“ಭೂಮಿ ತಾಯಿಯನ್ನು ನಂಬಿ” -ಯಶ್

ಅದು ಮಂಡ್ಯದ ಉತ್ಸಾಹಿ ಯುವಪಡೆಯನ್ನು ಕಟ್ಟಿದ ಡಾ|| ಅನಿಲ್ ಆನಂದ್ ನೇತೃತ್ವದ ಅದ್ದೂರಿ ವೇದಿಕೆ. ಮೂರು ವರುಷಗಳು ಮಂಡ್ಯದ ಜನ ಚಪ್ಪರಿಸಿ ತಿಂದು ಮುಂದಿನ ಮೇಳಕ್ಕಾಗಿ ಕಾದು.. ಕಾದು.. ಸೇರಿದ್ದ ಮಯ್ಯಾಸ್ ಬಹುರುಚಿ ಮೇಳ-ಯುವಯಾನ. ನಾಲ್ಕು ದಿನದ ಮೇಳದ ಕೊನೆಗೆ ರಾಕಿಂಗ್ ಸ್ಟಾರ್ ಬರಲಿದ್ದಾರೆ ಅನ್ನುವ ಘೋಷಣೆಗೇ  ಜನ ಜೈಕಾರ ಹಾಕಿ ಚಪ್ಪಾಳೆ ಹೊಡೆದುಕೊಂಡು ಯಶ್ ಬರುವಿಕೆಗಾಗಿ ಕಾದು ಕುಳಿತಿದ್ದರು. ಮಂಡ್ಯದ ಜನವೇ ಹಾಗೆ ಊಟವಾಗಲಿ, ಪ್ರೀತಿಯಾಗಲಿ ಕೊಟ್ಟರೆ ಭರಪೂರವೇ.

mandya yash

ಯಶ್ ವೇದಿಕೆಗೆ ಬರುತ್ತಿದ್ದ ಹಾಗೆ ಅಣ್ಣ್ತಮ್ಮ ಅಂದುಕೊಂಡು, ಶಿಳ್ಳೆ ಹೊಡಿತಾ, ಜೈಕಾರ ಹಾಕ್ತಾ ನಮ್ಮೂರ ಭಾಷೆಯನ್ನ ಪಿಕ್ಚರ್ ನಲ್ಲಿ  ಪಸಂದಾಗಿ ಮಾತಾಡಿ ಮಾತಾಡಿ ಫೇಮಸ್ ಮಾಡ್ತಿರೋ ಪುರುಷೋತ್ತಮ ಅಂತ ಜನ ಸ್ವಾಗತಿಸಿಯೇ ಬಿಟ್ರು. ಒಂದ್ ಕಡೆ ಮಾಜಿ ಪ್ರಧಾನಿ ದೇವೇಗೌಡ್ರು ಮತ್ತೊಂದು ಕಡೆ ಮಾಜಿ ಸಂಸದ ಮಾದೇಗೌಡರು ಹಾಲಿ ಸಂಸದ ಪುಟ್ಟರಾಜು ನಡುವೆ ಬೆಳಗುತ್ತಿದ್ದ ಯಶ್ ಮೈಕ್ ಹಿಡಿದು ಮಾತಿಗೆ ನಿಂತ್ರು.

yash mandya1

ಬಂತಲ್ಲ ಮುತ್ತಿನಂಥ  ಮಾತುಗಳು !!

ಭೂ ತಾಯಿಯನ್ನು ನಂಬಿದರೆ ಎಂದಿಗೂ ಕೈಬಿಡುವುದಿಲ್ಲ. ವ್ಯವಸಾಯದಿಂದ ಎಂದಿಗೂ ಯುವಕರು ದೂರಾಗಬಾರದು.ಕೆಲಸಕ್ಕಾಗಿ ನಗರಕ್ಕೆ ಹೋಗೋ ಬದಲು ಕೃಷಿಯಲ್ಲಿ ತೊಡಗಿ ಸ್ವಾಭಿಮಾನಿಗಳಾಗಿ ಬದುಕಿ ಅಂದ್ರು.

yashomaarga

ಯಶೋ ಮಾರ್ಗದ ಮೂಲಕ ಬರಪೀಡಿತ ಹಳ್ಳಿಗಳಿಗೆ ನೀರುಣಿಸಿದ ಯಶ್ ಇಲ್ಲಿಯೂ ನೀರಿನ ಮಹತ್ವವನ್ನೇ ಹೇಳಿದರು. ರೈತರು ಸ್ವಾಭಿಮಾನದಿಂದ ಬದುಕು ನಡೆಸಲು ಅವರಿಗೆ ನೀರು ಬೇಕು. ಬೇರೆ  ಯೋಜನೆಗಳಿಗಿಂತ ನೀರು ಕೊಡುವುದೇ ಮುಖ್ಯ ಅಂದ್ರು.

ನಾನಿದ್ದೇನೆ ನಿಮ್ಮೊಂದಿಗೆ

yash mandya2

ನನ್ನ ಚಿತ್ರಗಳಲ್ಲಿ ಮಂಡ್ಯದ ಭಾಷೆಯನ್ನು ಹೆಚ್ಚು ಬಳಸಿಕೊಳ್ಳಲಾಗಿದೆ. ಕಾವೇರಿ ಹೋರಾಟಕ್ಕೆ ನಾನು ಕೈ ಜೋಡಿಸುತ್ತೇನೆ. 

ಯಶ್ ಮಾತಿಗೆ ಭಾವುಕರಾದ ಜನ ಕಿವಿಗಡಚ್ಚಿಕ್ಕುವ ಚಪ್ಪಾಳೆಯ ಸುರಿಮಳೆಗೈದರು.

ಮಂಡ್ಯ ಯೂತ್ ಗ್ರೂಪ್ ಯಶ್ ರಂಥ ನವಯುವಕರನ್ನ ಗೌರವಿಸುವುದರ ಜೊತೆಗೆ ಇಳಿವಯಸ್ಸಿನಲ್ಲಿ ತಿಥಿ ಚಿತ್ರದ ಮೂಲಕ ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿದ ಸೆಂಚುರಿಗೌಡ -ಗಡ್ಡಪ್ಪನನ್ನೂ  ಗೌರವಿಸಿತು.

centuri gowdagaddappa

ಬಹುರುಚಿ ಮೇಳ ತರಹೇವಾರಿ ಅತ್ಯುತ್ತಮ ತಿನಿಸುಗಳು,ಮೇಲುಕೋಟೆ ಪುಳಿಯೋಗರೆ, ಆದಿವಾಸಿಗಳ ದಂಬು ಬಿರಿಯಾನಿ, ಉತ್ತರಕರ್ನಾಟಕದ ಬಿಸಿ ಬಿಸಿ ಬಕ್ರಿ,ಹೆಣಗಾಯಿ, ಬಾಂಬೆ ಪಾವ್ ಬಾಜಿ.. ಹೀಗೆ  ಬಾಯಲ್ಲಿ ನೀರೂರಿಸುವ ಭೂರೀ ಭೋಜನ ಕೊಟ್ಟಿದ್ದಲ್ಲದೆ ವೇದಿಕೆಯಲ್ಲೂ ಚಿತ್ರರಂಗದ ನಟ-ನಟಿ- ಗಾಯಕರಿಂದ ರಂಗು ರಂಗು ದುನಿಯಾ ಸೃಷ್ಟಿಸಿತ್ತು.

 

-Ad-

Leave Your Comments