆ.yash-marriage-mantapaಮಧುಮಗ ಯಶ್ ಒಕ್ಕಲಿಗ ಸಂಪ್ರದಾಯದಂತೆ ಬಿಳಿಯ ರೇಷ್ಮೆ ವಸ್ತ್ರ ,ಪೇಟ ತೊಟ್ಟಿದ್ದರೆ, ಕೊಂಕಣಿ ಬ್ರಾಹ್ಮಣ ವಧು ರಾಧಿಕಾ ಬಂಗಾರಬಣ್ಣದ ಸೀರೆಯುಟ್ಟು ಮಹಾಲಕ್ಷ್ಮಿಯಂತೆ ಕಂಗೊಳಿಸುತ್ತಿದ್ದರು.

img-20161209-wa0085

ಮದುವೆಯ ಮಂಟಪದಲ್ಲಿ ಮಾಂಗಲ್ಯ ಧಾರಣೆಗೂ ಮುನ್ನ ಯಶ್ -ರಾಧಿಕಾ ಸಂಬಂಧ ಮಾಲೆ ಹಾಕುವ ದೃಶ್ಯ ನೋಡಿದವರಿಗೆ ತಮ್ಮ ತಮ್ಮ ಮದುವೆಯ ಮಂಗಳ ಘಳಿಗೆಗಳು ನೆನಪಾಗುವುದಂತೂ ದಿಟ.  ಒಕ್ಕಲಿಗರಲ್ಲಿ ಒಂದು ಮಾತಿದೆ ಜೀರಿಗೆ ಹಾಕುವಾಗ , ಸಂಬಂಧ ಮಾಲೆ ಬದಲಾಯಿಕೊಳ್ಳುವಾಗ ಯಾರು ಮೊದಲು ಮಾಲೆ ಹಾಕುತ್ತಾರೋ ಜೀವನ ಪೂರ್ತಿ ಅವರ ಮಾತೇ ನಡೆಯುವುದು. ಯಶ್-ರಾಧಿಕಾ ಸಂಬಂಧ ಮಾಲೆ ಹಾಕುವಾಗ ನಾ ಮೊದಲು ತಾ ಮೊದಲು ಅಂತ ಸರಸವಾಡಿದರು. ಕೊನೆಗೂ ಗೌಡರ ಗಂಡು ರಾಕಿಂಗ್ ಸ್ಟಾರ್ ಕೈ ಮೇಲಾಗಿ ರಾಧಿಕಾ ಕೊರಳು ಸೇರಿತು ಪ್ರೇಮ ಮಾಲೆ!!

ಕಣ್ಣು ಕಣ್ಣು ಕಲೆತಾಗ.. 

ನಂತರದ ದೃಶ್ಯ ಒಲಿದ ಜೀವಗಳ ಕಣ್ಣಾಟದ್ದು. ಒಬ್ಬರ ಹೆಗಲ ಮೇಲೆ ಮತ್ತೊಬ್ಬರು ಕೈಯಿಟ್ಟು ಪುರೋಹಿತರು ಹೇಳಿಕೊಟ್ಟ ಮಂತ್ರ  ಹೇಳುವ ಹೊತ್ತು. ಆಹಾ.. ನೀವು ನೋಡಬೇಕು ಆ ಕ್ಷಣವನ್ನು. ಅವರಿಬ್ಬರ ಕಣ್ಣಿನಾಟವನ್ನು. “ಕಣ್ಣು ಕಣ್ಣು ಕಲೆತಾಗ ಮನವು ಉಯ್ಯಾಲೆಯಾಗಿದೆ ತೂಗಿ .ಹೃದಯ ಬಿಡಲಾರೆ ಎಂದಿದೆ ಕೂಗಿ ” ಎನ್ನುತ್ತಿದ್ದವು ಆ ಜೋಡಿ ಕಣ್ಣುಗಳು !! “ಒಲಿದ ಜೀವ ಜೊತೆಯಲಿರಲು ಬಾಳು ಸುಂದರ” ಎನ್ನುವಂತಿತ್ತು ಅವರಿಬ್ಬರ ಕಣ್ಣೋಟ!! ಪ್ರೀತಿಸಿದ ಜೀವ ಜೊತೆಗಿರಲು ಸ್ವರ್ಗಕ್ಕೆ ಕಿಚ್ಚಲ್ಲದೆ ಮತ್ತೇನು !!

img-20161209-wa0084img-20161209-wa0085

ಮಾಂಗಲ್ಯ೦ ತಂತು ನಾನೇನ..

