ನುಡಿದಂತೆ ನಡೆದ ಅಣ್ತಮ್ಮ- ಕೊಳ್ಳೇಗಾಲಕ್ಕೆ ಬಂದ ಯಶ್ 

ಸಾಮಾನ್ಯ ಜನ ನಾವು. ದೇವರನ್ನು ನಂಬಿರುತ್ತೇವೆ. ಯಾವತ್ತೋ ಒಂದು ದಿನ ಯಾವನೋ ಒಬ್ಬ ಅವಧೂತ ಬಂದು ನಮ್ಮೆಲ್ಲಾ ಕಷ್ಟಗಳನ್ನು ಪರಿಹರಿಸುತ್ತಾನೆ ಎಂದು ನಂಬಿರುತ್ತೇವೆ. ಆದರೆ ಯಾರೂ ಬರುವುದಿಲ್ಲ. ಹಾಗಂತ ನಾವು ನಂಬುವುದನ್ನು ನಿಲ್ಲಿಸುವುದಿಲ್ಲ.
 
ಇಂಥಾ ಹೊತ್ತಲ್ಲಿ ಆಪತ್ಬಾಂಧವನಂತೆ ಬಂದಿದ್ದು ಯಶ್ ಅಂತ ಹೇಳಿದರೆ ತಪ್ಪಾಗಲಿಕ್ಕಿಲ್ಲ ಅನ್ನಿಸುತ್ತದೆ. ಒಂದೆಡೆ ತಲ್ಲೂರು ಕೆರೆಯಲ್ಲಿ ನೀರು ಹರಿಯಲು ಕಾರಣರಾದರು. ಈಗ ಕೊಳ್ಳೇಗಾಲದಲ್ಲಿ ದನ ಕರುಗಳು ಹಸಿವಿನಿಂದ ಸಾಯುತ್ತಿವೆ ಅಂತ ಗೊತ್ತಾದ ಕೂಡಲೇ ಅದಕ್ಕಾಗಿ ಮಿಡಿದರು. ನಿನ್ನೆ ಫೇಸ್ ಬುಕ್ಕಲ್ಲಿ ಸ್ಟೇಟಸ್ ಹಾಕಿದ್ದ ಯಶ್ ಅಷ್ಟಕ್ಕೆ ನಿಲ್ಲಲಿಲ್ಲ.
 
ಇವತ್ತು ಖುದ್ದಾಗಿ ರಾಧಿಕಾ ಜೊತೆ ಬೆಟ್ಟದ ತಪ್ಪಲಿನಲ್ಲಿರುವ ವಡ್ಕೆಹಳ್ಳ ಎಂಬ ಗ್ರಾಮದ ಒಂದು ಗೋ ಶಾಲೆಗೆ ಭೇಟಿ ನೀಡಿ ಗೋವುಗಳ ಪರಿಸ್ಥಿತಿ ಅವಲೋಕಿಸಿದ್ದಾರೆ. ಆ ಮೂಲಕ ತಾನು ನುಡಿದಂತೆ ನಡೆದಿದ್ದಾರೆ. ಎಲ್ಲರಿಗೂ ಮಾದರಿಯಾಗಿದ್ದಾರೆ. ಯಶ್ ನಿಮಗೆ ಒಳ್ಳೆಯದಾಗಲಿ. ಇನ್ನಷ್ಟು ಒಳ್ಳೆಯ ಕೆಲಸ ಮಾಡುವ ಶಕ್ತಿ ಸಿಗಲಿ.
-Ad-

Leave Your Comments