ಮಾಂಗಲ್ಯ ಧಾರಣೆಯ ಘಳಿಗೆಯಲ್ಲಿ ಎಷ್ಟೋ ಕಡೆ ಗಂಟಿಕ್ಕಿದ ಮುಖ , ಆಕಾಶ ಕಳಚಿ  ಬಿದ್ದಂತೆ ಆತಂಕದ ಮುಖ ಹೊತ್ತ  ಗಂಡು ತಲೆ ಎತ್ತದ ಹೆಣ್ಣು ಇಂಥವು ಸಾಮಾನ್ಯ . ಪ್ರೀತಿಸಿ ಮದುವೆಯಾಗುವ ಕಡೆ ಸ್ವಲ್ಪ ಸಲಿಗೆಯ ವಾತಾವರಣ ಇರುವುದುಂಟು. ಯಶ್- ರಾಧಿಕಾ ಪ್ರೀತಿಸಿ , ಮನೆಯವರನ್ನು ಒಪ್ಪಿಸಿ ಮದುವೆಯಾಗುವಾಗ ಕೇಳಬೇಕೆ ?! ಯಶ್ ನಗುನಗುತಾ ತಾಳಿ ಕಟ್ಟಿದರೆ ,ರಾಧಿಕಾ ನಾಚಿಕೆ ತುಂಬಿದ ನಗುವಲ್ಲಿ ಸಡಗರದಿಂದ ಮಾಂಗಲ್ಯ ಕಟ್ಟಿಸಿಕೊಂಡ್ರು . ನಗುನಗುತ ನಲಿನಲಿದು ಪತಿ-ಪತ್ನಿಯಾದರು ಯಶ್-ರಾಧಿಕಾ . 

ಶುಭ ಹರಸಲು ಬಂದ ಗಣ್ಯರು

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ , ಪ್ರೇಮ ಕೃಷ್ಣ ,ಮಧು ಬಂಗಾರಪ್ಪ,ಚೆಲುವರಾಯಸ್ವಾಮಿ, ಜಮೀರ್ ಅಹಮದ್,ವಿ ಸೋಮಣ್ಣ , ಭಾರತಿ ವಿಷ್ಣುವರ್ಧನ್ ,ಜಯಂತಿ ,ಶ್ರೀನಾಥ್ ದಂಪತಿ , ಅನಂತ್ ನಾಗ್ , ಶಿವರಾಜ್ ಕುಮಾರ್ ದಂಪತಿ ,ಪುನೀತ್ ದಂಪತಿ , ರಾಘವೇಂದ್ರ ರಾಜ್ಕುಮಾರ್ ದಂಪತಿ ,ಸುದೀಪ್ ,ರವಿಚಂದ್ರನ್ ,ಗಿರಿಜಾ ಲೋಕೇಶ್ ,ದೊಡ್ಡಣ್ಣ ಅನಿರುದ್ಧ,ಶ್ರೀ ಮುರಳಿ ಇನ್ನಿತರರು

ಕುಟುಂಬಸ್ಥರು ಹಾಗು ಆಪ್ತರ ಸಮ್ಮುಖದಲ್ಲಿ ತಾಜ್ ಎಂಡ್ ನ ಉದ್ಯಾನವನದ ಹಿತವಾದ ತಂಗಾಳಿಯಲ್ಲಿ ಯಶ್-ರಾಧಿಕಾ ಹೊಸಬಾಳಿನ ಸುಮುಹೂರ್ತ ನೆರವೇರಿದೆ.

ಹೊಸಬಾಳಿನ ಹೊಸಿಲಲಿ ನಿಂತಿರುವ ಹೊಸಜೋಡಿಗೆ ಶುಭವಾಗಲಿ!! ಯಶ್ -ರಾಧಿಕಾ ಬಾಳು ಬಂಗಾರವಾಗಲಿ.

-ಭಾನುಮತಿ ಬಿ ಸಿ

 

 

-Ad-

Leave Your Comments